ಶ್ರವಣ್ ಅವರ್ ಅಂತರ್ಗತ ಕಿರುಚಿತ್ರ ಬಿಡುಗಡೆಯಾಗಿದ್ದು, ಈ ನಡುವೆ ಮತ್ತಷ್ಟು ಸಿನಿಮಾಗಳಲ್ಲಿ ಶ್ರವಣ್ ನಟಿಸ್ತಿದ್ದಾರೆ. ಅದ್ರಲ್ಲೂ ಆರ್.ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ ಬಹುನಿರೀಕ್ಷೆತ ಸಿನಿಮಾ ಕಬ್ಜದಲ್ಲಿಯೂ ಶ್ರವಣ್ ಬಣ್ಣ ಹಚ್ಚಿದ್ದಾರೆ ಅನ್ನೋದೇ ವಿಶೇಷ.ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಹಾಗೂ ನಿರ್ಮಾಪಕ ಬಾ.ಮಾ. ಹರೀಶ್, ನಟ ವಿಶ್ವ, ಮಮತಾ ರಾವತ್ ಸೇರಿದಂತೆ ಹಲವರು ಅಂತರ್ಗತ ಕಿರುಚಿತ್ರಕ್ಕೆ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಂತರ್ಗತ ಅನ್ನೋ ಕಿರುಚಿತ್ರ ಸಾಕಷ್ಟು ಪ್ರಶಂಸೆ ಪಡೆಯುತ್ತಿದೆ. ಉದಯ್ ಕುಮಾರ್ ನಿರ್ದೇಶನ, ಅಕ್ಷಯ್ ಶೆಟ್ಟಿ ಕಥೆ, ಸಂತೋಷ್ ಕುಮಾರ್ ಕ್ಯಾಮರಾ ವರ್ಕ್, ಹೇಮಂತ್ ಹಾಗೂ ಎಸ್ ಪಿಎಸ್ ಸ್ಟುಡಿಯೋ ಮ್ಯೂಸಿಕು, ಅನುರಂಜನ್ ಹಾಗೂ ನವೀನ್ ಗೌಡ ಎಡಿಟಿಂಗ್, ಶ್ರವಣ್ ರಾಮಕೃಷ್ಣ, ಸಂತೋಷ್ ಕುಮಾರ್ ಶೆಟ್ಟಿ, ಕೆ. ಕಾರ್ತಿಕ್ ಹಾಗೂ ಭವ್ಯ ನಟಿಸಿದ್ದಾರೆ.