ನನಗೆ ರಾಜಕೀಯದಲ್ಲಿ ಇರಲೇಬೇಕೆಂಬ ಹುಚ್ಚುತನವಿಲ್ಲ. ಆದರೆ ಈಗ ಜಾತಿ ಮತ್ತು ಕುತಂತ್ರ ರಾಜಕಾರಣ ನಡಯುತ್ತಿದೆ, ಒಳ್ಳಯತನಕ್ಕೆ ಬೆಲೆ ಇಲ್ಲವ. ಇಂಥ ರಾಜಕಾರಣದಿಂದ ನಾನೇ ಹಿಂದೆ ಸರಿಯುವ ಚಿಂತನೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮದು ಪಾಪದ ಸರ್ಕಾರ, ಈಗ ಪವಿತ್ರದ ಸರ್ಕಾರ ಆಡಳಿತ ನಡೆಸುತ್ತಿದೆ. ನಡೆಸಲಿ ಬಿಡಿ ಕಾದು ನೋಡೋಣ, ಯಾರನ್ನೆಲ್ಲ ಪವಿತ್ರ ಮಾಡುತ್ತಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ನೋವು ತೋಡಿಕೊಂಡಿದ್ದಾರೆ.