ಜೆಪಿ ಭವನದಲ್ಲಿ ಬೆಂಗಳೂರು ನಗರದ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು. ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆಆಹ್ವಾನವಿದ್ದ ಕಾರಣ ಹೋಗಿದ್ದಾರೆ ಯಾರ ದುಡ್ಡಿನಲ್ಲೂ ಕುಮಾರಸ್ವಾಮಿ ಹೋಗಿಲ್ಲ. ಅವರ ಸ್ವಂತ ಖರ್ಚಿನಲ್ಲಿ ಹೋಗಿದ್ದಾರೆ. ಅದಕ್ಕೂ ಹೋಗಬಾರದು ಅಂದರೆ ಹೇಗೆ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.
ಬಿಜೆಪಿ ಅವರು ಏನಾದರೂ ತಿಳಿದುಕೊಳ್ಳಲಿ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ, ನಾನೇ ಮುಂದೆ ನಿಂತು ಮೈತ್ರು ಸರ್ಕಾರ ಧಕ್ಕೆಯಾಗದಂತೆ, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ.ಆಗಸ್ಟ್ 20 ರಿಂದ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದರು