ಉಗುರು ಪದೇ ಪದೇ ಕಟ್ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

Date:

ಉಗುರು ಪದೇ ಪದೇ ಕಟ್ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ನೀಳವಾದ ಉಗುರು ತಮ್ಮದಾಗಿರಬೇಕು ಎಂದು ಎಲ್ಲವೂ ಬಯಸುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಸುಂದರ ಉಗುರುಗಳು ಬರುವುದಿಲ್ಲ. ಉಗುರು ಸ್ವಲ್ಪ ಉದ್ದವಾದ ತಕ್ಷಣ ತುಂಡಾಗುತ್ತದೆ. ಇದಕ್ಕೆ ಕಾರಣ ಉಗುರು ದುರ್ಬಲವಾಗಿರುವುದು. ಕೆಲವರಿಗೆ ಉಗುರು ಬೆಂಡಾಗಿರುತ್ತದೆ. ಇದರಿಂದೆಲ್ಲಾ ಒಂದು ರೀತಿಯ ಮುಜುಗರ ಉಂಟಾಗುವುದು ಸಹಜ.

ಆರೋಗ್ಯವಂತ ಉಗುರು ಕಾಪಾಡಿಕೊಳ್ಳುವುದು ಕಷ್ಟಕರವೇನಲ್ಲ. ನಿಮ್ಮ ಉಗುರುಗಳು ಬಲವಾಗಿರಬೇಕೆಂದರೆ ಉಗುರು ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಒದಗಿಸುವ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಪ್ರತಿಯೊಬ್ಬ ಹುಡುಗಿಯೂ ತನಗೆ ಉದ್ದ ಮತ್ತು ಸುಂದರವಾದ ಉಗುರುಗಳು ಇರಬೇಕೆಂದು ಬಯಸುತ್ತಾಳೆ. ಅದಕ್ಕಾಗಿಯೇ ಕೆಲವು ಮಹಿಳೆಯರು ದೊಡ್ಡ ದೊಡ್ಡ ಪಾರ್ಲರ್ ನಲ್ಲಿ ಸಾವಿರಾರು ರೂಪಾಯಿ ಹಣ ವ್ಯರ್ಥ ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ಉಗುರುಗಳನ್ನು ಬಲವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ಕೆಲವು ಮನೆಮದ್ದುಗಳನ್ನು ಮಾಡಬಹುದು. ಇದು ನಿಮ್ಮ ಕೈ ಅಂದವನ್ನು ದುಪ್ಪಟ್ಟು ಮಾಡುವುದಲ್ಲದೆ ಪದೇ ಪದೇ ಉಗುರು ಮುರಿಯದಂತೆ ನೋಡಿಕೊಂಡು ಅವು ಬಲಗೊಳ್ಳಲು ಸಹಾಯ ಮಾಡುತ್ತದೆ.

ಮುಖ್ಯವಾಗಿ, ಉಗುರುಗಳನ್ನು ಬಲಪಡಿಸಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಂತಹ ಪೋಷಕಾಂಶಗಳು ಬೇಕಾಗುತ್ತವೆ. ಇದಕ್ಕಾಗಿ ಸರಿಯಾದ ಆಹಾರವನ್ನು ಅನುಸರಿಸಬೇಕು. ಉಗುರುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವುದು, ರಾಸಾಯನಿಕ ಮತ್ತು ಇನ್ನಿತರ ಸೋಪನ್ನು ಬಳಸುವುದನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ. ಹಾಗಾದರೆ ಉಗುರುಗಳನ್ನು ಯಾವ ರೀತಿಯಲ್ಲಿ, ಹೇಗೆ ಬಲಪಡಿಸಬೇಕು? ಇಲ್ಲಿದೆ ಸರಳ ಮನೆಮದ್ದು.

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದನ್ನು ಬಿಸಿ ಮಾಡಿ ಪ್ರತಿದಿನ ಉಗುರುಗಳಿಗೆ ಹಚ್ಚುವ ಮೂಲಕ, ಉಗುರುಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಅದಲ್ಲದೆ ಇದು ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ.

ವಿಟಮಿನ್ ಸಿ ಉಗುರುಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಉಗುರುಗಳಿಗೆ ನಿಂಬೆ ರಸವನ್ನು ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ಉಗುರುಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ.

*ನಿಯಮಿತವಾಗಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಉಗುರುಗಳಿಗೆ ಮಾಸ್ಕ್ ನಂತೆ ಹಚ್ಚಿ. ಹಾಗೆಯೇ ಆಲಿವ್ ಎಣ್ಣೆ ಕೂಡ ಆರೋಗ್ಯಕರ ಉಗುರುಗಳಿಗೆ ಪ್ರಯೋಜನಕಾರಿಯಾಗಿದೆ. ಇದನ್ನು ಕೂಡ ನಿಯಮಿತವಾಗಿ ಬಳಸಬಹುದು.

*ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಉಗುರುಗಳು ಆರೋಗ್ಯವಾಗಿ ಇರುತ್ತವೆ. ಆದ್ದರಿಂದ, ಪಾಲಕ್, ಮೆಂತ್ಯ, ಬ್ರೊಕೋಲಿಯಂತಹ ತರಕಾರಿಗಳನ್ನು ಸಾಧ್ಯವಾದಷ್ಟು ಸೇವಿಸಿ.

ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಇದೆ. ಇದು ಉಗುರುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಅದಕ್ಕಾಗಿಯೇ ಉಗುರುಗಳಿಗೆ ಬೆಳ್ಳುಳ್ಳಿ ಪೇಸ್ಟ್ ಅಥವಾ ಅದರ ಎಣ್ಣೆಯನ್ನು ಹಚ್ಚುವುದು ಬಹಳ ಉತ್ತಮ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ...

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...