No menu items!
12.4 C
Munich
Wednesday, April 29, 2026

ಲಿಂಗದ ಮುಂದೆ ಯುವರತ್ನ ಪೋಸ್ಟರ್ ಇಟ್ಟು ಪೂಜೆ!

Must read

ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಹೊಂದಿರುವ ಬಹುಶಃ ಪ್ರಸ್ತುತ ತಲೆಮಾರಿನಲ್ಲಿ ಬೇರೆ ಯಾವ ನಟರೂ ಅಭಿಮಾನಿಗಳನ್ನು ಹೊಂದಿಲ್ಲ ಅನ್ನಿಸುತ್ತೆ. ಇದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಯುವ ಸಂಭ್ರಮ ಕಾರ್ಯಕ್ರಮ. ಪುನೀತ್ ಹೋದ ಕಡೆಯೆಲ್ಲ ಜೆಸಿಬಿ ಮುಖಾಂತರ ಪುನೀತ್ ಅವರಿಗೆ ಪುಷ್ಪ ಮಳೆಗೈದ ಅಭಿಮಾನಿಗಳು ಪುನೀತ್ ಅವರಿಗೆ ಅದ್ದೂರಿ ಸ್ವಾಗತ ಕೋರಿ ದುಬಾರಿ ಮೊತ್ತದ ಹಾರ ಹಾಕಿ ಸಂಭ್ರಮಿಸಿದರು.

 

 

 

ಚಿತ್ರ ಬಿಡುಗಡೆಗೂ ಮುನ್ನವೇ ಪುನೀತ್ ಅವರಿಗೆ ಅಷ್ಟು ದೊಡ್ಡ ಮಟ್ಟದ ಸಂಭ್ರಮಾಚರಣೆಯನ್ನು ಮಾಡಿದ ಪುನೀತ್ ಅಭಿಮಾನಿಗಳು ಇದೀಗ ಚಿತ್ರ ಹಿಟ್ ಆಗಲಿ ಎಂದು ಯುವರತ್ನ ಚಿತ್ರದ ಪೋಸ್ಟರ್ ಅನ್ನು ಶಿವಲಿಂಗದ ಮುಂದೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಹೌದು ದೇವಸ್ಥಾನವೊಂದರ ಲಿಂಗದ ಮುಂದೆ ಯುವರತ್ನ ಚಿತ್ರದ ಪೋಸ್ಟರ್ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಯುವರತ್ನ ಚಿತ್ರದ ಸಕ್ಸಸ್ ಕಾಣಲಿ ಎಂದು ಅಭಿಮಾನಿಗಳು ಬೇಡಿಕೊಂಡಿದ್ದಾರೆ.

 

 

 

ಮತ್ತೊಬ್ಬ ಅಭಿಮಾನಿ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಯುವರತ್ನ ದ ಪೋಸ್ಟರ್ ಅನ್ನು ಪುಣ್ಯಸ್ಥಾನದಲ್ಲಿ ಹಿಡಿದುಕೊಂಡು ಯುವರತ್ನ ಚಿತ್ರ ಯಶಸ್ಸು ಕಾಣಲಿ ಅಂತ ಬೇಡಿಕೊಂಡಿದ್ದಾನೆ. ಸಿನಿಮಾ ನಟನೊಬ್ಬನ ಚಿತ್ರದ ಯಶಸ್ಸು ಕಾಣಲಿ ಅಂತ ಅಭಿಮಾನಿಗಳು ಇಷ್ಟು ದೇವರ ಮೊರೆ ಹೋಗಿರುವುದನ್ನು ನೋಡಿದರೆ ಪುನೀತ್ ರಾಜ್ ಕುಮಾರ್ ಇಂತಹ ಅಭಿಮಾನಿಗಳನ್ನ ಪಡೆಯಲು ಕೋಟಿ ಜನ್ಮದ ಪುಣ್ಯ ಮಾಡಿರಲೇ ಬೇಕು ಅನಿಸುತ್ತದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article