No menu items!
16.9 C
Munich
Monday, June 15, 2026

ಹೊಸಬರ ಚಿತ್ರಕ್ಕೆ ಸಾತ್ ನೀಡಿದ ಧ್ರುವಸರ್ಜಾ

Must read

 

ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರವ ಸರ್ಜಾ.

ಕೊರೋನ‌‌ ಹಾವಳಿ ಮುಗಿಯುತ್ತ ಬಂದಿದೆ‌.‌ ಕನ್ನಡ‌ ಚಿತ್ರರಂಗದಲ್ಲೂ ಸಾಲುಸಾಲು ಚಿತ್ರಗಳು ಆರಂಭವಾಗುತ್ತಿದೆ.
ಈ ಪೈಕಿ “ಡಾ||ಅಭಿ ೦೦7” ಚಿತ್ರ ಸಹ ಒಂದು.
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಆಕ್ಷನ್ ಪ್ರಿನ್ಸ್‌ ಧ್ರವ ಸರ್ಜಾ ಬಿಡುಗಡೆ ಮಾಡಿ ನಾಯಕ‌ ವಿಷ್ಣು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.


ವಿಷ್ಣು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಸಿನಿರಂಗ ಪ್ರವೇಶಿಸಿದ್ದಾರೆ.‌ ಈ ಹಿಂದೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು.
ಮೂಲತಃ ವೈದ್ಯರಾಗಿರುವ ಡಾ||ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್ ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ ನಿರ್ದೇಶನ‌ ಮಾಡಿರುವ ಅನುಭವ ಇವರಿಗಿದೆ.‌‌ ಹಿರಿತೆರೆಯಲ್ಲಿ ವೆಂಕಟೇಶ್ ಪ್ರಸಾದ್‌ ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
ಆಕ್ಷನ್ ಥ್ರಿಲ್ಲರ್ ಕಾಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‌
ಮೂರು‌ ಹಾಡುಗಳಿದ್ದು, ಯು.ವಿ.ಸ್ಟೆವೆನ್‌ ಸತೀಶ್ ಸಂಗೀತ ನೀಡುತ್ತಿದ್ದಾರೆ.‌ ಚೇತನ್ ಕುಮಾರ್ (ಭರ್ಜರಿ) ಗೀತರಚನೆ ಮಾಡಿದ್ದಾರೆ.
ಇನ್ ಫೆಂಟ್ ಭರತ್ ಛಾಯಾಗ್ರಹಣ, ಅರುಣ್ ರೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.‌ ಮೂರು ಸಾಹಸ‌ ಸನ್ನಿವೇಶಗಳಿದ್ದು, ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌


ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ||ಸುಮಿತ್ ತಲ್ವಾರ್ ಮುಂತಾದವರಿದ್ದಾರೆ.
ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ದಿನಗಳ‌ ಚಿತ್ರೀಕರಣ ಬಾಕಿಯಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article