ತೆಲುಗಿನಲ್ಲಿ 10 ಲಕ್ಷವನ್ನೂ ದಾಟಿಲ್ಲ ರಾಬರ್ಟ್?

1
78

ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಿದೆ. ಕೆಜಿಎಫ್ ನಂತರ ಅತಿ ಹೆಚ್ಚು ಮೊದಲ ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ರಾಬರ್ಟ್ ಚಿತ್ರ ಪಾತ್ರವಾಗಿದೆ. ಇನ್ನೂ ರಾಬರ್ಟ್ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಸಹ ಅದೇ ದಿನ ಬಿಡುಗಡೆಯಾಗಿತ್ತು ಆದರೆ ತೆಲುಗಿನಲ್ಲಿ ನಿರೀಕ್ಷೆಯಂತೆ ದೊಡ್ಡ ಓಪನಿಂಗ್ ಏನೂ ಸಿಗಲಿಲ್ಲ.

 

180 ಚಿತ್ರಮಂದಿರಗಳು ರಾಬರ್ಟ್ ಚಿತ್ರಕ್ಕೆ ಸಿಕ್ಕರೂ ಸಹ ಅಲ್ಲಿನ ಜನ ರಾಬರ್ಟ್ ಚಿತ್ರವನ್ನು ಹೆಚ್ಚಾಗಿ ನೋಡಲಿಲ್ಲ ಇದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಚಿತ್ರದ ನಿರ್ಮಾಪಕರು ಮಾತ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡೂ ಸೇರಿ ಮೊದಲ ದಿನ ರಾಬರ್ಟ್ ಚಿತ್ರ ಬರೋಬ್ಬರಿ 3 ಕೋಟಿ 12 ಲಕ್ಷ ಕಲೆಕ್ಷನ್ ಮಾಡಿದೆ ಎಂದು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದನ್ನು ಕಂಡ ತೆಲುಗು ಸಿನಿಮಾ ಪ್ರೇಕ್ಷಕರು ರಾಬರ್ಟ್ ಚಿತ್ರತಂಡವನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

 

 

ರಾಬರ್ಟ್ ತೆಲುಗು ವರ್ಷನ್ ಮೊದಲ ದಿನ ಸಂಪಾದಿಸಿರುವುದು ಕೇವಲ ಹತ್ತು ಲಕ್ಷ ಅದನ್ನು ಹಾಕಿ ಅದನ್ನು ಬಿಟ್ಟು ಫೇಕ್ ಕಲೆಕ್ಷನ್ ಯಾಕೆ ಹಾಕುತ್ತೀರಾ ನಮ್ಮಲ್ಲಿ ಬಿಡುಗಡೆಯಾದ ತೆಲುಗು ಚಿತ್ರಗಳೇ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡರೂ ಆ ದಿನ 3 ಕೋಟಿ ದಾಟಿಲ್ಲ ಇನ್ನೂ ಖಾಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ರಾಬರ್ಟ್ ಹೇಗೆ 3 ಕೋಟಿ ಗಳಿಸಿತು ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

 

 

ಅಷ್ಟು ಮಾತ್ರ ಅಲ್ಲದೆ ತೆಲುಗು ಬಾಕ್ಸ್ ಆಫೀಸ್ ಟ್ರ್ಯಾಕರ್ ಗಳು ಸಹ ರಾಬರ್ಟ್ ಚಿತ್ರ ತೆಲುಗು ರಾಜ್ಯಗಳಲ್ಲಿ ಮೊದಲ ದಿನ ಗಳಿಸಿರುವುದು  ಕೇವಲ ಹತ್ತು ಲಕ್ಷ ಎಂದು ರಿಪೋರ್ಟ್ ನೀಡಿವೆ.  ರಾಬರ್ಟ್ ತೆಲುಗು ರಾಜ್ಯಗಳಲ್ಲಿ ನಿಜವಾಗಲೂ 3ಕೋಟಿ ಮೊದಲ ದಿನ ಸಂಪಾದಿಸಿತಾ? ಅಥವಾ ತೆಲುಗು ಬಾಕ್ಸ್ ಆಫೀಸ್ ಟ್ರ್ಯಾಕರ್ ಗಳು ಹೇಳುವ ಹಾಗೆ ಕೇವಲ ಹತ್ತು ಲಕ್ಷ ಮಾತ್ರ ಗಳಿಸಿತಾ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ.

1 COMMENT

LEAVE A REPLY

Please enter your comment!
Please enter your name here