ಕರಿಬೇವಿನ ಎಲೆ ನೆನೆಸಿ ನೀರು ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಭಾರತೀಯ ಆಹಾರದಲ್ಲಿ ಕರಿಬೇವಿನ ಎಲೆಗಳಿಗೆ ತುಂಬಾ ಮಹತ್ವವಿದೆ. ಅದರಲ್ಲೂ ಕರಿಬೇವಿನ ಎಲೆಗಳನ್ನು ದಕ್ಷಿಣ ಭಾರತದ ಆಹಾರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಡುಗೆ ಪ್ರಕ್ರಿಯೆಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಹೆಚ್ಚುವರಿ ಸುವಾನೆಗಾಗಿ ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಕೇವಲ ರುಚಿಗಷ್ಟೇ ಅಲ್ಲ ಕರಿಬೇವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹೀಗಾಗಿಯೇ ಕರಿಬೇವನ್ನು ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ.
ಬಿಪಿ ಮತ್ತು ಸಕ್ಕರೆ ಕಾಯಿಲೆ ಅಣ್ಣ ತಮ್ಮ ಇದ್ದಂತೆ. ಮನೆಯಲ್ಲಿ ಒಬ್ಬರಿಗೆ ಬಿಪಿ ಇದ್ದರೆ ಇನ್ನೊಬ್ಬರಿಗೆ ಶುಗರ್ ಇರುತ್ತದೆ. ಆದರೆ ಇವೆರಡಕ್ಕೂ ರಾಮಬಾಣ ಕರಿಬೇವಿನ ಸೊಪ್ಪು!
ಕರಿಬೇವಿನ ಎಲೆಗಳ ನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಅದರಲ್ಲಿರುವ ನಾರಿನ ಅಂಶ ನಿಮಗೆ ಸಿಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿ ನೀವು ಸೇವಿಸಿದ ಆಹಾರದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಬೇಗನೆ ಬಿಡುಗಡೆ ಮಾಡುವುದಿಲ್ಲ. ಇದರಿಂದ ನಿಮ್ಮ ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪುವುದಿಲ್ಲ.
ಕರಿಬೇವಿನ ಎಲೆಗಳು ನಮ್ಮ ದೇಹದಲ್ಲಿ ಆಕ್ಸಿಡೆಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ನಮ್ಮ ಲಿವರ್ ಭಾಗವನ್ನು ರಕ್ಷಿಸುತ್ತವೆ. ವಿಷಕಾರಿ ಅಂಶಗಳನ್ನು ದೂರ ಮಾಡುವುದರ ಜೊತೆಗೆ ಅವುಗಳ ಆಂಟಿ ಆಕ್ಸಿಡೆಂಟ್ ಅಂಶಗಳು ಲಿವರ್ ಭಾಗವನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತವೆ.
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ವಾಂತಿ, ತಲೆ ನೋವು, ವಾಕರಿಕೆ ಬಂದಂತೆ ಆಗುವುದು ಇತ್ಯಾದಿ ಅಸ್ವಸ್ಥತೆಗಳು ಕಾಣಿಸುತ್ತಿರುತ್ತವೆ. ಗರ್ಭಿಣಿಯರಲ್ಲಿ ಈ ರೀತಿ ಆಗುವುದು ಸಹಜ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ರಾಮಬಾಣವಾಗಿ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯು ವುದು ಉತ್ತಮ ಎಂದು ತಿಳಿದವರು ಹೇಳುತ್ತಾರೆ.
ನಮ್ಮ ದೇಹಕ್ಕೆ ವಿಶೇಷವಾಗಿ ಜೀವಕೋಶಗಳ ಕಾರ್ಯ ಚಟುವಟಿಕೆಗೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಕರಿಬೇವಿನ ಎಲೆಗಳು ನಮಗೆ ಒದಗಿಸುತ್ತವೆ.
ಇದರಿಂದ ಹೃದಯದ ಕಾಯಿಲೆಗಳು ಮತ್ತು ಹೃದಯ ರಕ್ತನಾಳದ ಸಮಸ್ಯೆಗಳು ದೂರವಾಗುತ್ತವೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಇದು ಸಾಧ್ಯವಾಗುತ್ತದೆ.
ಕರಿಬೇವಿನ ಎಲೆಗಳ ರಸ ಅಥವಾ ನೀರು ಸೇವನೆ ಪ್ರತಿದಿನ ನಿಮ್ಮ ಅಭ್ಯಾಸ ವಾಗಿದ್ದರೆ, ನಿಮ್ಮ ದೇಹದ ತೂಕವನ್ನು ಕರಗಿಸಲು ನೀವು ಅಷ್ಟೊಂದು ಕಷ್ಟಪಡಬೇಕಾಗಿಲ್ಲ.
ಏಕೆಂದರೆ ಇದರಲ್ಲಿ ನಿಮ್ಮ ದೇಹದಲ್ಲಿ ಬೇಡದ ಕೊಬ್ಬು ಹಾಗೂ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆ. ಜೊತೆಗೆ ನಿಮ್ಮ ದೇಹವನ್ನು ಇದು ಒಳಗಿನಿಂದಲೇ ಸ್ವಚ್ಛ ಮಾಡುತ್ತದೆ. ಹೀಗಾಗಿ ಬಹಳ ಬೇಗನೆ ನೀವು ಅಂದುಕೊಂಡ ತೂಕಕ್ಕೆ ತಲುಪ ಬಹುದು
ಕರಿಬೇವಿನ ಎಲೆಗಳು ಸಾಮಾನ್ಯವಾಗಿ ನಮ್ಮ ದೇಹಕ್ಕೆ ತಂಪಿನ ವಾತಾವರಣವನ್ನು ಉಂಟು ಮಾಡುತ್ತವೆ. ಕಣ್ಣುಗಳ ದೃಷ್ಟಿ ವೃದ್ಧಿಸು ವಲ್ಲಿ ಕೂಡ ಇದು ತುಂಬಾ ಪ್ರಯೋಜನಕಾರಿ ಆಗಿರುತ್ತದೆ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಪ್ರಮಾಣ ಹೇರಳವಾಗಿದ್ದು, ಕಣ್ಣುಗಳನ್ನು ದೀರ್ಘಕಾಲ ದೃಷ್ಟಿ ದೋಷ ಬರದಂತೆ ಕಾಪಾಡಲು ಇದು ನೆರವಾಗುತ್ತದೆ ಎಂದು ಹೇಳಲಾಗಿದೆ.

ಕರಿಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಆಗಾಗ ತಲೆ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾ ಗುತ್ತದೆ ಎಂದು ಬಲವಾಗಿ ನಂಬಲಾಗಿದೆ. ಏಕೆಂದರೆ ಇದರಲ್ಲಿ ತಲೆ ಕೂದಲಿನ ಬೇರುಗಳಿಗೆ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ಮತ್ತು ಬೀಟಾ ಕ್ಯಾರೋಟಿನ್ ಹೆಚ್ಚಾಗಿದೆ. ಇದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಿ ತಲೆ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ
ಕರಿಬೇವಿನ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಇದ್ದು ಇದು ನಮ್ಮ ದೇಹದ ಯಾವುದೇ ಭಾಗದಲ್ಲಿ ಕಂಡು ಬರುವ ಫ್ರೀ ರಾಡಿಕಲ್ ಗಳನ್ನು ಮಣಿಸುತ್ತದೆ. ಇದರಿಂದ ನಮ್ಮ ದೇಹದ ಜೀವಕೋಶ ಗಳಿಗೆ ರಕ್ಷಾ ಕವಚವಾಗಿ ಕರಿಬೇವಿನ ಸೊಪ್ಪು ಕೆಲಸ ಮಾಡುತ್ತದೆ. ವಿವಿಧ ಆರೋಗ್ಯ ಸಮಸ್ಯೆಗಳ ವಿರುದ್ಧ ನಾವು ರಕ್ಷಣೆ ಪಡೆದುಕೊಳ್ಳಬಹುದು.