ಇಡೀ ಕರ್ನಾಟಕ ಅವರ ಹಿಂದೆ ಇದೆ ಅನ್ನೋ ಥರ ತೋರಿಸಿಕೊಳ್ತಿದ್ದಾರೆ : ಇಂದ್ರಜಿತ್

0
29

‘ಚಾಲೆಂಜಿಂಗ್ ಸ್ಟಾರ್‌’ ದರ್ಶನ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ! ಈ ಸಂಬಂಧ ಮಾಹಿತಿ ನೀಡಿದ್ದ ಅವರು, ಇಂದು (ಜು.19) ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ಏನೋ ಇಡೀ ಕರ್ನಾಟಕ ಅವರ ಹಿಂದೆ ಇರೋ ತರಹ ಮಾಡ್ತಾ ಇದ್ದಾರೆ. ನಾವು ಮುಂದುವರಿದಿದ್ದೇವೆ. ಇವೆಲ್ಲ ವರ್ಕ್ಔಟ್ ಆಗಲ್ಲ’ ಎಂದಿದ್ದಾರೆ.


‘ಡಿಸಿಪಿ ಶ್ರೀನಾಥ್ ಜೋಷಿ ಅವರು ತಕ್ಷಣವೇ ದೂರನ್ನು ತೆಗೆದುಕೊಂಡಿದ್ದಾರೆ. ಅವರ ಟೆಕ್ನಿಕಲ್ ತಂಡ ಈಗಾಗಲೇ ಕಾರ್ಯಪ್ರವತ್ತರಾಗಿದ್ದಾರೆ. ನನ್ನ ಜೊತೆಗೆ ಅಧಿಕಾರಿಗಳು ಇರುವಾಗಲೇ ಕೆಲವರು ವಿಡಿಯೋ ಕಾಲ್ ಮಾಡಿದ್ರು. ಆದರೆ, ಖಾಕಿಯನ್ನು ನೋಡುತ್ತಲೇ ಓಡಿಹೋಗಿದ್ದಾರೆ. ಶ್ರೀನಾಥ್ ಜೋಷಿ ಮತ್ತು ತಂಡ ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಅವರಿಗೆ ಧನ್ಯವಾದಗಳು. ಇನ್ನೊಂದೆರಡು ದಿನಗಳಲ್ಲಿ ಪೂರ್ಣ ಮಾಹಿತಿ ನೀಡಲಿದ್ದಾರೆ’ ಎಂದು ಇಂದ್ರಜಿತ್ ಮಾಹಿತಿ ನೀಡಿದ್ದಾರೆ.


‘ಯಾರೇ ಆಗಲಿ ಗೌರವಯುತವಾಗಿ ನಡೆದುಕೊಳ್ಳಬೇಕು, ಭಾಷೆಯಲ್ಲಿ ಸೌಜನ್ಯ ಇರಬೇಕು. ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಇರಬೇಕು. ಮಾತನಾಡುವಾಗ ಹಿಡಿತ ಇರಬೇಕು. ಟ್ರೋಲ್ ಮಾಡೋದು, ಅವಾಚ್ಯ ಶಬ್ಧಗಳಿಂದ ಬೈಯೋದು, ಏನೋ ಇಡೀ ಕರ್ನಾಟಕ ಅವರ ಹಿಂದೆ ಇರೋ ತರಹ ತೋರಿಸಿಕೊಳ್ಳುತ್ತಿದ್ದಾರೆ. ನಾವು ಇದನ್ನೆಲ್ಲ ನೋಡಿದ್ದೇವೆ. ನಾವು ಮುಂದುವರಿದಿದ್ದೇವೆ. ಇವೆಲ್ಲ ವರ್ಕ್ಔಟ್ ಆಗಲ್ಲ. ಯಾರೇ ಆಗಲಿ, ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು’ ಎಂದಿದ್ದಾರೆ ಇಂದ್ರಜಿತ್
ಇನ್ನು, ಸೈಬರ್ ಕ್ರೈಮ್ ಪೊಲೀಸರ ಭೇಟಿಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಇಂದ್ರಜಿತ್, ‘ದರ್ಶನ್ ಅವರ ಹಿಂಬಾಲಕರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ದರ್ಶನ್ ಹಿಂಬಾಲಕರು ಸತತವಾಗಿ ನನಗೆ ಫೋನ್ ಮಾಡುತ್ತಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ. ಕಳೆದ 24 ಗಂಟೆಗಳಿಂದ ಫೋನ್‌ ಮೂಲಕ, ವಾಟ್ಸಾಪ್ ಮೂಲಕ, ವಿಡಿಯೋ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಅಶ್ಲೀಲ ಪದ ಬಳಕೆ ಮಾಡುತ್ತಿದ್ದಾರೆ. ಅಶ್ಲೀಲವಾಗಿ ಟ್ರೋಲ್ ಮಾಡುತ್ತಿದ್ದಾರೆ. 25-30 ಜನ ಪದೇ ಪದೇ ಫೋನ್ ಮಾಡುತ್ತಿದ್ದಾರೆ. ಅದದೇ ನಂಬರ್‌ಗಳ ಮೂಲಕ ಸತತವಾಗಿ ಫೋನ್ ಮಾಡುತ್ತಲೇ ಇದ್ದಾರೆ. ರಾತ್ರಿ-ಹಗಲು ಬಿಡದೆ ಫೋನ್ ಮಾಡುತ್ತಿದ್ದಾರೆ. ದರ್ಶನ್ ಕುರಿತಾದ ಪ್ರಕರಣದ ಬಗ್ಗೆ ವಕೀಲರು ಕಾನೂನಿನ ಚೌಕಟ್ಟಿನಲ್ಲಿ ಹ್ಯಾಂಡಲ್ ಮಾಡುತ್ತಾರೆ. ಅದರ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಪ್ಲೈಯರ್ ಅಸೋಸಿಯೇಷನ್, ಶಿವಮೊಗ್ಗ ಸಪ್ಲೈಯರ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನನ್ನ ಪರವಾಗಿ ಅಭಿನಂದನೆಗಳು. ನಾನೀಗ ಸೈಬರ್ ಕ್ರೈಮ್‌ಗೆ ದೂರು ಕೊಡುತ್ತಿದ್ದೇನೆ’ ಎಂದಿದ್ದರು.

LEAVE A REPLY

Please enter your comment!
Please enter your name here