ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆ ಬದಲಾವಣೆ ಆಗುವುದು ತುಂಬ ಅಪರೂಪ. ಯಾವುದಾದರೂ ವಿವಾದ ಅಥವಾ ವಿರೋಧ ವ್ಯಕ್ತವಾದಾಗ ಮಾತ್ರ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲಾಗುತ್ತದೆ. ಆದರೆ ಇದೀಗ ಯಾವುದೇ ರೀತಿಯ ಕಾರಣ ತಿಳಿಸದೆ ಶಿವಣ್ಣ ಮತ್ತು ಧೀರನ್ ರಾಮ್ ಕುಮಾರ್ ಅವರ ಅಭಿನಯದ ಚಿತ್ರಗಳ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಹೌದು ರಾಮ್ ಕುಮಾರ್ ಅವರ ಪುತ್ರ , ಅಣ್ಣಾವ್ರ ಮೊಮ್ಮಗ ಧೀರನ್ ರಾಮ್ ಕುಮಾರ್ ಅಭಿನಯದ ಮೊದಲ ಚಿತ್ರಕ್ಕೆ ದಾರಿ ತಪ್ಪಿದ ಮಗ ಎಂದು ಶೀರ್ಷಿಕೆ ಇಡಲಾಗಿತ್ತು.
ಆದರೆ ಇದೀಗ ಆ ಚಿತ್ರದ ಹೆಸರನ್ನು ಬದಲಾವಣೆ ಮಾಡಲಾಗಿದ್ದು “ಶಿವ143” ಎಂದು ಮರು ಶೀರ್ಷಿಕೆಯನ್ನು ಇಡಲಾಗಿದೆ. ಇನ್ನು ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಲು ರೆಡಿಯಾಗಿರುವ ಶಿವಣ್ಣ ಮತ್ತು ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ಚಿತ್ರ ಕೂಡ ಮರು ಶೀರ್ಷಿಕೆ ಆಗಿರುವ ಚಿತ್ರವೇ. ಹೌದು ಪಿ ವಾಸು ನಿರ್ದೇಶನದ ಈ ಚಿತ್ರದ ಹೆಸರನ್ನು ಮೊದಲಿಗೆ ಆನಂದ್ ಎಂದು ಇಡಲಾಗಿತ್ತು ಆದರೆ ಇದೀಗ ಆ ಹೆಸರನ್ನು ಆಯುಷ್ಮಾನ್ ಭವ ಎಂದು ಮಾಡಲಾಗಿದೆ. ಇನ್ನು ಈ ಚಿತ್ರದ ಹೆಸರನ್ನು ಬದಲಿಸುವಂತೆ ಎಲ್ಲಿಯೂ ಸಹ ವಿರೋಧ ವ್ಯಕ್ತವಾಗಿರಲಿಲ್ಲ ಆದರೂ ಸಹ ಚಿತ್ರತಂಡಗಳು ಯಾಕೆ ಈ ಹೆಸರುಗಳನ್ನು ಬದಲಾವಣೆ ಮಾಡಿಕೊಂಡವು ಎಂಬುದು ಪ್ರೇಕ್ಷಕರಲ್ಲಿ ಪ್ರಶ್ನೆಯನ್ನು ಮೂಡಿಸಿದೆ.