Tik tok ಸೇರಿದಂತೆ 59 ಆ್ಯಪ್ ಗಳ ಬಳಕೆ ನಿಷೇಧ ..!

1
516

Tik tok ಸೇರಿದಂತೆ ಸುಮಾರು 59 ಚೀನಿ ಆ್ಯಪ್ ಗಳು ನಿಷೇಧ

ಬಹು ಜನಪ್ರಿಯವಾಗಿರುವ  ವಿಡಿಯೋ ಆ್ಯಪ್ Tik  tok ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆಯನ್ನು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದೆ ಎಂದು ANI ವರದಿ ಮಾಡಿದೆ.

https://twitter.com/ANI/status/1277621426317647872?s=19

ಚೀನಾದ ಆ್ಯಪ್ ಗಳನ್ನು ನಿರ್ಬಂಧಿಸುವಂತೆ ಗೂಗಲ್ ಹಾಗೂ ಆ್ಯಪಲ್ ಸಂಸ್ಥೆಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಡಿ ಬರುವ National Informatics Centre(NIC) ನಿರ್ದೇಶಿಸಿ ಆದೇಶ ನೀಡಿತ್ತು ಎಂದು ಇತ್ತೀಚೆ ಪ್ರತಿಯೊಂದು ಹರಿದಾಡಿತ್ತು .  ಆದರೆ, ಅದು ಸುಳ್ಳು ಅಂತ PIB ಸ್ಪಷ್ಟಪಡಿಸಿತ್ತು.
ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದ  ಪರಿಣಾಮ ಡ್ರ್ಯಾಗನ್ ರಾಷ್ಟ್ರ ಚೀನಾ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವ ಪ್ರಕ್ರಿಯೆ ಮುಂದುವರೆದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸ್ವಯಂಪ್ರೇರಿತರಾಗಿ  ಆ್ಯಪ್ Delete ಮಾಡುವ ಅಭಿಯಾನವೇ ನಡೆಯುತ್ತಿದೆ.
ಅಲ್ಲದೆ ಮತ್ತೊಂದೆಡೆ ಗುಪ್ತಚರ ಇಲಾಖೆಯಿಂದ ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ.
ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಘರ್ಷಣೆ ನಡೆದು . ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗಡಿಯಲ್ಲಿ ಬಿಗುವಿನ ವಾತಾವರಣವಿದೆ.

ಈ ಅಹಿತಕರ ಬೆಳವಣಿಗೆ ಬಳಿಕ ಚೀನಾ ಅಪ್ಲಿಕೇಶನ್ ಗಳನ್ನು ಬಳಸಿದರೆ ಖಾಸಗಿ ಮಾಹಿತಿ, ಸುರಕ್ಷತೆ, ಭದ್ರತೆಗೆ ಖಂಡಿತ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಒದಗುತ್ತದೆ ಎಂದು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಎಚ್ಚರೆಯನ್ನು ನೀಡಿದೆ .

ಬಹಳಷ್ಟು ಜನಪ್ರಿಯ ಅಪ್ಲಿಕೇಶನ್ ಗಳಾಗಿರುವ ಟಿಕ್ ಟಾಕ್, ಜೂಮ್, ಶೇರ್ ಇಟ್, ಯುಸಿ ಬ್ರೌಸರ್, ಕ್ಸೆಂಡರ್ ಹಾಗೂ ಕ್ಲೀನ್ ಮಾಸ್ಟರ್ ಸಹ ಇವೆ. ಈ ಆ್ಯಪ್ ಗಳಲ್ಲಿ ಸ್ಪೈವೇರ್ ತುಂಬಿ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವ ಸಾಧ್ಯಾಸಾಧ್ಯತೆಗಳ ಕುರಿತು ಏಜೆನ್ಸಿ ಸ್ಪಷ್ಟವಾಗಿ ತಿಳಿ ಹೇಳಿದೆ.

ಏಪ್ರಿಲ್ ತಿಂಗಳಿನಲ್ಲಿ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಭದ್ರತೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ಬಗ್ಗೆ ಗೃಹ ಸಚಿವಾಲಯ ಮಾರ್ಗಸೂಚಿ ನೀಡಿದ್ದನ್ನು ಈ ವೇಳೆ ಸ್ಮರಿಸಬಹುದು ‌ ಸ್ಮರಿಸಬಹುದು. ನಂತರ ಮಾರ್ಗಸೂಚಿಯಂತೆ ಜೂಮ್ ಆಪ್ ಕೂಡಾ ಸುರಕ್ಷತೆ ಹೆಚ್ಚಿಸಿ ಹೊಸ ಆವೃತ್ತಿ ಬಿಡುಗಡೆ ಮಾಡಿದನ್ನು ಕೂಡ ಇಲ್ಲಿ ನೆನೆಯಬಹುದು.


ಗೂಗಲ್ ಇಂಡಿಯಾದ ನೇಹಾ ಅಗರವಾಲ್ ಹಾಗೂ ಆಪಲ್ ಇಂಡಿಯಾದ ಅನುಜ್ ರೆಡ್ಡಿ ಅವರಿಗೆ ಬರೆದಿರುವ ಆದೇಶ ಪ್ರತಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000 ಪ್ಯಾರಾ 1, 2 ಅನ್ವಯ ಈ ಕೆಳಕಂಡ ಆಪ್ ಗಳನ್ನು ನಿಮ್ಮ ವೇದಿಕೆಯಲ್ಲಿ ನಿರ್ಬಂಧಿಸಲು ಸೂಚಿಸಲಾಗಿದೆ. ಈ ಪ್ರತಿ ನಿಮಗೆ ತಲುಪಿದ ತಕ್ಷಣ ಸೂಚನೆಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಈ ಆಪ್ ಬಳಕೆಯಿಂದ ದೇಶದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಬಂದಿದೆ ಎಂದು ಪ್ರಧಾನ ಕಾರ್ಯದರ್ಶಿ ಆನಂದ್ ಸಾಗರ್ ನೇಗಿ ಅವರ ಸಹಿ ಹಾಕಲಾಗಿದೆ. ಆದರೆ, ಇದೆಲ್ಲವೂ ಸುಳ್ಳು ಎಂದು PIB ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ನಲ್ಲಿ ಲಭ್ಯವಿರುವ ಈ ಕೆಳಕಂಡ ಆ್ಯಪ್ ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ. LiveMe Bigo Live BeautyPlus Cam Scannaer Clash of Kings Mobile Legends’ Tik Tok Clib Factory Shein Romwe App Lock V mate Game of Sultans ಆದರೆ, ಇದೆಲ್ಲವೂ ಈಗಾಗಲೇ ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿದೆ. ಹೀಗಾಗಿ ಸರ್ಕಾರದ ಅಧಿಕೃತ ಖಾತೆಯಿಂದ ಆದೇಶ ಬಂದರೆ ಮಾತ್ರ ಪರಿಗಣಿಸಲು ಸೂಚಿಸಲಾಗಿದೆ.

ಪಟ್ಟಿಯಲ್ಲಿನ ಅಪ್ಲಿಕೇಶನ್ ಗಳು

TikTok, Vault-Hide, Vigo Video, Bigo Live, Weibo, WeChat, SHAREit, UC News, UC Browser, BeautyPlus, QQ Mail, QQ NewsFeed, WeSync, SelfieCity, Clash of Kings, Mail Master, Mi Video call-Xiaomi, Parallel Space, Photo Wonder, APUS Browser, VivaVideo- QU Video Inc, Perfect Corp, CM Browser, Virus Cleaner (Hi Security Lab), Mi Community, DU recorder, YouCam Makeup, Mi Store, 360 Security, DU Battery Saver, DU Browser, DU Cleaner, DU Privacy, Clean Master – Cheetah, QQ International, QQ Launcher, QQ Security Centre, QQ Player, QQ Music, CacheClear DU apps studio, Baidu Translate, Baidu Map, Wonder Camera, ES File Explorer, Xender, ClubFactory, Helo, LIKE, Kwai, ROMWE, SHEIN, NewsDog.

 

 

1 COMMENT

LEAVE A REPLY

Please enter your comment!
Please enter your name here