ಇದು‌ ‘ಮರ್ಯಾದೆ ಪ್ರಶ್ನೆ’ ಶೀಘ್ರದಲ್ಲೇ ತೆರೆಗೆ !

Date:

ಸ್ಯಾಂಡಲ್‌ವುಡ್‌ನಲ್ಲಿ ಅಂಗಳದಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಚಿತ್ರತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಸಾಕಷ್ಟು ಸಿನಿಮೋತ್ಸಾಹವಿರುವ ಆರ್ ಜೆ ಪ್ರದೀಪ್ ಅವರು ತಮ್ಮದೇ ಸಕ್ಕತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್‌ ಗಮನ ಸೆಳೆದಿದ್ದ ಈ ನಿರ್ಮಾಣ ಸಂಸ್ಥೆ ಈಗ ಸಿನಿರಂಗಕ್ಕೂ ಹೆಜ್ಜೆ ಇಟ್ಟಿದೆ.

 

ಸಕ್ಕತ್ ಸ್ಟುಡಿಯೋ ಸಖತ್ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. RCB ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ, ರ್ಯಾಪರ್‌ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿತ್ತು. ಹೀಗೆ ಆರಂಭದಿಂದಲೂ ಬಗೆ ಬಗೆಯಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಗೌರಿ ಗಣೇಶ ಹಬ್ಬದ ದಿನವಾದ ಇಂದು ಥ್ರಿಲ್ಲಿಂಗ್ ಅಪ್ ಡೇಟ್ ಕೊಟ್ಟಿದೆ.

ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ. ರಾಕೇಶ್‌ ಅಡಿಗ, ಸುನೀಲ್‌ ರಾವ್‌, ಶೈನ್‌‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್‌ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ.
ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್.

ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ‌

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ʼನಲ್ಲೇ ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಮತ್ತು ಪಕ್ಷದ ಒಳಗಿನ ಅಧಿಕಾರಕ್ಕಾಗಿ...

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ ಜನಾಶೀರ್ವಾದ: ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ...

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...