No menu items!
12 C
Munich
Monday, April 13, 2026

ಇರಾನ್ ಜೊತೆಗಿನ ಮಾತುಕತೆ ವಿಫಲ: ಕಚ್ಚಾ ತೈಲ ಬೆಲೆಯಲ್ಲಿ ಶೇ.11 ಏರಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ!

Must read

ಇರಾನ್ ಜೊತೆಗಿನ ಮಾತುಕತೆ ವಿಫಲ: ಕಚ್ಚಾ ತೈಲ ಬೆಲೆಯಲ್ಲಿ ಶೇ.11 ಏರಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ!

ಟೆಹ್ರಾನ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಗೆ ದಿಗ್ಭಂಧನ ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ವರದಿಗಳ ಪ್ರಕಾರ, ಕಚ್ಚಾ ತೈಲದ ಬೆಲೆ ಶೇ.11ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್ಗೆ ಸುಮಾರು 105 ಡಾಲರ್ (₹9,774) ತಲುಪಿದೆ. WTI ಕಚ್ಚಾ ತೈಲ ಪ್ರತಿ ಬ್ಯಾರಲ್ಗೆ 104.25 ಡಾಲರ್ (₹9,704) ದರದಲ್ಲಿದ್ದು, ಬ್ರೆಂಟ್ ಕಚ್ಚಾ ತೈಲವು 101 ಡಾಲರ್ ಸುತ್ತಮುತ್ತ ವಹಿವಾಟು ನಡೆಸುತ್ತಿದೆ.
ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪದ ನಿಲುವಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ನಲ್ಲಿ ವಿವರವಾದ ಹೇಳಿಕೆ ಹಂಚಿಕೊಂಡಿದ್ದಾರೆ.
ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಎಲ್ಲಾ ಹಡಗುಗಳನ್ನು ತಡೆಹಿಡಿಯುವಂತೆ ಅಮೆರಿಕ ನೌಕಾಪಡೆಯಿಗೆ ಸೂಚನೆ ನೀಡಲಾಗಿದೆ. ಜಲಸಂಧಿಯಲ್ಲಿ ಇರಾನ್ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಇಂತಹ ಹಡಗುಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ, ಜಲಸಂಧಿಯಲ್ಲಿ ಇರಾನ್ ಅಳವಡಿಸಿರುವ ಮೈನ್ಸ್ಗಳನ್ನು ನಿಷ್ಕ್ರಿಯಗೊಳಿಸಲು ಅಮೆರಿಕ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆ ಜಾಗತಿಕ ವಾಣಿಜ್ಯ ಮತ್ತು ತೈಲ ಸರಬರಾಜಿನ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆ ಇದೆ.

- Advertisement -spot_img

More articles

- Advertisement -spot_img

Latest article