ದೇಶದಾದ್ಯಂತ ಕೊರೋನಾವೈರಸ್ ತನ್ನ ಆರ್ಭಟವನ್ನು ಮುಂದುವರಿಸಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ತನ್ನ ರೌದ್ರ ನರ್ತನವನ್ನು ಮುಂದುವರಿಸಿರುವ ಕೊರೋನಾವೈರಸ್ ದಿನೇ ದಿನೇ ಬಲಿ ಪಡೆಯುತ್ತಿದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು ಜನರ ಜೀವ ಉಳಿಸಲು ರಾಜ್ಯ ಸರ್ಕಾರ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಇನ್ನು ಕೇಂದ್ರ ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಸಹ ಕೊರಾನ್ ಲಸಿಕೆ ಒದಗಿಸುವ ಯೋಜನೆಯನ್ನು ಹಾಕಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಕರ್ನಾಟಕದಲ್ಲಿ ಕೊರೋನಾ ಲಸಿಕೆ ಅಭಾವ ಉಂಟಾಗಿದೆ. ಕೊರೊನಾ ಲಸಿಕೆ ಇಲ್ಲದೇ ಇರುವ ಕಾರಣದಿಂದ ರಾಜ್ಯದ ಯುವ ಪೀಳಿಗೆಗೆ ಸದ್ಯಕ್ಕೆ ಕೊರೊನಾ ಲಸಿಕೆ ನೀಡುವುದಿಲ್ಲ ಮುಂದಿನ ದಿನಗಳಲ್ಲಿ ಲಸಿಕೆಯ ಒದಗಿಸುತ್ತೇವೆ ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳಿಕೆ ನೀಡಿದೆ.

ಇಂತಹ ಸಮಯದಲ್ಲಿ ವಿರೋಧ ಪಕ್ಷದ ನಾಯಕರೆಲ್ಲರೂ ಸೇರಿ ಕಾಂಗ್ರೆಸ್ ಸಮಿತಿಯಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೂರು ಕೋಟಿ ದೇಣಿಗೆಯನ್ನು ನೀಡುವುದರ ಮೂಲಕ ಕೊರೊನಾ ಲಸಿಕೆ ಖರೀದಿಸಿ ಎಂದು ಮನವಿ ಮಾಡಿದೆ. ಇನ್ನು ಬಿಜೆಪಿ ಸರ್ಕಾರದ ಬಳಿ ಹಣವಿದೆ, ಆದರೆ ಲಸಿಕೆ ಉತ್ಪಾದನೆಯಾಗುತ್ತಿಲ್ಲ ಅಷ್ಟೆ, ಲಸಿಕೆ ಉತ್ಪಾದನೆ ಆಗುತ್ತಿಲ್ಲ ಎಂಬ ಸಮಯವನ್ನು ನೋಡಿ ದಾನದ ನಾಟಕ ಮಾಡಬೇಡಿ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ನಮ್ಮ ಬಳಿ ಹಣವಿದೆ ಲಸಿಕೆ ಉತ್ಪಾದನೆ ಯಾದ ಸಮಯಕ್ಕೆ ಖರೀದಿಸಿ ಜನರಿಗೆ ಲಸಿಕೆ ನೀಡುತ್ತೇವೆ ಲಸಿಕೆ ಎಂಬ ವಿಚಾರ ತಿಳಿದು ನೂರು ಕೋಟಿ ನೀಡುವ ಡ್ರಾಮಾ ಮಾಡಬೇಡಿ ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ.






