No menu items!
3.1 C
Munich
Thursday, April 30, 2026

ಈ 17ರ ಪೋರಿಗೆ ಸೆಲ್ಯೂಟ್ ಮಾಡ್ಲೇ ಬೇಕು ರೀ….

Must read

ಅನನ್ಯ ಸಲುಜಾ. ಇನ್ನೂ 17 ವರ್ಷದ ಕುವರಿ . ಇವಳ ಬಗ್ಗೆ ತಿಳಿದ್ರೆ ಖಂಡಿತಾ ನೀವು ಶಹಬ್ಬಾಷ್ ಎನ್ನುತ್ತೀರಾ.. ನಂಬಿ ಬಿಡಿ ಈ ಪುಟ್ಟ ಬಾಲಕಿ ಎಲ್ಲರಿಗೂ ಆದರ್ಶಳು.. ಪುಟ್ಟ ವಯಸ್ಸಿನ ಈಕೆ ಮತ್ತೊಬ್ಬರ ಮುಖದಲ್ಲಿ ಸದಾ ಮಂದಹಾಸ ಮೂಡುವಂತೆ ಮಾಡುತ್ತಿದ್ದಾರೆ. ಈಕೆ ವರ್ಷವಿಡೀ ಸಾಮಾಜಿಕ ಕೆಲಸಗಳನ್ನು ಮಾಡುತ್ತಾಳೆ… ಸಮಾಜದ ನೆರವಿಗೆ ಈ 17ರ ಹರೆಯದ ಬಾಲೆ ನಿಂತಿದ್ದಾಳೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಹೌದು ಅನನ್ಯ ಮಹತ್ವದ ಕೆಲಸ ಮಾಡುತ್ತಿದ್ದಾಳೆ…. ಕಳೆದ ಬೇಸಿಗೆ ರಜೆಯಲ್ಲಿ ಲೇಹ್, ಲಡಾಕ್ ನಂತಹ ಗ್ರಾಮಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಹಣಕಾಸಿನ ನೆರವು ನೀಡಿದ್ದಾಳೆ. ಅನನ್ಯ ತನ್ನ ಕೈಯಿಂದ ಏನೂ ಖರ್ಚು ಮಾಡಿಲ್ಲ. ಬದಲಾಗಿ ಹಣಕಾಸಿನ ವಿಚಾರದಲ್ಲಿ ದುರ್ಬಲರಾಗಿ ಓದು ನಿಲ್ಲಿಸಿರುವ ಮಕ್ಕಳ ಅಭಿವೃದ್ಧಿಗಾಗಿ ಗ್ರಂಥಾಲಯ ಮಾಡಲು ಹಣದ ಸಂಗ್ರಹ ಮಾಡಿದ್ದಳು ಅನನ್ಯ. 10 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿದ ತನ್ನ ಕನಸು ನನಸಾಗಿಸಿಕೊಂಡಿದ್ದಾಳೆ.
ಈ ನಡುವೆ ಅನನ್ಯ ತಮ್ಮ ಟೀಚರ್ ಆಗಿದ್ದ ಸುಜಾತಾ ಸಾಹು ಅವರನ್ನು ಭೇಟಿಯಾದಳು. ಅವರು 17 ಸಾವಿರ ಫೀಟ್ ಅನ್ನುವ ಫೌಂಡೇಷನ್ ಒಂದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದರು. ಇದರ ನೆರವಿನಿಂದ ಲೇಹ್ ಮತ್ತು ಲಡಾಕ್ನಲ್ಲಿ ಅನನ್ಯ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದಳು.


ವರ್ಷಗಳ ಹಿಂದೆ ಅನನ್ಯ ಸಾಮಾನ್ಯ ವಿದ್ಯಾರ್ಥಿಗಳಂತೆ ಓದು ಮತ್ತು ಪರೀಕ್ಷೆ ಬಗ್ಗೆ ಮಾತ್ರ ಯೋಚನೆ ಮಾಡುವ ವಿದ್ಯಾರ್ಥಿನಿಯಾಗಿದ್ದಳು. ಗುರುಗ್ರಾಮದ ಮೌಲ್ಸಾರಿನಲ್ಲಿರುವ ಶ್ರೀರಾಂ ಸ್ಕೂಲ್ ನಲ್ಲಿ ಓದುತ್ತಿದ್ದಳು. ಶಾಲೆಯ ಕಮ್ಯೂನಿಟಿ ಪ್ರೋಗ್ರಾಂ ಯೋಜನೆಯಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವ ಮಕ್ಕಳಿಗೆ ಪಾಠ ಮಾಡುವ ಅವಕಾಶವನ್ನು ಪಡೆದಿದ್ದಳು. ಆ ಕೆಲಸ ಮುಗಿದ ಮೇಲೆ ಅನನ್ಯ ಮನಸ್ಸು ಬದಲಾಗಿತ್ತು. ಅಷ್ಟೇ ಅಲ್ಲ ಇಂತಹ ಮಕ್ಕಳಿಗೆ ಸದಾ ಸಹಾಯ ಮಾಡಬೇಕು ಅಂತ ಮನಸ್ಸು ಹೇಳುತ್ತಿತ್ತು.

ರಜಾ ದಿನಗಳಲ್ಲಿ ಲೇಹ್ ಮತ್ತು ಲಡಾಕ್ ಗೆ ಭೇಟಿ ನೀಡುವುದು ಅನನ್ಯ ಪಾಲಿಗೆ ಇವತ್ತು ಮಾಮೂಲಿಯಾಗಿದೆ. ಲಿಕ್ಸ್ಟೇ, ತುರ್ತುರ್ ಮತ್ತು ಟಿಯಾಲಿಂಗ್ನಂತಹ ಕುಗ್ರಾಮಗಳಿಗೆ 2015ರಲ್ಲಿ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಳು. 2016ರ ಬೇಸಿಗೆ ರಜಾದಲ್ಲಿ ಲೇಹ್ ಜಿಲ್ಲೆಯಲ್ಲಿರುವ ಮಾಥೋದಲ್ಲಿ ಮಕ್ಕಳಿಗಾಗಿ ಆಟ ಮೈದಾನ ರೂಪಿಸಲು ಸಹಾಯ ಮಾಡಿದ್ದಳು.

ಸದ್ಯಕ್ಕೆ ಅನನ್ಯ ಒಟ್ಟು 19 ಗ್ರಂಥಾಲಯಗಳನ್ನು ಸ್ಥಾಪಿಸುವಷ್ಟು ಹಣ ಸಂಗ್ರಹಿಸಿದ್ದಾಳೆ. ಅನನ್ಯ ಪಾಲಿಗೆ ಇದು ಕೇವಲ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಅನನ್ಯ ಮತ್ತಷ್ಟು ಸಮಾಜ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾಳೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article