ಪೌರತ್ವ ಕಾಯ್ದೆ ಜಾರಿಯಾದ ಬಳಿಕ ಬಾರಿ ಪರ ವಿರೋಧಗಳು ದೇಶಾದ್ಯಂತ ಇದ್ದರು ಸಹ ಅದರ ವಿಚಾರವಾಗಿ ಹಲವಾರು ಪ್ರತಿಭಟನೆ ನೆಡೆಯಿತು ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪ್ರಕ್ರಿಯೆ ಆರಂಭಿಸಿದೆ .
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಅನೇಕರು ಪೌರತ್ವ ಇಲ್ಲದೆ ವಾಸಿಸುತ್ತಿದ್ದು ಅಂತಹ ನಿವಾಸಿಗಳ ಪಟ್ಟಿಯನ್ನು ಸಿದ್ಧಪಡಿಸಲು ಉತ್ತರ ಪ್ರದೇಶದ ಗಾಜಿಯಾಬಾದ್ ಶಹಜಹನ್ ಪುರ, ಲಖ್ನೋ, ರಾಂಪುರ್, ಗಾಜಿಯಾಬಾದ್ ಜಿಲ್ಲೆಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಪೌರತ್ವ ಪಡೆಯುವವರ ಸಂಖ್ಯೆ ಹೆಚ್ಚಾಗಿರಬಹುದೆಂದು ಹೇಳಲಾಗಿದೆ.