ಸಮೀಕ್ಷೆಯೊಂದರ ಪ್ರಕಾರ ಜಪಾನ್ ಯುವಕರಿಗೆ ಲೈಂಗಿಕ ಆಸಕ್ತಿಯಿಲ್ಲವಂತೆ. 18 ರಿಂದ 34 ವರ್ಷ ವಯಸ್ಸಿನ ಶೇಕಡಾ 43 ರಷ್ಟು ಜಪಾನಿಗಳು ಶಾರೀರಿಕ ಸಂಬಂಧ ಬೆಳೆಸುವುದಿಲ್ಲವಂತೆ. ವಯಸ್ಸು 34 ಆದ್ರೂ ಅವರಿನ್ನೂ ವರ್ಜಿನ್ ಎಂದು ಸಮೀಕ್ಷೆ ಹೇಳಿದೆ. ಶೇಕಡಾ 64 ರಷ್ಟು ಮಂದಿ ತಾವು ಯಾವುದೇ ಸಂಬಂಧದಲ್ಲಿಲ್ಲ ಎಂದಿದ್ದರು. ಇದು ಜಪಾನ್ ಜನಸಂಖ್ಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಜಪಾನ್ ನಲ್ಲಿ ಪುರುಷರಿಗಿಂತ ಮಹಿಳೆಯರು ಆರ್ಥಿಕವಾಗಿ ಸದೃಡರಾಗಿದ್ದಾರೆ. ಪುರುಷರಲ್ಲಿ ಆತ್ಮವಿಶ್ವಾಸ ಕಡಿಮೆ ಇದೆ. ಮಕ್ಕಳಾದ್ಮೇಲೆ ಕೆಲಸ ಬಿಡಲು ಇಚ್ಛಿಸದ ಮಹಿಳೆಯರು ಸಂಬಂಧದಿಂದಲೇ ದೂರ ಸರಿಯುತ್ತಿದ್ದಾರೆ.
ಜಪಾನ್ ಜನರು ಸೆಲಿಬೆಸಿ ಸಿಂಡ್ರೋಮಾದಿಂದ ಬಳಲುತ್ತಿದ್ದಾರೆ. 2012ರಲ್ಲಿ ಜಪಾನ್ ಜನಸಂಖ್ಯೆ 127 ಮಿಲಿಯನ್ ಇತ್ತು. 2060ರ ವೇಳೆಗೆ ಅಲ್ಲಿನ ಜನಸಂಖ್ಯೆ 27 ಮಿಲಿಯನ್ ಗೆ ಬಂದು ತಲುಪಲಿದೆಯಂತೆ