ಕನಕಪುರ ಶ್ರೀನಿವಾಸ್ ಅವರ ವಿರುದ್ದ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ ಪ್ರೇಮ್..! ಹೇಳಿದ್ದೇನು..?
ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಜೋಗಿ ಪ್ರೇಮ್ ತಮಗೆ ನೀಡಬೇಕಾದ 10 ಲಕ್ಷ ಹಣವನ್ನ 10 ವರ್ಷದ ಹಿಂದೆ ಪಡೆದು ಇನ್ನು 4 ಲಕ್ಷವನ್ನ ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಅಂತ ಪ್ರೇಮ್ ಮನೆಮುಂದೆ ಧರಣಿ ಕೂತಿದ್ರು.. ಜೊತೆಗೆ ಬಡ ರೈತನ ದುಡ್ಡಿನಲ್ಲೇ ಇವರು ಶೋಕಿ ಮಾಡಬೇಕ ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ರು..
ಈ ಘಟನೆ ನಡೆಯುತ್ತಿದ್ದ ಹಾಗೆ ಪ್ರೇಮ್ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.. ಜೊತೆಗೆ ತಮಗೆ ಮಾನಸಿಕ ಹಿಂಸೆಯಾಗುತ್ತಿದೆ.. ನನಗೆ ನ್ಯಾಯ ಕೊಡಿಸಿ ಅಂತ ದೂರು ನೀಡಿದ್ದಾರೆ..10 ವರ್ಷದ ಹಿಂದೆ ನನ್ನ ಜೊತೆ ಸಿನಿಮಾ ಮಾಡೋದಾಗಿ ಹೇಳಿ 10 ಲಕ್ಷ ಹಣವನ್ನ ನೀಡಿದ್ರು.. ಇದಕ್ಕಾಗಿ ನಾನು ಸಿದ್ದತೆಯನ್ನ ಮಾಡಿಕೊಂಡಿದ್ದೆ, ವರ್ಷಗಳವರೆಗೆ ಅವರಿಗಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡೆ.. ಆದರೆ ಶ್ರೀನಿವಾಸ್ ಅವರೆ ಚಿತ್ರ ಮಾಡಲಿಲ್ಲ.. ಹೀಗಾಗೆ ಅಂದು ನಾನು ಹಣವನ್ನ ಅದಕ್ಕಾಗಿ ವ್ಯಯ ಮಾಡಿದ್ದಾಗಿ ತಿಳಿಸಿದ್ದಾರೆ..







