ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ

1
32

ಇಂದಿನಿಂದ ನಮ್ಮ ಮೆಟ್ರೋ ಸಂಚಾರ ರಾತ್ರಿ 9 ಗಂಟೆಯವರೆಗೂ ಸಂಚರಿಸಲಿದೆ.ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವು ಬಾರಿ ನಮ್ಮ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಇಲ್ಲಿಯವರೆಗೆ ರಾತ್ರಿ 8 ಗಂಟೆ ವರೆಗೆ ಮಾತ್ರ ಸೇವೆ ಇತ್ತು, ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ ದಿನದಲ್ಲಿ 14 ತಾಸುಗಳ ಮೆಟ್ರೋ ರೈಲು ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ದಟ್ಟಣೆ ಅವಧಿಯಲ್ಲಿ ಪ್ರತಿ ಐದು ನಿಮಿಷಕ್ಕೊಂದು, ಸಾಮಾನ್ಯ ಅವಧಿಯಲ್ಲಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ. ಇತ್ತೀಚಿಗಷ್ಟೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾಗಿ ಇತ್ತೀಚಿಗಷ್ಟೇ ಅಂಜುಂ ಪರ್ವೇಜ್ ನೇಮಕವಾಗಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್​ ಅವರನ್ನು ಬೆಂಗಳೂರು ಮೆಟ್ರೋ ಎಂಡಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಪರ್ವೇಜ್, ಕರ್ನಾಟಕ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರದಿಂದ ಬಿಎಮ್​ಆರ್​ಸಿಎಲ್ ಎಂಡಿ ಆಗಿ ನೇಮಕಗೊಂಡಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿಗಾಗಿ 350 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದಿಂದಾಗಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಮಾರ್ಗ ಕಾಮಗಾರಿ ಪುನಾರಂಭವಾಗಲಿದೆ.

ಆದರೆ ಷರತ್ತೊಂದನ್ನು ವಿಧಿಸಿತ್ತು, ಅದರ ಬದಲಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಸೂಚಿಸಲಾಗಿದೆ ನಾಗವಾರ-ಗೊಟ್ಟಿಗೆರೆ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿರುವ ಹೈಕೋರ್ಟ್, ಅದಕ್ಕೆ ಪರಿಹಾರವಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಬಿಎಂಆರ್‌ಸಿಎಲ್‌ಗೆ ಆದೇಶಿಸಿದೆ.

 

 

1 COMMENT

LEAVE A REPLY

Please enter your comment!
Please enter your name here