ಪರಸ್ಪರ ವಿರುದ್ಧ ಲಿಂಗಿಗಳು ಮದುವೆ ಆಗುತ್ತಾರೆ. ಮದುವೆ ಎಂದರೆ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಆಗುಗ ಒಂದು ಸಿಹಿ ಬಂಧ. ಆದರೆ , ಈಗೀಗ ಒಂದೇ ಸೆಕ್ಸ್ ನವರು ಮದುವೆ ಆಗೋದು ಕಾಮನ್ ಆಗಿ ಬಿಟ್ಟಿದೆ.
ಈ ಒಂದು ಊರಿನಲ್ಲಿ ಹೆಣ್ಣು ಹೆಣ್ಣು ಮದುವೆಯಾಗೋದು ಸಂಪ್ರದಾಯವೇ ಆಗಿ ಬಿಟ್ಟಿದೆ..!
ಇದು ತಾಂಜಾನಿಯಾದ ಒಂದು ಗ್ರಾಮ. ಇಲ್ಲಿ ಒಂದೇ ಸೆಕ್ಸ್ ನವರು ಮದುವೆ ಆಗೋದು ಪರಂಪರೆ…! ಇಲ್ಲಿರುವರೆಲ್ಲಾ ಮಹಿಳೆಯರೇ…! ಅವರವರೇ ಮದುವೆ ಆಗುತ್ತಾರೆ…! ಹಾಗೆಂದ ಮಾತ್ರಕ್ಕೆ ಇವರು ಲೆಸ್ಬಿಯನ್ ಅಲ್ಲ. ಇವರು ಹೋಮೊಸೆಕ್ಸುವಾಲಿಟಿ ಕಾರಣದಿಂದ ಮದುವೆ ಆಗ್ತಾರೆ ಎಂದರೆ ತಪ್ಪು. ತಮ್ಮ ಮನಯಲ್ಲಿ ತಮ್ಮದೇ ಅಧಿಕಾರ ಇರಬೇಕು ಎಂದು ಹೀಗೆ ಮಾಡುತ್ತಾರೆ. ಹೊರಗಿನಿಂದ ಯಾರೋ ಅನ್ಯ ಪುರುಷ ಬಂದು ಮನೆಯಲ್ಲಿ ಅಧಿಕಾರ ಚಲಾಯಿಸ ಬಾರದು ಎಂದು ಇಲ್ಲಿನ ಮಹಿಳೆಯರು ಬಯಸಿದ್ದಾರೆ. ತಮ್ಮ ಮನೆಯಲ್ಲಿ ತಮ್ಮದೇಯಾದ ಹಕ್ಕು ಚಲಾಯಿಸುವ ಉದ್ದೇಶವಷ್ಟೇ ಇವರದ್ದು. ಇಲ್ಲಿ ಒಬ್ಬ ಮಹಿಳೆ (ಪತಿ ಸ್ಥಾನದಲ್ಲಿರುವಾಕೆ) ಕೆಲಸಕ್ಕೆ ಹೋದರೆ, ಇನ್ನೊಬ್ಬ ಮಹಿಳೆ (ಪತ್ನಿಯಾದವಳು) ಮನೆಯ ಕಡೆ ನೋಡಿಕೊಳ್ಳುತ್ತಾಳೆ.
ಏನೆಲ್ಲಾ ವಿಚಿತ್ರಗಳು ಇಲ್ಲಿವೆ ಅಲ್ವಾ?