ಕಣ್ಣು ಮಂಜಾಗುತ್ತಿದ್ಯಾ!?, ಕನ್ನಡಕ ಮಾತ್ರ ಪರಿಹಾರವಲ್ಲ; ಇತರ ಆರೋಗ್ಯ ಸಮಸ್ಯೆ ಇರಬಹುದು!

Date:

ಕಣ್ಣು ಮಂಜಾಗುತ್ತಿದ್ಯಾ!?, ಕನ್ನಡಕ ಮಾತ್ರ ಪರಿಹಾರವಲ್ಲ; ಇತರ ಆರೋಗ್ಯ ಸಮಸ್ಯೆ ಇರಬಹುದು!

ರಕ್ತದೊತ್ತಡ, ಮಧುಮೇಹ ಇತ್ತೀಚೆಗೆ ತೀರಾ ಮಾಮೂಲಿ ಆಗಿರುವುದರಿಂದ ಜನ ಅದರ ಬಗ್ಗೆ ಹೆಚ್ಚು ನಿಗಾ ವಹಿಸದೆ ಯಡವಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಬಹುಮುಖ್ಯವಾಗಿ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಧುಮೇಹಿಗಳಿಗೆ ಕಣ್ಣಿನ ಸಮಸ್ಯೆ ಯಾವೆಲ್ಲಾ ಹಂತದಲ್ಲಿ ಕಾಡುತ್ತದೆ ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಕಣ್ಣು ಮಂಜಾಗುವುದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ. ವಯಸ್ಸಾದಂತೆ ದೃಷ್ಟಿ ದೋಷ ಎದುರಾಗುವುದು ಸಹಜವೂ ಹೌದು. ಆದರೆ, ಕಣ್ಣು ಹದಗೆಡುವುದಕ್ಕೆ ವಯಸ್ಸು ಆಗಬೇಕು ಎಂಬುದೊಂದೇ ಮಾನದಂಡವಲ್ಲ. ದೇಹದಲ್ಲಿ ಉಂಟಾಗುವ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳು ಕೂಡಾ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತವೆ. ಆ ಪೈಕಿ ಮಧುಮೇಹವೂ ಒಂದು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದರೆ ಕಣ್ಣುಗಳಿಗೆ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳ ಭಾಗಕ್ಕೆ ಪೂರೈಕೆಯಾಗುವ ರಕ್ತನಾಳಗಳಲ್ಲಿನ ರಕ್ತದ ಪ್ರಮಾಣ ಏರುಪೇರಾದರೆ ಸಮಸ್ಯೆಗಳು ಉಲ್ಬಣಿಸುತ್ತಾ ಹೋಗುತ್ತವೆ. ಮನುಷ್ಯನ ದೇಹದಲ್ಲಿ ಮಧುಮೇಹ ಸಮಸ್ಯೆಗೂ ರಕ್ತ ಸಂಚಾರಕ್ಕೂ ನೇರ ಸಂಬಂಧವಿದ್ದು, ರಕ್ತ ಸಂಚಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಆದಾಗ ಅದು ಅಡ್ಡಪರಿಣಾಮ ಬೀರುತ್ತದೆ.

ಕಣ್ಣು ಮಂಜಾಗುವುದಕ್ಕೆ ಇದೂ ಒಂದು ಕಾರಣವಾಗಿರುವ ಕಾರಣ ನಿಮಗೆ ಇಂತಹ ಅನುಭವ ಆಗುತ್ತಿದ್ದರೆ ತಕ್ಷಣವೇ ಸೂಕ್ತ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ. ರೆಟಿನಾ ಮೇಲೆ ನೇರ ಪರಿಣಾಮ ಬೀರಿ ಕಣ್ಣುಗಳನ್ನು ಮಂಜಾಗುವಂತೆ ಮಾಡುವ ಮಧುಮೇಹ, ನಿರ್ಲಕ್ಷ್ಯ ತೋರುವ ಎಷ್ಟೋ ಜನರಲ್ಲಿ ದೃಷ್ಟಿಯನ್ನೇ ಕ್ರಮೇಣವಾಗಿ ಕಿತ್ತುಕೊಳ್ಳುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಈ ರೀತಿ ಸಮಸ್ಯೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು

ನಿರಂತರವಾಗಿ ಕಣ್ಣುಗಳಲ್ಲಿ ರಕ್ತಸ್ರಾವ ಕಂಡುಬರುತ್ತಿದ್ದರೆ ಅದಕ್ಕೂ ಸಹ ದೇಹದಲ್ಲಿ ಮಧುಮೇಹದ ಪ್ರಮಾಣ ಧಿಕವಾಗಿರುವುದು ಕಾರಣ ಎಂದು ಹೇಳಬಹುದು. ರಕ್ತನಾಳಗಳಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ, ರಕ್ತನಾಳಗಳಿಗೆ ಸಮಸ್ಯೆ ಮಾಡುತ್ತದೆ. ಅಲ್ಲದೇ ಕೆಲವರಲ್ಲಿ ಕಣ್ಣುಗಳ ಮುಂಭಾಗದಲ್ಲಿ ಕೆಂಪು ಬಣ್ಣದ ಚುಕ್ಕೆಗಳು ಉಂಟಾಗಿ ಕಣ್ಣುಗಳಲ್ಲಿ ಕಸ ಬಿದ್ದಂತೆ ಕಾಣುವುದು ಕೂಡಾ ಮಧುಮೇಹದ ಲಕ್ಷಣವಾಗಿರುತ್ತದೆ. ಮಧುಮೇಹ ಸಮಸ್ಯೆ ಇರುವವರಿಗೆ ಕಣ್ಣಿಗೆ ಮಿಂಚು ಹೊಡೆದಂತೆ ಅನುಭವ ಆಗುವ ಸಾಧ್ಯತೆ ಇರುತ್ತದೆ. ಕಣ್ಣುಗಳಲ್ಲಿ ಕಂಡುಬರುವ ದ್ರವದ ಅಂಶ ಕಣ್ಣುಗುಡ್ಡೆಯ ಮೇಲೆ ಹಾದು ಹೋಗುವುದರಿಂದ ಕೂಡಾ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ

ಸಾಮಾನ್ಯವಾಗಿ ಕಣ್ಣು ಮಂಜಾದಾಗ ನಮ್ಮ ದೃಷ್ಟಿಗೆ ಯಾವುದೂ ಗೋಚರಿಸುವುದಿಲ್ಲ. ಆದರೆ ಮಧುಮೇಹಿಗಳಿಗೆ ಅದಷ್ಟೇ ಅಲ್ಲದೆ ಕಣ್ಣುಗಳ ಅಕ್ಕಪಕ್ಕ ಕೂಡಾ ಸರಿಯಾಗಿ ಕಾಣುವುದಿಲ್ಲ. ಇದು ಮಧುಮೇಹದ ಅನಿಯಂತ್ರಿತ ಸ್ಥಿತಿ ಆಗಿರುತ್ತದೆ. ಡಯಾಬಿಟಿಕ್ ರೆಟಿನೋಪತಿ ಸಮಸ್ಯೆಗೆ ಒಳಪಟ್ಟ ಜನರ ಕಣ್ಣುಗಳ ಮಧ್ಯ ಭಾಗದಲ್ಲಿ ಬಣ್ಣ ಬಣ್ಣದ ಚುಕ್ಕೆ ಬೀಳುವ ಸಾಧ್ಯತೆ ಇರುತ್ತದೆ. ಇದು ರೆಟಿನಾದಲ್ಲಿ ಉಂಟಾಗುವ ಸಮಸ್ಯೆ ಆಗಿದ್ದು, ಎದುರಿಗಿರುವ ಯಾವುದಾದರೂ ವಸ್ತುವಿನ ಗಾತ್ರವನ್ನು ಸರಿಯಾಗಿ ಅಳೆಯಲು ತೊಂದರೆ ಮಾಡುತ್ತದೆ.

ಅಂತೆಯೇ, ಮಧುಮೇಹದ ಸಮಸ್ಯೆ ಇದ್ದವರಿಗೆ ಕಣ್ಣುಗಳಲ್ಲಿ ಆಗಾಗ ಒತ್ತಡ ಉಂಟಾಗುತ್ತಿರುತ್ತದೆ. ಕಣ್ಣುಗಳ ಭಾಗದಲ್ಲಿ ನೋವು ಅಥವಾ ತಲೆನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಒಂದು ವೇಳೆ ತಲೆನೋವಿನ ಜೊತೆ ಕಣ್ಣಿನ ನೋವು ಇತ್ತು ಎಂದರೆ ಅದನ್ನು ಮೈಗ್ರೇನ್ ಅಥವಾ ಬೇರೆ ಬಗೆಯ ತಲೆನೋವು ಎಂದು ನಿರ್ಲಕ್ಷ್ಯ ಮಾಡಬೇಡಿ.

Share post:

Subscribe

spot_imgspot_img

Popular

More like this
Related

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಮನರೇಗಾ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ ಸುಧಾರಣೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್...

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ...

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ...