ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಕನ್ನಡ ಸಿನಿಮಾ ರಂಗಕ್ಕೆ ಹೊಸ ಭಾಷ್ಯವನ್ನು ಬರೆದಿತ್ತು. ಪ್ರಶಾಂತ್ ನೀಲ್ ಮತ್ತು ಟೀಮ್ ಕೆಜಿಎಫ್ ಚಾಪ್ಟರ್ 2 ಅನ್ನು ಆರಂಭಿಸಿದೆ.
ಕೆಜಿಎಫ್-2 ಚಿತ್ರೀಕರಣ ಶುರುವಾಗಿದೆ. ಸ್ವಲ್ಪ ದಿನ ಶೂಟಿಂಗ್ ನಿಂದ ದೂರ ಉಳಿದಿದ್ದ ನಟ ಯಶ್ ಜೂನ್ 6ರಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆಜಿಎಫ್ಗೆ ತಂಡವನ್ನು ಬಾಲಿವುಡ್ ಟಾಪ್ ನಟಿಯೊಬ್ಬರು ಸೇರಿಕೊಳ್ಳಲಿದ್ದಾರೆ. 10 ವರ್ಷದ ಹಿಂದೆ ತೆರೆಕಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನನ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದ ರಮೀನಾ ಟಂಡನ್ ಕೆಜಿಎಫ್ ನಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ವಿತರಣೆಯನ್ನು ಟಂಡನ್ ಅವರ ಪತಿ ಅನಿಲ್ ತಡಾನಿ ಮಾಡಿದ್ದರು. ಅವರು ಕೆಜಿಎಫ್ 2 ವಿತರಣೆಯನ್ನೂ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಟಂಡನ್ ಸಹ ನಟಿಸುತ್ತಿದ್ದಾರಂತೆ.
ರವಿನಾ ಟಂಡನ್ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರ ಮಾಡಲಿದ್ದಾರೆ ಎಂದು ವರದಿಯಾಗಿದೆ. 1970-80ರ ದಶಕದ ಪ್ರಧಾನಿ ಕ್ಯಾರೆಕ್ಟರ್ ಅಂದರೆ ಆಗ ನಮ್ಮ ಪ್ರಧಾನಿ ಆಗಿದ್ದವರು ಇಂದಿರಾ ಅವರೇ. ಹೀಗಾಗಿ ರವೀನಾ ಇಂದಿರಾ ಅವರಂಥಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆಜಿಎಫ್ ಈಗಾಗಲೇ ಸಖತ್ ಸದ್ದು ಮಾಡ್ತಾ ಇದ್ದು, ರವೀನಾ ಟಂಡನ್ ಆಗಮನ ಇನ್ನೂ ಹೈಪ್ ಕ್ರಿಯೇಟ್ ಮಾಡಲಿದೆ.ಸಂಜತ್ ದತ್ ಕೂಡ ನಟಿಸ್ತಾ ಇದೆ. ಹೀಗಾಗಿ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ.