ರಶ್ಮಿಕಾ ಮಂದಣ್ಣ ಹೃದಯ ಚೂರ್ ಚೂರ್ ಆಯ್ತಂತೆ..!! ಕಾರಣವೇನು ಗೊತ್ತಾ..?

Must read

ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗ್ತಾನೆ ಇರ್ತಾರೆ. ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಹಾರಿರುವ ಈ ಬೆಡಗಿಗೆ ಈಗ ಹೃದಯ ಚೂರು ಚೂರು ಆಗಿದೆ ಅಂತೆ.. ಯಾಕೆ ಹಿಂಗ್ ಆಯ್ತು,‌ ಕಾರಣವೇನು ರಶ್ಮಿಕಾ ಅಂದ್ರೆ ಹೀಗೆ ಹೇಳ್ತಿದ್ದಾರೆ ಕೇಳಿ..ಈ ಬಗ್ಗೆ ನಾನು ಕೇಳಿದೆ ಆದರೆ, ಇದು ಇಷ್ಟೊಂದು ಹಾಳಾಗಿದೆ ಎಂದು ಗೊತ್ತಿರಲಿಲ್ಲ. ಇದನ್ನು ಪ್ರತ್ಯಕ್ಷವಾಗಿ ಕಂಡು ನನ್ನ ಹೃದಯ ಚೂರ್ ಚೂರ್ ಆಗಿದೆ ಎಂದು ರಶ್ಮಿಕಾ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದರ ಬಗ್ಗೆ ಅಂತೀರಾ? ರಶ್ಮಿಕಾ ಹೇಳುತ್ತಿರೋದು ಬೆಳ್ಳಂದೂರು ಕೆರೆ ಬಗ್ಗೆ.ರಶ್ಮಿಕಾ ಬೆಳ್ಳಂದೂರು ಕೆರೆಯಲ್ಲಿ ಜಲ ಮಾಲಿನ್ಯದ ಕುರಿತು ಅರಿವು ಮೂಡಿಸಲು ಡಾಕ್ಯುಮೆಂಟರಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಅದರ ಫೋಟೋಶೂಟ್‍ ನಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ಈ ರೀತಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article