ಕನ್ನಡದ ಮೈನಾ & ಕೋಟಿಗೊಬ್ಬ 2 ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟಿ ನಿತ್ಯಾ ಮೆನನ್ ಅವರು ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿಯೂ ಸಹ ಅಭಿನಯಿಸಿದ್ದಾರೆ. ಮೂಲತಃ ಕೇರಳದ ನಟಿಯಾಗಿರುವ ನಿತ್ಯಾ ಮೆನನ್ ಅವರು ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಸಹ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ನಟಿ ಕುರಿತು ಇದೀಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ.
ಹೌದು ತಮಿಳು ಮಾಧ್ಯಮವೊಂದು ನಿತ್ಯಾ ಮೆನನ್ ಅವರ ಬಗ್ಗೆ ಸುದ್ದಿ ಮಾಡುವ ಸಂದರ್ಭದಲ್ಲಿ ಶ್ರೀಮತಿ ನಿತ್ಯಾ ಮೆನನ್ ಎಂದು ಬರೆದಿತ್ತು. ಇದೀಗ ಎಲ್ಲೆಡೆ ಈ ವಿಷಯದ ಕುರಿತು ಭಾರಿ ಚರ್ಚೆಗಳಾಗುತ್ತಿದ್ದು ನಿತ್ಯ ಮೆನನ್ ಅವರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ವಿಷಯದ ಕುರಿತು ನಿತ್ಯಾ ಏನು ಸಹ ಮಾತನಾಡಿಲ್ಲ, ಮುಂದೆ ಅವರು ಯಾವ ರೀತಿ ಇದರ ಬಗ್ಗೆ ಹೇಳುತ್ತಾರೋ ಕಾದುನೋಡಬೇಕು.