ಹೆಣ್ಣು ಮುಟ್ಟಾಗುವುದು ಸಹಜ ಕ್ರಿಯೆ. ಅದ್ರಲ್ಲಿ ಯಾವುದೇ ಅನುಮಾನ ಬೇಡವೇ ಬೇಡ. ಕೆಲವೊಮ್ಮೆ ನಾಲ್ಕು ದಿನ ಬೇಗ ಆಗುತ್ತೆ ಇನ್ನು ಕೆಲವೊಮ್ಮೆ ಲೇಟ್ ಕೂಡ ಆಗುತ್ತೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾದ್ರೆ ದಿನಾಂಕದ ಮುಂಚಿತವಾಗಿಯೇ ಪಿರಿಯಡ್ಸ್ ಆಗುತ್ತೆ. ಆ ಅ ಸಮಯದಲ್ಲಿ ಹೆಣ್ಣು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹೊಟ್ಟೆ ನೋವು, ವಾಂತಿ, ಸುಸ್ತು, ಇನ್ನಿತರ ಸಮಸ್ಯೆಗಳು ಮುಟ್ಟಾಗುವ ಹೆಣ್ಣನ್ನು ಕಾಡುತ್ತವೆ. ಆದ್ರೆ ಪಿರಿಯಡ್ಸ್ ಲೇಟ್ ಆಗಿ ಆಗೋದು ಯಾಕೆ ಗೊತ್ತಾ..? ಮುಂದೆ ಓದಿ
ಮೊದಲನೆಯದಾಗಿ ಮಹಿಳೆಯರು ಮುಖ್ಯವಾಗಿ ತೂಕ ನಿಯಂತ್ರಿಸಿಕೊಳ್ಳಬೇಕು. ದೇಹ ತೂಕ ನಿಯಂತ್ರಣದಲ್ಲಿ ಇರದೇ ಹೋದ್ರೆ ಬೊಜ್ಜು ತುಂಬಿ ಹಾರ್ಮೋನ್ ಅಸಮತೋಲನದಿಂದ ಸಮಸ್ಯೆ ಉಂಟಾಗುತ್ತೆ. ಒತ್ತಡ ಅಥವಾ ಸ್ಟ್ರೆಸ್ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಆದರೆ ಒತ್ತಡ ತುಂಬಾ ಹೆಚ್ಚಾದರೆ ಹಾರ್ಮೋನ್ ಸಮತೋಲನ ತಪ್ಪಿ ಕೆಲವೊಮ್ಮೆ ಮುಟ್ಟು ತಡವಾಗಿ ಆಗಬಹುದು ಅಥವಾ ಕೆಲವೊಮ್ಮೆ ಬೇಗವೇ ಆಗಬಹುದು. ಕೆಲಸದಲ್ಲಿ ಶಿಫ್ಟ್ ಪ್ರಕಾರ ಕೆಲಸ ಮಾಡುವವರಲ್ಲೂ ಋತುಸ್ರಾವದಲ್ಲಿ ಏರುಪೇರಾಗುತ್ತೆ. ಅದ್ರಲ್ಲೂ ನೈಟ್ ಡುಟಿ ಮಾಡುವವರಿಗೆ ಪಿರಿಯಡ್ಸ್ ಲೇಟ್ ಆಗುತ್ತೆ. ನೋವು ನಿವಾರಕ ಗುಳಿಗೆ ಅಥವಾ ಹೆಚ್ಚಾಗಿ ಔಷಧಿ ಸೇವಿಸಿದವರಿಗೂ ಪಿರಿಯಡ್ಸ್ ತಡವಾಗಿ ಆಗುತ್ತದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾದ್ರೆ ದಿನಾಂಕಕ್ಕಿಂತ ನಾಲ್ಕೈದು ದಿನ ಬೇಗ ಆಗಬಹುದು.
ಕೆಲವೊಮ್ಮೆ ಮಹಿಳೆಯರು ಲೇಟ್ ಆಗಿ ಮುಟ್ಟಾಗುತ್ತಾರೆ ಯಾಕೆ ಗೊತ್ತಾ.. ?
Date: