ಸೌತ್ ಏಷ್ಯಾದವರಿಗೇ ಹಾರ್ಟ್ ಪ್ರಾಬ್ಲಂ ಜಾಸ್ತಿ ಯಾಕೆ..?

0
69

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿಗೇ ಹಾರ್ಟ್ ಪ್ರಾಬ್ಲಂ ಬರೋದು ಹೆಚ್ಚಾಗಿದೆ. ಅದ್ರಲ್ಲೂ ಬೇರೆ ಬೇರೆ ದೇಶಗಳಿಗೆ ಹೋಲಿಸಿದ್ರೆ 10 ವರ್ಷದಲ್ಲೇ ದಕ್ಷಿಣ ಏಷ್ಯನ್ನರಲ್ಲಿ ಹಾರ್ಟ್ ಪ್ರಾಬ್ಲಂ ಜಾಸ್ತಿ ಕಾಣಿಸಿಕೊಳ್ಳುತ್ತಂತೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ ಹಾಗೂ ಮಾಲ್ಡೀವ್ಸ್ನ ದೇಶ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಅದಕ್ಕೆ ಕಾರಣವೇನು ಗೊತ್ತಾ..?
ದಕ್ಷಿಣ ಏಷ್ಯನ್ನರಲ್ಲಿ ಹಾರ್ಟ್ ಪ್ರಾಬ್ಲಂ ಕಾಣಿಸಿಕೊಳ್ಳೋದಕ್ಕೂ ಒಂದು ಕಾರಣವಿದೆಯಂತೆ. ಅದೇನಪ್ಪಾ ಅಂದ್ರೆ ದೇಹದಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವುದು. ದೇಹದಲ್ಲಿ ಅತಿ ಹೆಚ್ಚು ಕೊಲೆಸ್ಟೆರಾಲ್ ಇರುವುದು ಸೌತ್ ಏಷಿಯಾದ ಜನರಲ್ಲಿ ಅಂತಾ ಸಂಶೋಧನೆಯಿಂದ ತಿಳಿದಿದೆ. ಲಿವರ್, ಹೊಟ್ಟೆ, ಸ್ನಾಯುಗಳು ಈ ಅಂಗಗಳಲ್ಲಿ ಕೊಲೆಸ್ಟೆರಾಲ್ ಹೆಚ್ಚಾದರೆ ಅದು ಚರ್ಮದ ಅಡಿಗಷ್ಟೇ ಸ್ಟೋರ್ ಆಗುವ ಫ್ಯಾಟ್ಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ.
ದೇಹದಲ್ಲಿ ಬೊಜ್ಜು ಹೆಚ್ಚಾದಾಗ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆ ಬಿಳಿಯರಿಗಿಂತ ಸೌತ್ ಏಷಿಯನ್ನರಿಗೆ ಎರಡು ಪಟ್ಟು ಹೆಚ್ಚು ಸಾಧ್ಯತೆ ಇರುತ್ತದಂತೆ. ಅಷ್ಟೇ ಅಲ್ಲ ಇದ್ರಿಂದ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಹೆಚ್ಚಾಗಿ ಸೌತ್ ಏಷಿಯನ್ನರನ್ನು ಕಾಡುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಸಾಮಾನ್ಯ ತೂಕ ಹೊಂದಿರುವವರಲ್ಲಿ ಶೇ.44ರಷ್ಟು ದಕ್ಷಿಣ ಏಷ್ಯನ್ನರಲ್ಲಿ ಹೈ ಬಿಪಿ, ಕೊಲೆಸ್ಟೆರಾಲ್, ಹೈಪರ್ಟೆನ್ಷನ್ನಂಥ ಸಮಸ್ಯೆಗಳು ಕಂಡುಬಂದರೆ, ಸಾಮಾನ್ಯ ತೂಕದ ಶೇ.21ರಷ್ಟು ಬಿಳಿಯರಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ. ಒಟ್ಟಾರೆಯಾಗಿ ಇವೆಲ್ಲಾ ಕಾರಣಗಳಿಂದ ಸೌತ್ ಏಷಿಯನ್ನರಿಗೆ ಹಾರ್ಟ್ ಪ್ರಾಬ್ಲಂ ಹೆಚ್ಚು.

LEAVE A REPLY

Please enter your comment!
Please enter your name here