ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ ಪುಷ್ಪ?

0
25

 ‘ ಪುಷ್ಪ ‘ ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು , ಮೊದಲ ಭಾಗ ‘ ಪುಷ್ಪ : ದಿ ರೈಸ್ ‘​ ಡಿ . 17 ರಂದು ತೆರೆಗೆ ಅಪ್ಪಳಿಸಲಿದೆ . ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ . ಬುಧವಾರದಂದು ಇಡೀ ಚಿತ್ರತಂಡ ಬೆಂಗಳೂರಿನಲ್ಲಿ ಸಹ ಪತ್ರಿಕಾಗೋಷ್ಠಿ ಮಾಡಿದ್ದರು . ಈ ಸಂರ್ದಭದಲ್ಲಿ ಚಿತ್ರತಂಡಕ್ಕೆ ಹಲವು ಆಯಾಮಗಳಲ್ಲಿ ಕನ್ನಡದ ಪತ್ರಕರ್ತರು ಚಳಿ ಬಿಡಿಸಿದರು . ಕನ್ನಡ ಪತ್ರಕರ್ತರ ಪ್ರಶ್ನೆಗಳಿಗೆ ‘ ಪುಷ್ಪ ‘ ಚಿತ್ರತಂಡವು ಸಹ ತಬ್ಬಿಬ್ಬು ಆಗಿದ್ದಾರೆ . ಸದ್ಯ , ಹೊಸದೊಂದು ಕಾರಣಕ್ಕೆ ಕನ್ನಡಿಗರು ಈ ಪ್ಯಾನ್ ಇಂಡಿಯನ್ ಸಿನಿಮಾ ವಿರುದ್ಧ ಗರಂ ಆಗಿದ್ದು , ‘ ಪುಷ್ಪ ‘ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ . 

 

ಮೊದಲು ನಟಿ ರಶ್ಮಿಕಾ ಮತ್ತು ಸಿನಿಮಾ ತಂಡದ ಬೇರೆ ಬೇರೆ ನಟರು ಕನ್ನಡದಲ್ಲಿ ಡಬ್ಬಿಂಗ್ ಮಾಡಿಲ್ಲ ಎನ್ನುವ ಕಾರಣಕ್ಕೆ ‘ ಪುಷ್ಪ ‘ ಚಿತ್ರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು . ನಂತರ , ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಲೇಟ್ ಆಗಿ ಅಗಮಿಸಿದ ನಟ ಅಲ್ಲು ಅರ್ಜುನ್ ಅವರನ್ನು ಪತ್ರಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ . ಆಗ , ಅಲ್ಲು ಅರ್ಜುನ್ ಎಲ್ಲಾ ಪತ್ರಕರ್ತರ ಕ್ಷಮೆಯಾಚಿಸಿದ್ದಾರೆ . ಇದೀಗ ಬಂದ ಸುದ್ದಿಯ ಪ್ರಕಾರ ‘ ಪುಷ್ಪ ‘ ಚಿತ್ರದ ಕನ್ನಡ ಅವತರಣೆಕೆ ನಮ್ಮ ರಾಜ್ಯದಲ್ಲಿ ಕೇವಲ 3 ಥಿಯೇಟರ್​ಗಳಲ್ಲಿ ತೆರೆಕಾಣಲಿದೆ . ಆದರೆ , ಚಿತ್ರದ ತೆಲಗು ವರ್ಷನ್ ಗೆ ನೂರಕ್ಕಿಂತ ಹೆಚ್ಚು ಸ್ಕ್ರೀನ್ ಗಳು ಮೀಸಲಿಟ್ಟಿದ್ದಾರೆ . ತಮಿಳು ನಾಡಿನಲ್ಲಿ ತಮಿಳು ವರ್ಷನ್ ಬಿಡುಗಡೆಯಾಗಲೂ ಹೆಚ್ಚು ಥಿಯೇಟರ್​ಗಳು . ಕೇರಳದಲ್ಲಿ ಮಲಯಾಳಂ ವರ್ಷನ್ ಗೆ ಹೆಚ್ಚು ಥಿಯೇಟರ್ ಮತ್ತು ಹಿಂದಿ ವರ್ಷನ್ ಗೂ ಹೆಚ್ಚು ಥಿಯೇಟರ್​ಗಳನ್ನು ನೀಡಲಾಗಿದೆ . ಆದ್ರೆ ಕನ್ನಡದ ವರ್ಷನ್ ನಮ್ಮ ಕರ್ನಾಟಕದಲ್ಲೇ ಕೇವಲ ಮೂರೇ ಮೂರು ಥಿಯೇಟರ್​ಗಳಲ್ಲಿ ತೆರೆಕಾಣಲಿರುವುದು ನಿಜಕ್ಕೂ ವಿಪರ್ಯಾಸವೆ ಸರಿ . 

ಹೌದು , ಕನ್ನಡ ಭಾಷೆಯ ಮೇಲೆ ‘ ಪುಷ್ಪ ‘ ಚಿತ್ರತಂಡಕ್ಕೆ ಈ ತಾತ್ಸರ ಏಕೆ ? ಕನ್ನಡದಲ್ಲಿ ಸಿನಿಮಾವನ್ನ 3 ಥಿಯೇಟರ್​ಗಳಲ್ಲಿ ರಿಲೀಸ್ ಮಾಡುವ ಹಾಂಗಿದ್ರೆ ಯಾಕೆ ಬೇಕಿತ್ತು ಕನ್ನಡ ಡಬ್ಬಿಂಗ್ ? ಪುಷ್ಪ ಸಿನಿಮಾ ಯಾವ ಪುರುಷಾರ್ಥಕ್ಕಾಗಿ ಕನ್ನಡಕ್ಕೆ ಡಬ್ ಮಾಡಿದ್ರು ? ಸ್ಯಾಟ್ ಲೈಟ್ ಆಡಿಯೋ ರೈಟ್ಸ್ ದುಡ್ಡಿಗಾಗಿ ಕನ್ನಡ ಡಬ್ಬಿಂಗ್ ಮಾಡಿದ್ರಾ ? ಕನ್ನಡದ ವಿತರಕರಿಗೆ ಇಲ್ವಾ ಭಾಷಾಭಿಮಾನ ? ಕನ್ನಡ ವರ್ಷನ್ ವಿತರಕರು ಯಾಕೆ ಹೆಚ್ಚು ಸ್ಕ್ರೀನ್​ಗಳನ್ನು ಬುಕ್ ಮಾಡಿಲ್ಲ ? ಎಂಬ ಹಲವು ಪ್ರಶ್ನೆಗಳನ್ನು ಈಗ ಕ್ನನಡಿಗರು ಚಿತ್ರತಂಡದ ವಿರುದ್ಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೇಳಲು ಆರಂಭಿಸಿದ್ದಾರೆ . ತೆಲುಗು ವರ್ಷನ್​ನ ಟಿಕೆಟ್​ಗಳು ಈಗಾಗಲೇ ಚಿತ್ರಮಂದಿರಗಳಲ್ಲಿ ಬಹುತೇಕ ಸೇಲ್ ಆಗಿದ್ದು , ಟಿಕೆಟ್ ಬುಕ್ ಮಾಡಲು ಹೋದ ಕನ್ನಡಿಗರಿಗೆ ತುಂಬಾನೆ ಕೋಪ ಬಂದಿದೆ . ಟ್ವಿಟರ್​ನಲ್ಲಿ #BoyCottPushpaInKarnataka ಮತ್ತು #BoyCottPushpaInKannada ಹ್ಯಾಶ್​​ಟ್ಯಾಗ್​ಗಳು ಸಖತ್ ಟ್ರೆಂಡಿಂಗ್​ನಲ್ಲಿವೆ . ‘ ಪುಷ್ಪ ‘ ಸಿನಿಮಾ ವಿರುದ್ಧ ಹಲವು ಮೀಮ್​ಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ .

LEAVE A REPLY

Please enter your comment!
Please enter your name here