ಮಧ್ಯಂತರ.. ಒಂದೊಳ್ಳೆ ಸಿನಿಮಾ ನೋಡುವಾಗ ಈ ಮಧ್ಯಂತರ ಯಾಕಾದರೂ ಬಂತೋ ಗುರು ಎಂದು ಮಧ್ಯಂತರವನ್ನು ಬೈಯುತ್ತೇವೆ. ಇನ್ನು ತಲೆನೋವು ಬರಿಸುವಂತಹ ಸಿನಿಮಾಗಳಲ್ಲಿ ಮಧ್ಯಂತರ ಬಂದರೆ ಸಾಕಪ್ಪ ಎಂದು ಮಧ್ಯಂತರವನ್ನು ನಿರೀಕ್ಷಿಸುತ್ತೇವೆ.
ಹೀಗೆ ಸಿನಿಮಾ ಎಂದ ಮೇಲೆ ಮಧ್ಯಂತರ ಅನಿವಾರ್ಯ. ಒಂದೇ ಸಮನೆ ಸಿನಿಮಾ ನೋಡುವ ಜನರಿಗೆ ಕೊಂಚ ವಿಶ್ರಾಂತಿ ಸಿಗಲೆಂದು ಈ ಮಧ್ಯಂತರವನ್ನು ನೀರು ಮತ್ತು ನಿಮಗೆಲ್ಲರಿಗೂ ತಿಳಿದೇ ಇದೆ. ಹಾಗೆ ಒಂದು ಸಿನಿಮಾಗೆ ಎರಡೆರಡು ಮಧ್ಯಂತರ ನೀಡಿದರೆ ಹೇಗಿರುತ್ತದೆ? ಈ ವಿಷಯ ಕೇಳುತ್ತಲೇ ಏನ್ ಗುರು 2 ಮಧ್ಯಂತರನಾ ಎಂದು ಬೇಸರದ ಮುಖ ಮಾಡಿಕೊಳ್ಳುವವರೇ ಹೆಚ್ಚು!
ಆದರೆ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ ಇನ್ಮುಂದೆ ಚಿತ್ರಮಂದಿರಗಳಲ್ಲಿ ಎರಡೆರಡು ಮಧ್ಯಂತರಗಳು ಇರಲಿವೆ. ಹೌದು ಕೊರೋನಾವೈರಸ್ ನಂತರ ಸಂಪೂರ್ಣವಾಗಿ ಚಿತ್ರಮಂದಿರವನ್ನು ತೆರೆಯಲು ಅನುಮತಿ ಕೊಟ್ಟ ರಾಜ್ಯ ಸರ್ಕಾರ ಈ ಒಂದು ಹೊಸ ಮಾರ್ಗಸೂಚಿಯನ್ನು ನೀಡಿತ್ತು ಒಂದು ಸಿನಿಮಾ ಪ್ರದರ್ಶನ ವೇಳೆ ಎರಡೆರಡು ಇಂಟರ್ ವೆಲ್ ಗಳನ್ನ ನೀಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದೆ.
ರಾಜ್ಯ ಸರ್ಕಾರದ ಈ ಹೊಸ ನೀತಿ ಎಷ್ಟರ ಮಟ್ಟಿಗೆ ಸರಿ ಎಂಬುದು ಜನರೇ ನಿರ್ಧರಿಸಬೇಕಿದೆ. ಎರಡೆರಡು ಇಂಟರ್ವೆಲ್ ನೀಡುವುದರಿಂದ ಎಂಟರ್ ಟೈನ್ ಮೆಂಟ್ ನ ಮಟ್ಟ ಕುಗ್ಗಲಿದೆ ಎಂಬುದು ಕೆಲವರ ಆರೋಪ ಕೂಡ. ಈ ಚಿತ್ರ ಕಥೆ ಸ್ಲೋ ಎನಿಸಿ ಬಿಡುತ್ತದೆ ಎಂಬುದು ಕೆಲವರ ಲೆಕ್ಕಾಚಾರ. ಅದರಲ್ಲಿಯೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗೆ ಎರಡೆರಡು ಇಂಟರ್ ವೆಲ್ ಮಾತ್ರ ಮಾರಕವೇ ಸರಿ.. ಒಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ಎರಡೆರಡು ಮಧ್ಯಂತರದ ನಿರ್ಧಾರ ಹೇಗೆ ವರ್ಕೌಟ್ ಆಗಲಿದೆ ಕಾದು ನೋಡಬೇಕು..