ಸುರಕ್ಷಿತ ಲೈಂಗಿಕತೆ, ಅನಗತ್ಯ ಗರ್ಭ ಧರಿಸುವುದನ್ನು ತಡೆಯುವುದಲ್ಲದೇ, ಲೈಂಗಿಕ ರೋಗ, ಸೋಂಕುಗಳನ್ನು ತಡೆಯುವಲ್ಲಿಯೂ ಪುರುಷರು ಹಾಗೂ ಮಹಿಳೆಯರು ಬಳಸುವ ಕಾಂಡೋಮ್ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಏಡ್ಸ್ನಂಥ ಮಾಹಾಮಾರಿ ರೋಗ ಹರಡುವುದನ್ನೂ ತಡೆಯುತ್ತದೆ. ಬಹಳ ಕಡಿಮೆ ವೆಚ್ಚದಲ್ಲಿ ಬಳಸಬಹುದಾದ ಗರ್ಭನಿರೋಧಕ ವಿಧಾನವಿದು. ತೆಳು ರಬ್ಬರ್ನಿಂದ ಮಾಡಿರುವ ಈ ಕಾಂಡೋಮ್, ಗರ್ಭನಿರೋಧಕ ಮಾತ್ರಗಳಿಗಿಂತಲೂ ಸಾವಿರ ಪಟ್ಟು ಸುರಕ್ಷಿತ ಹಾಗೂ ಆರೋಗ್ಯಕಾರಿ. ಆದರೆ, ಈ ಕಾಂಡೋಮ್ ಅನ್ನು ಬೇಕಾಬಿಟ್ಟಿ ಬಳಸಿದರೆ ಮಾತ್ರ ವೇಸ್ಟ್.
ಪ್ಯಾಕನ್ನು ಸರಿಯಾಗಿ ಓಪನ್ ಮಾಡಿ. ಕಾಂಡೋಮನ್ನು ಹರಿಯಬೇಡಿ. ಸೂಕ್ತ ರೀತಿಯಲ್ಲಿ ಪ್ಯಾಕನ್ನು ಓಪನ್ ಮಾಡುವ ಬಗ್ಗೆ ಇರಲಿ ಎಚ್ಚರ.
2. ವಿವಿಧ ಸುಗಂಧ ಇರೋ, ವಿಭಿನ್ನ ಸೈಜ್ಗಳಲ್ಲಿ ಕಾಂಡೋಮ್ಗಳು ಲಭ್ಯ. ಶಿಶ್ನಕ್ಕೆ ಸರಿ ಹೊಂದುವಂಥ ಸೈಜನ್ನೇ ಆರಿಸಿಕೊಳ್ಳಿ.
3. ಅಲರ್ಜಿಯಾಗೋ ಛಾನ್ಸ್ ಇದ್ಯಾ ಚೆಕ್ ಮಾಡಿಕೊಳ್ಳಿ. ಕಾಂಡೋಮ್ಗಳಲ್ಲಿ ಬಳಸುವ ದ್ರವ್ಯ ಚರ್ಮಕ್ಕೆ ಹೊಂದುವುದೇ ಎಂದು ಮೊದಲ ಬಾರಿ ಕಾಂಡೋಮ್ ಬಳಸುವವರು ಪರೀಕ್ಷಿಸಿಕೊಳ್ಳಬೇಕು.
4. ಒಮ್ಮೆ ಬಳಸಿದ ಕಾಂಡೋಮನ್ನು ಮತ್ತೆ ಬಳಸುವವರೂ ಇದ್ದಾರೆ! ಬಳಸಿದ್ದನ್ನೇ ತೊಳೆದು ಮರು ಬಳಸುತ್ತಾರೆ ಮಂದಿ. ಇದರಿಂದ ಸೋಂಕು ಹರಡಬಹುದು.
5. ಕಾಂಡೋಮ್ಗೂ ಎಕ್ಸ್ಪೈರಿ ಡೇಟ್ ಇರುತ್ತೆ. ಕೊಳ್ಳುವ ಮುನ್ನವೇ ಗಮನಿಸಬೇಕಾಗುತ್ತೆ.
6. ಕಾಂಡೋಮ್ ಬಳಸುವಾಗಲೇ ರಿಲೀಸ್ ಆದ ವೀರ್ಯ ಸ್ಟೋರ್ ಆಗುವಂತೆ ತುಸು ಜಾಗ ಬಿಟ್ಟಿರಬೇಕು.
ಒಟ್ಟಿನಲ್ಲಿ ಆರೋಗ್ಯಕರ ಲೈಂಗಕತೆ ದೃಷ್ಟಿಯಿಂದ ಕಾಂಡೋಮ್ ಬಳಸಿ, ಹರಡಬಹುದಾದ ಹಲವು ರೋಗಗಳನ್ನು ತಡೆಯಬಹುದು.