ಒಂದು ಥಿಯೇಟರ್ , ಒಂದು ದಿನ , 34 ಪ್ರದರ್ಶನ! ರೆಕಾರ್ಡ್!

admin
1 Min Read

ಯುವರತ್ನ ಚಿತ್ರ ಬಿಡುಗಡೆಗೂ ಮುನ್ನ ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ಎಲ್ಲೆಡೆ ಭರ್ಜರಿ ಬುಕ್ಕಿಂಗ್ ನಡೆಯುತ್ತಿದ್ದು ಟಿಕೆಟ್ ಹಾಟ್ ಕೇಕ್ ನಂತೆ ಸೇಲ್ ಆಗುತ್ತಿದೆ. ಬೆಂಗಳೂರಿನ ರಾಜ್ ಕುಮಾರ್ ರಸ್ತೆಯ ಪಿವಿಆರ್ ಸಿನಿಮಾಸ್ ನಲ್ಲಿ ಯುವರತ್ನ ಚಿತ್ರಕ್ಕೆ ಬಿಡುಗಡೆಯ ದಿನ ಬರೋಬ್ಬರಿ 34 ಶೋ ಗಳನ್ನು ನೀಡಲಾಗಿದ್ದು ಇದುವರೆಗೂ ಸಹ ಯಾವುದೇ ಭಾಷೆಯ ಚಿತ್ರಗಳಿಗೂ ಇಷ್ಟು ದೊಡ್ಡ ಮಟ್ಟದ ಶೋಗಳನ್ನು ನೀಡಿರಲಿಲ್ಲ.

 

 

ಅದೊಂದೇ ಚಿತ್ರಮಂದಿರದಲ್ಲಿ 34 ಶೋಗಳಿಗೆ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದರೂ ಸಹ ಎಲ್ಲಾ ಶೋಗಳ ಟಿಕೆಟ್ ಗಳು ಬಹಳ ವೇಗವಾಗಿ ಮಾರಾಟವಾಗುತ್ತಿದೆ. ಇಂದು ಸಂಜೆಯೊಳಗೆ ಬಹುತೇಕ ಟಿಕೆಟ್ ಸೇಲ್ ಆಗಲಿದ್ದು ಮತ್ತಷ್ಟು ಪ್ರದರ್ಶನಗಳು ಇದಕ್ಕೆ ಸೇರಿಕೊಂಡರೆ ಆಶ್ಚರ್ಯಪಡುವಂಥದ್ದೇನಿಲ್ಲ. ಒಟ್ಟಿನಲ್ಲಿ ಮಲ್ಟಿಪ್ಲೆಕ್ಸ್ ಒಂದರಲ್ಲಿ ಕನ್ನಡ ಚಿತ್ರ 34 ಶೋ ಗಳನ್ನು ಪಡೆದು ಟಿಕೆಟ್ ಮಾರಾಟದಲ್ಲಿಯೂ ಸಹ ಮುಂದೆ ಇರುವುದು ತಮಾಷೆಯ ವಿಷಯವಲ್ಲ..

Share This Article
Leave a Comment