ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕಿರಿಯರಿಂದ ಹಿಡಿದು ಹಿರಿಯರವರೆಗೆ ಸಹ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೊದಲ ಎರಡು ಸೀಸನ್ ಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆ ಇತ್ತು. ಆದರೆ ಮೂರನೇ ಸೀಸನ್ಗೆ ನಿರೂಪಣೆಯ ಬದಲಾವಣೆ ಮಾಡಲಾಯಿತು, ಹೌದು ಮೂರನೇ ಸೀಸನ್ನ ನಿರೂಪಣೆಯನ್ನು ರಮೇಶ್ ಅರವಿಂದ್ ಅವರು ಮಾಡಿಕೊಟ್ಟಿದ್ದರು ಮತ್ತೆ ನಾಲ್ಕನೇ ಸೀಸನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಿರೂಪಣೆ ಇದೆ.
ಇನ್ನು ನಾಲ್ಕನೇ ಸೀಸನ್ ಗೆ ಅಪ್ಪು ಅವರ ನಿರೂಪಣೆ ಕಂಡು ಪ್ರೇಕ್ಷಕರು ಸಖತ್ ಖುಷಿ ಪಟ್ಟರು ಆದರೆ ಇದೀಗ ಲೀಕ್ ಆಗಿರುವ ಕೆಲ ಫೋಟೋಗಳನ್ನು ನೋಡಿದ ಮೇಲೆ ವೀಕ್ಷಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ ಯಾಕೆಂದರೆ ಪುನೀತ್ ಅವರು ನಡೆಸಿಕೊಡುತ್ತಿದ್ದ ಕೋಟ್ಯಧಿಪತಿ ಕಾರ್ಯಕ್ರಮವನ್ನು ರಚಿತಾ ರಾಮ್ ಅವರು ನಡೆಸಿಕೊಡುತ್ತಿದ್ದಾರೆ. ಹೌದು ಲೀಕ್ ಆಗಿರುವ ಫೋಟೊಗಳಲ್ಲಿ ರಚಿತಾ ರಾಮ್ ಅವರು ನಿರೂಪಣೆಯನ್ನು ನಡೆಸಿಕೊಡುತ್ತಿದ್ದಾರೆ ಪುನೀತ್ ಅವರು ಹಾಟ್ ಸೀಟ್ ನಲ್ಲಿ ಕಂಟೆಸ್ಟೆಂಟ್ ಆಗಿ ಕುಳಿತಿದ್ದಾರೆ. ಈ ಮೂಲಕ ಪುನೀತ್ ಅವರು ಕಂಟೆಸ್ಟೆಂಟ್ ಆಗಿ ಆಟ ಆಡುವುದರ ಮೂಲಕ ಈ ಸೀಸನ್ಗೆ ತೆರೆ ಎಳೆಯಲಿದ್ದಾರೆ.