ಐಪಿಎಲ್ ಈ ಒಂದು ಟೂರ್ನಮೆಂಟ್ ಬಂತು ಎಂದರೆ ಸಾಕು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಈ ಒಂದು ಕ್ರಿಕೆಟ್ ಟೂರ್ನಮೆಂಟ್ ಅಪಾರವಾದ ಕ್ರೇಜ್ ಅನ್ನು ಹೊಂದಿದೆ. ಇನ್ನು ಐಪಿಎಲ್ ಪ್ರತಿ ವರ್ಷವೂ ಸಹ ದೊಡ್ಡ ಮಟ್ಟದ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುತ್ತದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತದೆ. ಇದೀಗ ಬಿಸಿಸಿಐ ಕಡೆಯಿಂದ ಐಪಿಎಲ್ ಉದ್ಘಾಟನಾ ಸಮಾರಂಭದ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು ಬಿಸಿಸಿಐ ಹೊಸದೊಂದು ತೀರ್ಮಾನವನ್ನು ಕೈಗೊಂಡಿದ್ದು ಮುಂದಿನ ಬಾರಿಯಿಂದ ಆರಂಭವಾಗುವ ಐಪಿಎಲ್ ನಲ್ಲಿ ಕೋಟಿ ಕೋಟಿ ವೆಚ್ಚದ ಉದ್ಘಾಟನಾ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಿದೆ. ಹೀಗೆ ಐಪಿಎಲ್ ಉದ್ಘಾಟನಾ ಕಾರ್ಯಕ್ರಮವನ್ನು ನಿಷೇಧ ಗೊಳಿಸುವುದರ ಮೂಲಕ ಸರಳವಾಗಿ ಐಪಿಎಲ್ ಅನ್ನು ಆರಂಭಿಸುವ ತೀರ್ಮಾನ ಮಾಡಿದೆ. ಇನ್ನು ಐಪಿಎಲ್ ಉದ್ಘಾಟನೆಗೆ ಖರ್ಚಾಗುತ್ತಿದ್ದ ಹಣವನ್ನು ಭಾರತೀಯ ಸೇನೆಗೆ ನೀಡುವ ಚಿಂತನೆಯನ್ನು ಬಿಸಿಸಿಐ ನಡೆಸಿದೆ ಎನ್ನಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವರು ನೇಮಕ ಆಗಿದ್ದರು ಈ ಯೋಜನೆ ಸಹ ಸೌರವ್ ಗಂಗೂಲಿ ಅವರದ್ದೇ ಎಂದು ಸುದ್ದಿಗಳು ಹರಿದಾಡುತ್ತಿವೆ.