ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ದಿನಾಂಕ ಫಿಕ್ಸ್

Date:

ಕೊರೋನಾವೈರಸ್ ಬರದೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಕೆಜಿಎಫ್ ಚಾಪ್ಟರ್ ೨ ಬಿಡುಗಡೆಯಾಗಿ ದೊಡ್ಡದೊಂದು ಇತಿಹಾಸವನ್ನು ಸೃಷ್ಟಿಸುತ್ತಿತ್ತು. ಆದರೆ ಕೊರೋನಾವೈರಸ್ ಆ ಕೆಲಸಕ್ಕೆ ತಣ್ಣೀರು ಎರಚಿತು. ಇತ್ತೀಚಿಗಷ್ಟೆ ಟೀಸರ್ ಬಿಡುಗಡೆ ಮಾಡಿ ದೊಡ್ಡದೊಂದು ಇತಿಹಾಸವನ್ನು ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಗಾಗಿ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.

 

 

ಕೆಜಿಎಫ್ ೨ ಚಿತ್ರದ ಬಿಡುಗಡೆ ಯಾವಾಗ ಎಂದು ಅಪಾರ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕಾಲ ಕೂಡಿಬಂದಿದೆ. ಹೌದು ಹೊಂಬಾಳೆ ಫಿಲ್ಮ್ಸ್ ಇಂದು ಸಂಜೆ 6.32 ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಅಪ್ ಡೇಟ್ ಒಂದನ್ನ ನೀಡಲು ಮುಂದಾಗಿದೆ.

 

 

ಇನ್ನೂ ಈ ಅಪ್ ಡೇಟ್ ಕೆಜಿಎಫ್ ಚಾಪ್ಟರ್ 2ಚಿತ್ರದ ಬಿಡುಗಡೆಯ ದಿನಾಂಕದ ಘೋಷಣೆ ಕುರಿತು ಇರಲಿದೆ ಎಂಬುದು ಗಾಂಧಿನಗರದ ಟಾಕ್. ಹೌದು ಇಂದು ಸಂಜೆ ಕೆಜಿಎಫ್ ಚಾಪ್ಟರ್ 2ಚಿತ್ರದ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಲಿದೆ ಚಿತ್ರತಂಡ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ. ಕನ್ನಡ ಮತ್ತು ತೆಲುಗಿನ ಹಲವಾರು ದೊಡ್ಡ ಚಿತ್ರಗಳು ಈಗಾಗಲೇ ಬಿಡುಗಡೆಯ ದಿನಾಂಕವನ್ನ ಅನೌನ್ಸ್ ಮಾಡಿದ್ದು ಇದೀಗ ಕೆಜಿಎಫ್ ಚಾಪ್ಟರ್ 2ಸಹ ಬಿಡುಗಡೆಯ ದಿನಾಂಕವನ್ನ ಅನೌನ್ಸ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

 

ಇನ್ನೂ ಬಲ್ಲ ಮೂಲಗಳ ಪ್ರಕಾರ ಕೆಜಿಎಫ್ ಚಾಪ್ಟರ್ 2ಚಿತ್ರದ ಬಿಡುಗಡೆಯ ದಿನಾಂಕ ಜೂನ್ ಅಥವಾ ಜುಲೈ ತಿಂಗಳು ಎನ್ನಲಾಗುತ್ತಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...