No menu items!
10.9 C
Munich
Sunday, September 27, 2026

ಬೆಂಗಳೂರಿನ ಶೆಡ್ ನಲ್ಲಿ ಡಬಲ್ ಮರ್ಡರ್ ಕೇಸ್: ಆರೋಪಿ ಅಂದರ್!

Must read

ಬೆಂಗಳೂರಿನ ಶೆಡ್ ನಲ್ಲಿ ಡಬಲ್ ಮರ್ಡರ್ ಕೇಸ್: ಆರೋಪಿ ಅಂದರ್!

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಸುರೇಶ್ ಬಂಧಿತ ಆರೋಪಿ. ಈತ ನಾಗೇಶ್ (55) ಮತ್ತು ಮಂಜುನಾಥ್ (50) ಎಂಬವರನ್ನ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ.

ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ರಾಡ್‌ನಿಂದ ತಲೆಗೆ ಹೊಡೆದು ಇಬ್ಬರ ಹತ್ಯೆ ಮಾಡಿದ್ದ. ನಾಗೇಶ್ ಮತ್ತು ಮಂಜುನಾಥ್‌ನಿಂದ ಸದಾ ಸುರೇಶ್‌ಗೆ ಬೈಯ್ಯುತ್ತಿದ್ದರು. ಕುಡಿದ ಬಳಿಕ ನೀನು ಕಳ್ಳ, ನಿನ್ನ ಮೇಲೆ ಕೇಸ್‌ಗಳಿವೆ ಎಂದು ಸದಾ ಹಿಯಾಳಿಸುತ್ತಿದ್ದರು.

ಕೊಲೆಯಾದ ಶುಕ್ರವಾರ ರಾತ್ರಿ ಕೂಡ ಕುಡಿದು ನಿಂದನೆ ಮಾಡಿದ್ದಾರೆ. ಇದರಿಂದ ಬೇಸತ್ತು ಇಬ್ಬರನ್ನ ರಾಡ್‌ನಿಂದ ಹೊಡದು ಕೊಲೆ ಮಾಡಿ ಆರೋಪಿ ಸುರೇಶ್‌ ಪರಾರಿಯಾಗಿದ್ದ. ಬೆಂಗಳೂರು ಉತ್ತರ ತಾಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಕೊಲೆ ನಡೆದಿತ್ತು

ಈ ಮೂವರು ಸಹ ಬಸ್‌ಗಳ ಸರ್ವಿಸ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ,

- Advertisement -spot_img

More articles

- Advertisement -spot_img

Latest article