ಅಂಬಾನಿ ಮಗನ ಮದುವೆ ಎಂದರೆ ಅದ್ಧೂರಿಯಾಗಿ ಇದ್ದೇ ಇರುತ್ತದೆ , ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ ಈ ಮದುವೆಗೆ ಮುನ್ನ ಅಂಬಾನಿಯವರು ಪೊಲೀಸರಿಗೆ ಸ್ವೀಟ್ ಬಾಕ್ಸ್ ಕಳಿಸಿದ್ದಾರೆ ,
ಮಗನ ಮದುವೆಗೆ ಮುನ್ನ ಐವತ್ತು ಸಾವಿರ ಪೊಲೀಸ್ ಸಿಬ್ಬಂದಿಗೆ ಸ್ವೀಟ್ ಕಳಿಸಿದ್ದಾರೆ.
ಮುಂಬೈನ ಪ್ರತಿಯೊಂದು ಪೊಲೀಸ್ ಸ್ಟೇಶನ್ ಸಿಬ್ಬಂದಿ, ಅಂಬಾನಿ ಕುಟುಂಬದವರು ಕಳುಹಿಸಿದ ಸ್ವೀಟ್ ಬಾಕ್ಸ್ ಸ್ವೀಕಾರ ಮಾಡಿಕೊಳ್ಳುತ್ತಿದ್ದಾರೆ.
ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ ಶ್ಲೋಕಾ ಮೆಹ್ತಾ ಜೊತೆ ಮಾರ್ಚ್ 9 ಕ್ಕೆ ನಡೆಯಲಿದ್ದು,
ಅಂಬಾನಿ ಅವರ ಮಗನ ಮದುವೆ ಅದ್ಧೂರಿಯಾಗಿ ಹಾಗೂ ವಿನೂತನವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ ,
ಸ್ವೀಟ್ ಬಾಕ್ಸ್ ಜೊತೆಗೆ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಮಕ್ಕಳ ಸಂದೇಶ ಉಳ್ಳ ಕಾರ್ಡ್ ಒಂದು ಇರಿಸಲಾಗಿದೆ,
ಎಲ್ಲರ ಆಶೀರ್ವಾದ ಪಡೆದುಕೊಳ್ಳುವ ರೀತಿಯಲ್ಲಿ ಕಾರ್ಡನ್ನು ಮುದ್ರಿಸಲಾಗಿದೆ, ಪೊಲೀಸರು ಅಂಬಾನಿ ಕಳಿಸಿದಾ ಸ್ವೀಟ್ ಪಡೆದುಕೊಳ್ಳುತ್ತಿದ್ದಾರೆ.