ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ವಲಯದವರು ಕಾಂಗ್ರೆಸ್ ನಲ್ಲಿ ಉಪ ಚುನಾವಣೆಯ ತಂತ್ರ-ಪ್ರತಿತಂತ್ರಗಳು ನೆಡೆಯುತ್ತಲೆ ಇದೇ . ಹಿರಿಯ ನಾಯಕರ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿ ತಂತ್ರ ರೂಪಿಸುತ್ತಿದ್ದಾರೆ. ಸಿದ್ಧರಾಮಯ್ಯ ಹೇಳಿದವರಿಗೆ ಟಿಕೆಟ್ ಖಚಿತವಾಗಿರುವುದರಿಂದ ಅವರಿಗೇ ಜವಾಬ್ದಾರಿ ನೀಡಬೇಕೆಂದು ಹಿರಿಯ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ತಾವೇ ಜವಾಬ್ದಾರಿ ಹೊತ್ತುಕೊಂಡರೆ ಹಿನ್ನಡೆಯಾದ ಸಂದರ್ಭದಲ್ಲಿ ತಮಗೇ ಹೊಣೆ ಹೊರಿಸಬಹುದೆಂಬ ಕಾರಣದಿಂದ ಸಿದ್ಧರಾಮಯ್ಯ ಮುಂಚೂಣಿ ನಾಯಕರಿಗೆ ಪ್ರಚಾರದ ನೇತೃತ್ವ ವಹಿಸಲು ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ . ಬಿಜೆಪಿಗೆ ಕಾಂಗ್ರೆಸ್ಸಿಗೆ ನೇರ ಪೈಪೋಟಿ ಯಾಗಿರುವುದರಿಂದ ಯಾವ ಯಾವ ರೀತಿ ಸಿದ್ದರಾಮಯ್ಯ ಅವರು ರಣತಂತ್ರವನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ವಲಯ ಹಾಗೂ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.