ಇದು ಟಾರ್ಚರ್ ಮ್ಯೂಸಿಯಂ… ಇಲ್ಲಿರೋ ‘ ಚಿತ್ರಹಿಂಸೆ’ ಸಾಧನಗಳನ್ನು ನೋಡಿದ್ರೆ ಶಾಕ್ ಆಗ್ತೀರಿ..!

0
173

ಈ ಟಾರ್ಚರ್ ಮ್ಯೂಸಿಯಂನಲ್ಲಿರೋ ಚಿತ್ರ ಹಿಂಸೆ ನೀಡೋ ಸಾಧನ ನೋಡಿದ್ರೆ ಶಾಕ್ ಆಗ್ತೀರಾ!

ನೂರಾರು ವರ್ಷಗಳ ಹಿಂದೆ ತಪ್ಪನ್ನು ಮಾಡಿದ ಖೈದಿಗಳಿಗೆ ಯಾವ ಯಾವ ರೀತಿಯಲ್ಲಿ ಶಿಕ್ಷೆಯನ್ನು ನೀಡುತ್ತಿದ್ದರು. ಅಂದಿನ ಕಾಲದ ಜನರು ಮಾಡಿದ್ದ ತಪ್ಪಿಗೆ ಎಂತೆಂತಾ ಶಿಕ್ಷೆಗೆ ಒಳಗಾಗಬೇಕಿತ್ತು ಹಾಗೂ ಅವರಿಗೆ ಯಾವ ವಿಧದ ಸಾಧನಗಳಿಂದ ಶಿಕ್ಷೆಯನ್ನು ನೀಡ್ತಾ ಇದ್ರು ಅಂತ ನಿಮಗೇನಾದ್ರೂ ಗೊತ್ತಾ..?
ಆಮ್ಸ್ ಟರ್‍ಡ್ಯಾಮ್‍ನ ಒಂದು ಪ್ರಖ್ಯಾತ ಮ್ಯೂಸಿಯಂ ಒಂದರಲ್ಲಿ ಇಂದಿಗೂ ಕೂಡ ಹಿಂದಿನ ಕಾಲದ ಅಪರಾಧಿಗಳಿಗೆ ಶಿಕ್ಷೆ ನಿಡುತ್ತಿದ್ದ ಸಾಧನಗಳನ್ನು ಸಂಗ್ರಹಿಸಿದ್ದಾರೆ. ಈ ವಿಶ್ವ ಪ್ರಸಿದ್ದ ಮ್ಯೂಸಿಯಂನಲ್ಲಿ ಈಗ ಬಳಕೆಯಲ್ಲಿಲ್ಲದ ಅಪರಾಧಿಗಳಿಗೆ ಘೋರ ಶಿಕ್ಷೆ ನೀಡುವ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಆ ಯಂತ್ರಗಳನ್ನ ನೀವೇನಾದ್ರು ಒಮ್ಮೆ ನೋಡುದ್ರೆ ಭಯ ಭೀತರಾಗೋದಂತೂ ಖಂಡಿತ…!
ಸ್ಕಲ್ ಕ್ರಾಕರ್.

skullcracker-600x492
ಆಮ್ಸ್ ಟರ್‍ಡ್ಯಾಮ್‍ನಲ್ಲಿ ಪ್ರದರ್ಶನಕ್ಕಿಡಲಾಗಿರೋ ಶಿಕ್ಷೆ ಯಂತ್ರದಲ್ಲಿ ಮೈ ಜುಮ್ ಅನ್ನಿಸೋ ಯಂತ್ರ ಈ ಸ್ಕಲ್ ಕ್ರಾಕರ್. ಈ ಯಂತ್ರದ ಮೂಲಕ ಅಪರಾಧಿಗಳ ತಲೆಯನ್ನು ಕತ್ತರಿಸಲಾಗುತ್ತೆ ಎನ್ನಲಾಗಿದೆ.
ದಿ ಗಾರೋಟ್ಟೆ.

garrotte-600x497
ಮರದ ಸಾಧನದಿಂದ ಮಾಡಲಾದ ಈ ಯಂತ್ರದಿಂದ ಅಪರಾಧಿಯನ್ನು ಕತ್ತು ಹಿಸುಕಿ ಸಾಯಿಸಲು ಬಳಸುತ್ತಿದ್ದರಂತೆ..
ಇನ್ಕ್ಯೂಸಿಷನ್ ಚೇರ್.

chair-600x511
ಇಡೀ ಕುರ್ಚಿಯೇ ಮುಳ್ಳಿನಿಂದ ಆವೃತವಾಗಿರುವ ಈ ಯಂತ್ರದ ಸಹಾಯದಿಂದ ಅಪರಾಧಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಸಂದರ್ಭದಲ್ಲಿ ಖೈದಿಯನ್ನು ಈ ಮುಳ್ಳಿನ ಚೇರಿನಲ್ಲಿ ಕೂರಿಸಿ ಚಿತ್ರ ಹಿಂಸೆ ನೀಡುತ್ತಾರೆ..! ಇದರ ಮೇಲೆ ಕೂತು ಸಹ ಬಾಯಿ ಬಿಡದವನು ಮನುಷ್ಯನೇ ಅಲ್ಲ ಬಿಡಿ..
ಥಂಬ್ ಸ್ಕ್ರೀವ್ಸ್.

thumb-screwer-600x383
ಈ ಯಂತ್ರದ ಮೂಲಕ ಅಪರಾಧಿಯ ಹೆಬ್ಬೆರಳನ್ನು ತಿರುವಲಾಗುತ್ತೆ. ಇದರಿಂದ ಖೈದಿ ನೋವನ್ನು ತಾಳಲಾರದೇ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಎಂಬ ನಂಬಿಕೆ.

KONICA MINOLTA DIGITAL CAMERA

ಈ ಯಂತ್ರ ಹೆಸರು ತಿಳಿಯದೇ ಹೋದರೂ ಇದರಿಂದ ಘೋರ ಚಿತ್ರೆ ಹಿಂಸೆ ನೀಡುತ್ತಿದ್ದರು ಎನ್ನುವುದಂತೂ ಸತ್ಯ.
ಚಿತ್ರ ಹಿಂಸೆ ನೀಡುವ ಸಾಧನಗಳು.

museum-7-600x419

2287432738_82fc8892a8_b boek1 gallery_800x600_03_inner_800x600_90_255x255x255 images museo-tortura-interno the-25-most-unimaginable-medieval-torture-devices-329884 torture_museum_amsterdam torture-museum-amsterdam09
ದೊಡ್ಡ ದೊಡ್ಡ ಯಂತ್ರಗಳಂದ ಮಾತ್ರವಲ್ಲದೇ ಕತ್ತಿ, ಚಾಕು, ಮುಳ್ಳು ತಂತಿಗಳು ಇತ್ಯಾದಿ ಸಾಧನಗಳನ್ನು ಬಳಸಿಯೂ ಕೂಡ ಶಿಕ್ಷೆ ನೀಡ್ತಾ ಇದ್ರು ಅನ್ನೋದಕ್ಕೆ ಈ ಹಲವಾರು ಉಪಕರಣಗಳೇ ಸಾಕ್ಷಿ.
ಕೇಜ್.

museum8-600x400
ಈ ಕಿರಿದಾದ ಕೇಜ್‍ನಲ್ಲಿ ಮನುಷ್ಯರನ್ನು ಬಂಧಿಸುತ್ತಿದ್ದರು ಎನ್ನಲಾಗ್ತಾ ಇದೆ. ಆದರೆ ಈ ಕೇಜ್‍ನ ಬಳಕೆ ಅಷ್ಟಕಷ್ಟೆ ಎನ್ನುತ್ತಾರೆ.
ಮನ್ನೆಕ್ಯೂನ್ಸ್.

museum9-1-600x449
ಚಿತ್ರದಲ್ಲಿ ತೋರಿಸಿರುವಂತೆ ಓರ್ವ ಅಪರಾಧಿಯನ್ನು ತಿರುಗು ಚಕ್ರದಲ್ಲಿ ಕಟ್ಟಿಹಾಕಿ ಸುತ್ತುವುದೂ ಕೂಡ ಒಂದು ಶಿಕ್ಷೆಯಾಗಿತ್ತು. ಆ ಮೂಲಕ ಖೈದಿಯ ಬಾಯಿಂದ ನಿಜಾಂಶ ಹೊರಬೀಳುತ್ತಿತ್ತು ಎನ್ನಲಾಗಿದೆ.
ಫ್ಲೂಟ್.

museum10-600x441
ಈ ಒಂದು ಸಾಧನವು ಯಾವ ಸಂಗೀತಗಾರ ಆಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಅಸಮರ್ಥನಾಗಿರುತ್ತಾನೋ ಅಂತವರಿಗೆ ಅವಮಾನಿಸೋ ದೃಷ್ಟಿಯಲ್ಲಿ ಈ ಫ್ಲೂಟ್ ಬಳಸುತ್ತಾರೆ.

ಅವತ್ತು ಬೈಕ್ ಪೆಟ್ರೋಲ್ ಗೂ ಕಾಸಿರ್ಲಿಲ್ಲ… ಇವತ್ತು ಕಾಫಿ ಉದ್ಯಮದ ಸ್ಟಾರ್..

 

LEAVE A REPLY

Please enter your comment!
Please enter your name here