ಧ್ಯಾನ್ ಚಂದ್ ಅವರನ್ನುಜರ್ಮನಿಗೆ ಬನ್ನಿ, ‘ಫೀಲ್ಡ್ ಮಾರ್ಷಲ್’ ಮಾಡ್ತೀನಿ ಅಂದಿದ್ದ ಹಿಟ್ಲರ್..!

0
119

ಧ್ಯಾನ್ ಚಂದ್ ಹಾಕಿಯಲ್ಲಿ ಎಂಥಾ ಅದ್ಭುತ ಸಾಧನೆ ಮಾಡಿದ್ದಾರೆ ಅನ್ನೋದು ಇಡೀ ಜಗತ್ತಿಗೇ ಗೊತ್ತು..! ಆದರೆ ನಿಮ್ಮಲ್ಲಿ ಯಾರಿಗಾದರೂ ಈ ಧ್ಯಾನ್ ಚಂದ್ ಅವರಿಗೆ ಜರ್ಮನಿಯ ಸರ್ವಾಧಿಕಾರಿ `ಅಡಾಲ್ಫ್ ಹಿಟ್ಲರ್’ ಜೊತೆಗೆ ಎಂಥಾ ಸಂಪರ್ಕವನ್ನು ಹೊಂದಿದ್ದರು ಅನ್ನೋದು ಗೊತ್ತಾ..?! ಧ್ಯಾನ್ ಚಂದ್ ಮತ್ತು ಹಿಟ್ಲರ್ ನಡುವೆ ನಡೆದ ಆ ಮಾತುಕತೆ ನಿಮಗೆ ಗೊತ್ತಾ..?! ಸಾಧ್ಯವೇ ಇಲ್ಲ..! ಯಾರಿಗೂ ಧ್ಯಾನ್ ಚಂದ್ ಮತ್ತು ಹಿಟ್ಲರ್ ನಡುವಿದ್ದ ಸಂಪರ್ಕದ ಬಗ್ಗೆ ಗೊತ್ತೇ ಇಲ್ಲ..! ಈ ಕುತೂಹಲಕಾರಿ ಅಂಶ ಇಲ್ಲಿದೆ..!

ಘಟನೆ : ಬರ್ಲಿನ್ ಒಲಂಪಿಕ್ಸ್
ವರ್ಷ : 1936
ಭಾರತದ ಹಾಕಿ ತಂಡಲ್ಲಿ ಅಲಿ ದಾರಾ, ಅಹಮ್ಮದ್ ಖಾನ್ ಮತ್ತು ಧ್ಯಾನ್ ಚಂದ್ರಂತಹ ಶ್ರೇಷ್ಠ ಆಟಗಾರರಿದ್ದರು.
ಅದು ಭಾರತದ ಮೊದಲ ಪಂದ್ಯ, ಜರ್ಮನಿ ಭಾರತ ಎದುರಾಳಿ..! : ಈ ಪಂದ್ಯದಲ್ಲಿ ಭಾರತ ಜರ್ಮನಿ ವಿರುದ್ಧ 4-1 ಅಂತರದಲ್ಲಿ ಸೋತಿತು..! ಆ ಸೋಲು ಧ್ಯಾನ್ ಚಂದ್ ಅವರ ಮೇಲೆ ತುಂಬಾನೇ ದೊಡ್ಡ ಪರಿಣಾಮ ಬೀರುತ್ತೆ..! ಅವರು ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ತಾರೆ..! ಅವತ್ತು ರಾತ್ರಿ ಇಡೀ ಅವರಿಗೆ ನಿದ್ರೆನೇ ಬರಲ್ಲ..! ಜೀವನದಲ್ಲಿ ಈ ಪಂದ್ಯವನ್ನು ಯಾವತ್ತಿಗೂ ನಾನು ಮರೆಯಲಾರೆ ಅಂತ ಧ್ಯಾನ್ ಚಂದರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ..! ಈ ಸೋಲು ಅವರಿಗೆ ದೊಡ್ಡ ಆಘಾತವಾಗಿತ್ತು..!
ಜರ್ಮನಿ ವಿರುದ್ಧ ಸೋಲಾದರೂ ಆ ತಂಡದಿಂದ ಸ್ಫೂರ್ತಿ ಪಡೆದರು..! ಆದ್ದರಿಂದಾಗಿ ನಂತರ ಸರಣಿಯಲ್ಲಿ ಕ್ರಮವಾಗಿ ಗೆಲ್ಲುತ್ತಾ ಸಾಗಿದರು..!
ಇಲ್ಲಿದೆ ನಂತರದ ಪಂದ್ಯಗಳ ಸ್ಕೋರ್
ಹಂಗೇರಿ ವಿರುದ್ಧ : 4-0 ಅಂತರದ ಗೆಲುವು
ಯುಎಸ್ಎ ವಿರುದ್ಧ :7-0 ಅಂತರದ ಗೆಲುವು
ಜಪಾನ್ ವಿರುದ್ಧ : 9-0 ಅಂತರದ ಗೆಲುವು
ಮತ್ತು ಭಾರತ ಸೆಮಿಫೈನಲ್ ಪ್ರವೇಶಿಸಿತು..!
ಫ್ರಾನ್ಸ್ ವಿರುದ್ಧ : 10-0 ಅಂತರದ ಗೆಲುವು.
ಆರಂಭದ ಪಂದ್ಯದಲ್ಲಿ ಜರ್ಮನಿಯ ವಿರುದ್ಧ ಸೋಲಾದರೂ ನಂತರ ಅದ್ಭುತ ಆಟ ಪ್ರದರ್ಶಿಸುತ್ತಾ ಕೊನೆಗೂ ಭಾರತ ಫೈನಲ್ ತಲುಪಿತು..! ಆರಂಭದ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ್ದ ಜರ್ಮನಿಯೇ ಮತ್ತೆ ಫೈನಲ್ ಪಂದ್ಯದಲ್ಲೂ ಎದುರಾಯಿತು..!
1. ಭಾರತದ ಆಟಗಾರರು ಅದ್ಭುತ ಆಟದಿಂದಾಗಿ ಪಂದ್ಯಗಳನ್ನೆಲ್ಲಾ ಗೆಲ್ಲುತ್ತಾ ಯುರೋಪಿಯನ್ನರ ಹೃದಯ ಗೆದ್ದಿದ್ದರು..! ಇದರಿಂದಾಗಿಯೇ ಅಂತಿಮ ಪಂದ್ಯಕ್ಕೆ ಅನೇಕ ಜನರು ಸಾಕ್ಷಿಯಾದರು..! ಆದರೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪಿಚ್ ನಿಷ್ಪ್ರಯೋಜಕವಾಗಿತ್ತು..!
2. ಸೇರಿದ್ದ ಹೆಚ್ಚಿನ ಸಂಖ್ಯೆಯ ಜನರ ಕೈಯಲ್ಲಿ ಧ್ಯಾನ್ ಚಂದ್ ಪೋಸ್ಟರ್ಗಳೇ ಇದ್ದವು..! ಪಂದ್ಯ ಜರ್ಮನಿಯಲ್ಲಾಗಿದ್ದರೂ ಅಲ್ಲಿ ಧ್ಯಾನ್ ಚಂದ್ ಅಭಿಮಾನಿಗಳ ಸಂಖ್ಯೆಯೇ ದೊಡ್ಡದಾಗಿತ್ತು..!
3. ಧ್ಯಾನ್ ಚಂದ್ ಸ್ವತಃ ತಯಾರಾಗಿದ್ದರು ಮತ್ತು ಇತರ ಸದಸ್ಯರಿಗೂ ನಾವು ಬಾಲ್ ನಿಯಂತ್ರಣ ಮಾಡಲೇಬೇಕೆಂದು ಪಾಠ ಮಾಡಿದ್ದರು..!
4. ಜರ್ಮನಿಯ ಸೋಲಿಗೆ ಸಾಕ್ಷಿಯಾಗಲು ಇಷ್ಟಪಡದ ಹಿಟ್ಲರ್ ಪಂದ್ಯ ನಡೆಯುತ್ತಿದ್ದಾಗಲೇ ಅರ್ಧಕ್ಕೆ ಪಂದ್ಯ ವೀಕ್ಷಣೆ ಬಿಟ್ಟು ಸ್ಟೇಡಿಯಂನಿಂದ ಹೊರ ನಡೆದೇ ಬಿಟ್ಟರು..!
5. ಈಗ ಹೇಳೋದು ಅನವಶ್ಯಕ ಅನಿಸುತ್ತದೆ, ನಿಮಗೇ ಗೊತ್ತಾಗಿದೆ..! ಭಾರತ ಪಂದ್ಯವನ್ನು ಗೆದ್ದೇ ಬಿಟ್ಟಿತು..! ಅದೂ 8-1ರ ಅಂತರದಲ್ಲಿ..! ಧ್ಯಾನ್ ಚಂದ್ 3 ಗೋಲ್ ಗಳನ್ನು ಹೊಡೆದಿದ್ದರು..!

ಪರಿಣಾಮ :
ಹಿಟ್ಲರ್ ಧ್ಯಾನ್ ಚಂದರನ್ನು ಭೇಟಿ ಆಗುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ..! ಇದನ್ನು ತಿಳಿದ ಧ್ಯಾನ್ ಚಂದ್ ರಿಗೆ ಭಯ ಆಗುತ್ತೆ..! ಹಿಟ್ಲರ್ ಬಗ್ಗೆ ಧ್ಯಾನ್ ಚಂದ್ ಮೊದಲೇ ಕೇಳಿದ್ದರಲ್ಲಾ..?! ಭಯವಾದರೂ ಆ ಭೇಟಿಗೆ ಒಪ್ಪಿಕೊಳ್ಳಲೇ ಬೇಕಾಗುತ್ತೆ..! ಅದು ಅನಿವಾರ್ಯ ಅಲ್ಲವೇ..?!
ಹಿಟ್ಲರ್ ಮೇಜರ್ ಧ್ಯಾನ್ ಚಂದ್ ರನ್ನು ಭೇಟಿ ಆಗುತ್ತಾರೆ..!(ನೆನಪಿರಲಿ, ಧ್ಯಾನ್ ಚಂದ್ ಹಿಟ್ಲರನ್ನು ಭೇಟಿ ಮಾಡೋದಲ್ಲ.. ಹಿಟ್ಲರ್ರೇ ಧ್ಯಾನ್ ಚಂದ್ರನ್ನು ಭೇಟಿ ಆಗುತ್ತಾರೆ..!)
ಆಗ ಅವರಿಬ್ಬರ ನಡುವೆ ನೆಡೆಯುವ ಸಂಭಾಷಣೆ ಇಲ್ಲಿದೆ..!
ಹಿಟ್ಲರ್ : ಹಾಕಿ ಆಡದೇ ಇರುವಾಗ ನೀವು ಬೇರೆ ಏನನ್ನು ಮಾಡ್ತೀರಿ..?!
ಧ್ಯಾನ್ ಚಂದ್ : ನಾನು ಭಾರತದ ಸೈನ್ಯದಲ್ಲಿದ್ದೇನೆ.
ಹಿಟ್ಲರ್ : ನಿಮ್ಮ ರ್ಯಾಂಕ್ ಏನು..?
ಧ್ಯಾನ್ ಚಂದ್ : ನಾನು ‘ಲ್ಯಾನ್ಸ್ ನಾಯಕ’.
ಹಿಟ್ಲರ್ : ಜರ್ಮನಿಗೆ ಬನ್ನಿ. ನಿಮ್ಮನ್ನು ನಾನು ‘ಫೀಲ್ಡ್ ಮಾರ್ಷಲ್’ ಮಾಡುತ್ತೇನೆ..!
(ಏನಾಗುತ್ತಿದೆ ಅಂತ ಒಂದು ಕ್ಷಣ ಧ್ಯಾನ್ ಚಂದ್ ಗೆ ಅರ್ಥವಾಗಲ್ಲ..! ಅವರು ಗೊಂದಲಕ್ಕೆ ಒಳಗಾಗುತ್ತಾರೆ..! ಇದು ಹಿಟ್ಲರ್ ನ ಆದೇಶವೋ, ಮನವಿ ಅಥವಾ ವಿನಂತಿಯೋ ಅಂತ ಇವರಿಗೆ ಗೊತ್ತಾಗಲ್ಲ..!)
ಧ್ಯಾನ್ ಚಂದ್ : ಭಾರತ ನನ್ನ ದೇಶ ಮತ್ತು ನಾನು ಅಲ್ಲಿ ಚೆನ್ನಾಗಿದ್ದೇನೆ.
ಹಿಟ್ಲರ್ : ನಿಮ್ ಇಷ್ಟ..!
ಧ್ಯಾನ್ ಚಂದ್ ಹೇಗೆ ನಯವಾಗಿ ಹಿಟ್ಲರ್ ನ ಪ್ರಸ್ತಾಪವನ್ನು ಹೇಗೆ ತಿರಸ್ಕರಿಸಿದರೆಂಬುದನ್ನು ನೀವು ಗಮನಿಸಿದಿರಾ..?! ಇದು, ಅವರೊಬ್ಬ ಅದ್ಭುತ ಹಾಗೂ ಪೂಜ್ಯ, ಗೌರವಯುತ ಆಟಗಾರ, ಆದರೆ ಭಾರತದ ಮೇಲಿನ ಪ್ರೀತಿ ಹಾಗೂ ನಂಬಿಕೆಯ ವಿಷಯದಲ್ಲಿ ಯಾವುದೇ ಕಾರಣಕ್ಕು ರಾಜಿ ಆಗುವಂತವರಲ್ಲ ಎಂಬುದನ್ನು ಇಡೀ ಜಗತ್ತಿಗೇ ತೋರಿಸುತ್ತೆ ಅಲ್ಲವೇ..?!
ಅಂದಹಾಗೆ ಇಂಥಾ ದೇಶಪ್ರೇಮಿ ಸೈನಿಕ, ಕ್ರಿಡಾಪಟು ಧ್ಯಾನ್ ಚಂದ್ ನಮ್ಮನ್ನೆಲ್ಲಾ ಅಗಲಿ ಇವತ್ತಿಗೆ 36 ವರ್ಷಗಳು ಕಳೆದಿವೆ..! ಈಗ ನೆನಪು ಮಾತ್ರವಾಗಿರೋ ಇವರಿಗೆ ಎಂದೋ ‘ಭಾರತರತ್ನ’ ಪ್ರಶಸ್ತಿ ಸಿಗಬೇಕಿತ್ತು..! 2014ರಲ್ಲಿ ಇವರ ಹೆಸರನ್ನು ಈ ಅತ್ಯುನ್ನತ ಪ್ರಶಸಿಗೆ ಸೂಚಿಸಲಾಗಿತ್ತು..! ಆ ವರ್ಷ ಸಚಿನ್ ತೆಂಡೂಲ್ಕರ್ ಮತ್ತು ಸಿ ಎನ್ ಆರ್ ರಾವ್ ಅವರಿಗೆ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸುತ್ತಾ..! ಆದಷ್ಟು ಬೇಗ ಧ್ಯಾನ್ ಚಂದ್ ರಿಗೆ ಯಾವತ್ತೋ ನೀಡಬೇಕಾಗಿದ್ದ ಪ್ರಶಸ್ತಿಯನ್ನು ಈಗಲಾದರೂ ನೀಡಲಿ. ಅದರ ನಿರೀಕ್ಷೆಯೊಂದಿಗೆ.

LEAVE A REPLY

Please enter your comment!
Please enter your name here