ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!

Date:

ನಿತ್ಯ ಭವಿಷ್ಯ :  ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!

 

ಮೇಷ : ಉನ್ನತ ವ್ಯಾಸಂಗಕ್ಕೆ ಬಂಧುಗಳ ಸಹಾಯ. ಮಾನಸಿಕ ಒತ್ತಡ ನುಂಗಿಕೊಂಡು ಇರಬೇಡಿ. ಪತ್ನಿ ಮತ್ತು ಆತ್ಮೀಯರೊಂದಿಗೆ ಚರ್ಚಿಸಿ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ.  ಶ್ರೀ ಕೃಷ್ಣನ ಆರಾಧನೆ ಮಾಡಿ.

ವೃಷಭ : ಕೆಲಸ ಕಾರ್ಯಗಳಲ್ಲಿ ಜಯ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಅಸಮಾಧಾನ. ಉದ್ಯೋಗ ಹುಡುಕುತ್ತಿದ್ದವರಿಗೆ ಹೊಸ ಉದ್ಯೋಗ, ಪ್ರಗತಿ, ಹೆಚ್ಚುವರಿ ಆದಾಯದ ಮೂಲ ಸಿದ್ಧಿ, ವಾಹನ ಖರೀದಿ ಮೊದಲಾದ ಶುಭಫಲಗಳಿವೆ. ಅಮ್ಮನವರನ್ನು ಅನನ್ಯಭಾವದಿಂದ ಪ್ರಾರ್ಥನೆ ಮಾಡಿ.

ಮಿಥುನ : ಆತ್ಮೀಯರ, ಗಾಡ್ ಫಾದರ್ ನಂತಿರುವ ವ್ಯಕ್ತಿಗಳ ಸಹಾಯದಿಂದ ಕಾರ್ಯ ಸಾಧನೆ, ಆರೋಗ್ಯದಲ್ಲಿ ಚೇತರಿಕೆ, ಸಂಸಾರದಲ್ಲಿ ನೆಮ್ಮದಿ, ದೃಢ ಇಚ್ಛಾಶಕ್ತಿಯಿಂದ ಯಶಸ್ಸು ಮೊದಲಾದ ಫಲಗಳು ಗೋಚರವಾಗುತ್ತಿವೆ. ಕುಜ –ಚಂದ್ರರನ್ನು ಪ್ರಾರ್ಥಿಸಿ.

ಕರ್ಕಾಟಕ :  ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಕೆಲಸ ಕಾರ್ಯಗಳಲ್ಲಿ ಶುಭ ಫಲ, ಸಹೋದ್ಯೋಗಿಗಳು ನಿಮ್ಮಿಂದ ಪ್ರಭಾವಿತರಾಗುವ ದಿನ ಇದಾಗಿದೆ. ಅಪೂರ್ಣ ಕಾರ್ಯಗಳೆಲ್ಲವೂ ಪೂರ್ಣಗೊಳ್ಳುವವು.  ಗಣೇಶನನ್ನು ಪ್ರಾರ್ಥನೆ ಮಾಡಿ.

ಸಿಂಹ : ನಿಮ್ಮ ಕೆಳಗಿನ ನೌಕರರಿಂದಲೇ ನಿಮಗೆ ಕಿರಿಕಿರಿಯಾದೀತು. ಶತ್ರುತ್ವ ನಾಶ, ಸ್ನೇಹಿತೆಯರ ಬೆಂಬಲದಿಂದ ಪ್ರಗತಿ, ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಸುದಿನ. ಅಮ್ಮನವರಿಗೆ ಹಾಲಿನ ಅಭಿಷೇಕ ಮಾಡಿ.

ಕನ್ಯಾ : ಸಂಸಾರದಲ್ಲಿ  ಹೊಂದಾಣಿಕೆ, ಸಾಮರಸ್ಯದ ಕೊರತೆ ಕಾಡುತ್ತದೆ. ಶಾಂತಿ ಸಮಾಧಾನ ಕಳೆದುಕೊಳ್ಳುವ ಮಟ್ಟಿಗೆ ಉದ್ವೇಗಕ್ಕೆ ಒಳಗಾಗುತ್ತೀರಿ. ಖರ್ಚು- ವೆಚ್ಚಗಳು ಹೆಚ್ಚಾಗಲಿವೆ. ಮಾತನಾಡುವಾಗ ಎಚ್ಚರವಹಿಸಿ. ಅರ್ಧನಾರೀಶ್ವರನನ್ನು ಪ್ರಾರ್ಥಿಸಿ, ಒಳ್ಳೆಯದಾಗುತ್ತದೆ.

ತುಲಾ : ಆದಾಯಕ್ಕಿಂತ ಖರ್ಚು ಜಾಸ್ತಿ. ನಾನಾ ರೀತಿಯ ಸಮಸ್ಯೆಗಳಿಂದ ಮನಸ್ಸಿನ ನೆಮ್ಮದಿ ನುಚ್ಚುನೂರು. ಎಲ್ಲದರಲ್ಲೂ ತಪ್ಪಯ ಹುಡುಕುತ್ತಾ ಹೋಗಿ ಮತ್ತಷ್ಟು ಕಿರಿಕಿರಿ ಅನುಭವಿಸಬೇಡಿ. ದಾಯಾದಿಗಳ ಜೊತೆ ಕಲಹ ಸಾಧ್ಯತೆ. ಉದ್ಯೋಗ, ವ್ಯವಹಾರಗಳಲ್ಲೂ ನೆಮ್ಮದಿ ಇಲ್ಲ. ದುರ್ಗಾದೇವಿಯನ್ನು ಪ್ರಾರ್ಥಿಸಿ, ದುರ್ಗಾ ಕವಚ ಪಠನೆ ಮಾಡಿ.

 

ವೃಶ್ಚಿಕ : ಪಿತ್ತ, ಹೊಟ್ಟೆ ನೋವು, ಉಸಿರಾಟದ ಸಮಸ್ಯೆ ಕಾಡಲಿದ್ದು, ಎಚ್ಚರವಹಿಸಿ. ಕಾರ್ಯಕ್ಷೇತ್ರಗಳಲ್ಲಿ ಎದುರಾಳಿಗಳ ವಿರುದ್ಧ ಜಯ. ವೃತ್ತಿರಂಗದಲ್ಲಿ ಯಶ, ವ್ಯಾಪಾರಿಗಳಿಗೆ ಲಾಭ. ಇತರರಿಗೆ ಸಹಾಯ ಮಾಡುವ ಶಕ್ತಿ ದೊರೆಯುತ್ತದೆ. ನೀವು ಕೂಡ ಅಮ್ಮನವರನ್ನು ಪ್ರಾರ್ಥಿಸಿ.

ಧನು : ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ಸಿಗಲಿವೆ. ವಿದ್ಯಾರ್ಥಿಗಳಿಗೆ ಯಶಸ್ಸು, ಆರ್ಥಿಕ ಪ್ರಗತಿ ಕಾಣುತ್ತೀರಿ. ಅವಸರದಿಂದ ಉದ್ಯಮಕ್ಕೆ ಕೈ ಹಾಕಬೇಡಿ, ತಾಳ್ಮೆಯಿಂದ ಕಾಯಿರಿ. ಬದಲಾವಣೆ ಹತ್ತಿರದಲ್ಲೇ ಇದೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.

ಮಕರ :  ಆರ್ಥಿಕ ಶಿಸ್ತಿನಿಂದ ಸಮಸ್ಯೆಗಳು ದೂರವಾಗಲಿವೆ. ದೊಡ್ಡ ದೊಡ್ಡ ನಿರ್ಧಾರಕ್ಕೆ ಈ ದಿನ ಸುದಿನ. ದುಂದುವೆಚ್ಚ ಮಾಡಬೇಡಿ. ತಾಯಿಯ ಆರೋಗ್ಯದ ಕಡೆ ಗಮನಹರಿಸಿ.  ನರಸಿಂಹಸ್ವಾಮಿಯನ್ನು ಪ್ರಾರ್ಥಿಸಿ.

ಕುಂಭ : ಹಣಕಾಸಿನ ವಿಚಾರದಲ್ಲಿ ತೊಂದರೆ. ಆದರೆ ಅದನ್ನು ಬಗೆಹರಿಸಲು ಸಿಟ್ಟು ತೋರಿದರೆ ಆಗದು. ಸಿಟ್ಟಿನಿಂದ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಉದ್ಯೋಗಿಗಳಿಗೆ ದೂರದೂರಿಗೆ ವರ್ಗಾವಣೆ ಸಾಧ್ಯತೆ. ತಾಳ್ಮೆಯಿಂದ ಸಹಕರಿಸಿದರೆ ಒಳ್ಳೆಯದು. ದುಡುಕಿನ ನಿರ್ಧಾರ ಬೇಡ. ನೀವು ಸಹ ನರಸಿಂಹ ದೇವರನ್ನು ಪ್ರಾರ್ಥಿಸಿ.

ಮೀನ :  ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಜಯ. ಪತ್ರಿಕೋದ್ಯಮದಲ್ಲಿರುವವರಿಗೆ ನಿರೀಕ್ಷೆಗೆ ಮೀರಿದ ಯಶಸ್ಸು. ಸುತ್ತಲಿನ ಧಾರ್ಮಿಕ, ರಾಜಕೀಯ ಬೆಳವಣಿಗೆಗಳಿಂದ ಲಾಭ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಸುಬ್ರಹ್ಮಣ್ಯ ಮತ್ತು ನರಸಿಂಹ ದೇವರನ್ನು ಅನನ್ಯಭಾವದಿಂದ ಪ್ರಾರ್ಥಿಸಿ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...