ಈ ವಯಸ್ಸಿನ ಮಹಿಳೆಯರು ಚೆಕಪ್ ಮಾಡಿಸಿಕೊಳ್ಳಲೇ ಬೇಕು..!

0
118

ಗಂಡಸರಿಗಿಂತ ಹೆಚ್ಚು ಸಮಸ್ಯೆಗಳುಯ ಕಾಡುವುದು ಮಹಿಳೆಯರಿಗೆ. ಇನ್ನು ವಯಸ್ಸು ದಾಟುತ್ತಿದ್ದಂತೆ ಇನ್ನು ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. 40ರ ಗಡಿ ದಾಟುತ್ತಿದ್ದಂತೆ ಮಹಿಳೆಯ ದೇಹ ಕೆಲವೊಂದು ತೊಂದರೆಯನ್ನು ಎದುರಿಸುತ್ತದೆ. ಹಾರ್ಮೋನುಗಳಲ್ಲಿ ಏರುಪೇರು, ಖಿನ್ನತೆ, ಹೃದಯ ಕಾಯಿಲೆ, ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಗುರಿಯಾಗುತ್ತಾರೆ.

ಬೋನ್ ಮಿನರಲ್ ಸಾಂದ್ರತೆ ಪರೀಕ್ಷೆ: ಮಹಿಳೆಯು ಆಸ್ಟಿಯೊ ಪೆರೋಸಿಸ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೆಂಗಸಿನಲ್ಲಿ ಮೂಳೆ ಆರೋಗ್ಯಕ್ಕೆ ಸಂಬಂಧಿ ಈಸ್ಟ್ರೋಜನ್ ಹಾರ್ಮೋನ್ ಕುಸಿತ ಇದಕ್ಕೆ ಕಾರಣ. ಆಸ್ಟಿಯೊಪೊರೋಸಿಸ್ಗೆ ಮುಖ್ಯ ಕಾರಣ ವಯಸ್ಸು. ಎಲುಬುಗಳ ಸ್ಥಿತಿ ಕ್ಷೀಣಿಸುವ ಹಂತವಾಗಿದ್ದು, ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುವುದು ಇದರ ಪ್ರಮುಖ ಲಕ್ಷಣ.‘
ಪೆಲ್ವಿಕ್ ಮತ್ತು ಪ್ಯಾಪ್ ಸ್ಮೀಯರ್ ಟೆಸ್ಟ್: ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ, ನೀವು ಏಕ್ಖೃಯ ಪತ್ತೆಗೆ ಸಂಪೂರ್ಣ ಶ್ರೇಣಿಯ ಪರೀಕ್ಷೆ ಮತ್ತು ಪ್ಯಾಪ್ ಸ್ಮಿಯರ್ ಟೆಸ್ಟ್ ಅಗತ್ಯ. ಪೆಲ್ವಿಕ್ ಪರೀಕ್ಷೆಯು ಗರ್ಭಕಂಠ, ಗರ್ಭಾಶಯ, ಅಂಡಾಶಯ ಮತ್ತು ಕೆಳ ಹೊಟ್ಟೆಯ ಲೊಪಿಯನ್ ಟ್ಯೂಬ್ ಮತ್ತು ಓವರೀಸನ್ನು ಪರೀಕ್ಷಿಸಲು ಸಹಕಾರಿ.
ಸಂಪೂರ್ಣ ಸ್ತನ ಪರೀಕ್ಷೆ ಮತ್ತು ಮಮೊಗ್ರಮ್: 40ರ ಹರೆಯದ ಸೀಗೆ ಸ್ತನ ಪರೀಕ್ಷೆ ಅನಿವಾರ್ಯ. ಇದನ್ನು ಮನೆಯಲ್ಲೂ ಮಾಡಬಹುದು. ಸೀರೋಗ ತಜ್ಞರಿಂದ ವಾರ್ಷಿಕವಾಗಿ ಪರೀಕ್ಷೆ ಮಾಡಿಸಬಹುದು. ಮಮೊಗ್ರಮ್ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ.

ಥೈರಾಯ್ಡ್ ಪರೀಕ್ಷೆ: ಬದಲಾದ ಲೈಸ್ಟೈಲ್ನಿಂದ ಹೆಚ್ಚುತ್ತಿರುವ ಸಮಸ್ಯೆ. ತೂಕ ಹೆಚ್ಚಾಗುವುದು, ಕೂದಲು ಉದುರುವಿಕೆ, ಉಗುರು ಒಡೆಯುವುದು ಇತ್ಯಾದಿ ಥೈರಾಯ್ಡ್ ಅಥವಾ ಹೈಪೋಥೈರಾಯ್ಡಿಸಂನ ಲಕ್ಷಣ. ಈ ಗ್ರಂಥಿಯ 3, 4 ಮತ್ತು ಖಏ ಹಾರ್ಮೋನುಗಳನ್ನು ಸ್ರವಿಸುತ್ತವೆ. ಅವುಗಳು ಮೆಟಬಾಲಿಸಂನ್ನು ನಿಯಂತ್ರಿಸುತ್ತದೆ. ಇದರಿಂದ ಸಾಕಷ್ಟು ದೈಹಿಕ, ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಥೈರಾಯ್ಡ್ ಇರುವುದು ಬೇಗ ಗೊತ್ತಾದಷ್ಟು ಚಿಕಿತ್ಸೆ ಹೆಚ್ಚು ಪರಿಣಾಮಕಾರಿ.

LEAVE A REPLY

Please enter your comment!
Please enter your name here