No menu items!
12.4 C
Munich
Wednesday, April 29, 2026

ತೆಲುಗಿನಲ್ಲಿ ಡಿ ಬಾಸ್ ಗೆ ಅವಮಾನ! ಪ್ರತಿಯೊಬ್ಬ ಕನ್ನಡಿಗ ಈ ಸುದ್ದಿ ಓದಲೇಬೇಕು..

Must read

ಕರ್ನಾಟಕದಲ್ಲಿ ಪರಭಾಷೆಯ ಚಿತ್ರಗಳುಬಿಡುಗಡೆಯಾಗುತ್ತವೆ ಎಂದರೆ ಚಿತ್ರಗಳಿಗೆ ಇಲ್ಲಿ ಯಾವುದೇ ಅಡ್ಡಿಗಳು ಇರುವುದಿಲ್ಲ. ಆದರೆ ಅದೇ ಒಂದು ಕನ್ನಡ ಚಿತ್ರ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗುತ್ತದೆ ಎಂದರೆ ಆ ಕನ್ನಡ ಚಿತ್ರಕ್ಕೆ ಹಲವಾರು ಅಡ್ಡಿ ಆತಂಕಗಳು ಉಂಟಾಗುತ್ತವೆ. ಹೌದು ಡಿ ಬಾಸ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಸಹ ಇದೀಗ ಉಂಟಾಗಿರುವುದು ಅದೇ ರೀತಿಯ ಸಮಸ್ಯೆ .

 

ನಿಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಸಹಾ ಡಬ್ ಆಗಿ ಬಿಡುಗಡೆ ಆಗಲು ರೆಡಿಯಾಗಿದೆ. ಆದರೆ ರಾಬರ್ಟ್ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ಸಹ ದೊಡ್ಡದೊಂದು ಅಡ್ಡಿ ಎದುರಾಗಿದೆ. ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರಗಳ ಮುಂದೆ ರಾಬರ್ಟ್ ಚಿತ್ರಕ್ಕೆ ಅತಿ ಕಡಿಮೆ ಚಿತ್ರಮಂದಿರಗಳು ಮತ್ತು ಅತಿ ಕಡಿಮೆಯ ಪ್ರದರ್ಶನಗಳನ್ನು ನೀಡಲಾಗುತ್ತಿದೆ.

 

 

ರಾಬರ್ಟ್ ಚಿತ್ರ ಬಿಡುಗಡೆ ಮಾಡಲು ಮುಂದಾಗಿರುವ ಚಿತ್ರತಂಡಕ್ಕೆ ಲಿಖಿತ ರೂಪದ ಹಲವಾರು ನಿಯಮಾವಳಿಗಳನ್ನು ಆ ರಾಜ್ಯಗಳು ಹಾಕಿವೆ. ತೆಲುಗಿನ ಚಿಕ್ಕ ಚಿತ್ರಗಳಿಗೂ ಸಹ ಎಫೆಕ್ಟ್ ಆಗದ ರೀತಿಯಲ್ಲಿ ಕನ್ನಡ ಚಿತ್ರಗಳನ್ನ ಬಿಡುಗಡೆ ಮಾಡಬೇಕು ಎಂಬುದು ಅಲ್ಲಿನ ನಿಯಮ. ಇದೀಗ ರಾಬರ್ಟ್ ಗೂ ಸಹ ಅದೇ ರೀತಿಯ ರೂಲ್ಸ್ ಹಾಕಲಾಗಿದೆ. ಇದರಿಂದ ಚಿತ್ರತಂಡ ಬೇಸತ್ತಿದೆ.

 

 

ನಮ್ಮ ರಾಜ್ಯದಲ್ಲಿ ಮಾತ್ರ ತೆಲುಗು ಚಿತ್ರಗಳಿಗೆ ಯಾವುದೇ ರೀತಿಯ ಅಡ್ಡಿ ಯನ್ನ ಮಾಡಲಾಗುವುದಿಲ್ಲ. ಕನ್ನಡದ ಯಾವುದೇ ಚಿತ್ರವಿರಲಿ ತೆಲುಗಿಗೂ ಸಹ ಮುಕ್ತ ಬಿಡುಗಡೆಯ ಅವಕಾಶವನ್ನು ಇಲ್ಲಿ ಒದಗಿಸಲಾಗಿದೆ ಆದರೆ ನಮ್ಮ ಚಿತ್ರಗಳಿಗೆ ಅಲ್ಲಿ ಹಲವಾರು ನಿಯಮಗಳನ್ನು ಹಾಕಿ ಬಿಡುಗಡೆ ಮಾಡಲು ಅವಕಾಶ ನೀಡುತ್ತಾರೆ. ಈ ನೀತಿಯ ವಿರುದ್ಧ ಇದೀಗ ದರ್ಶನ್ ಅವರು ದನಿ ಎತ್ತಲು ಎದುರಾಗಿದ್ದು ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article