ಕೊರೊನಾ ರೂಪಾಂತರಿಗಳು ಗಾಳಿಯಲ್ಲೂ ಹರಡುತ್ತವೆ!

0
33

ಕೊರೊನಾ ರೂಪಾಂತರಿಗಳು ಗಾಳಿಯಲ್ಲಿ ಹರಡಬಲ್ಲಷ್ಟು ಸಮರ್ಥವಾಗುತ್ತಿವೆ. ಹೀಗಾಗಿ ಜನರು ಕೊರೊನಾ ಲಸಿಕೆಯನ್ನು ಪಡೆಯುವುದರ ಜೊತೆಗೆ ಬಿಗಿಯಾಗಿ ಮಾಸ್ಕ್‌ ಧರಿಸುವುದು ಹಾಗೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ವಾಷಿಂಗ್ಟನ್‌ನಲ್ಲಿ ನಡೆದ ಈಚಿನ ಅಧ್ಯಯನವೊಂದು ತಿಳಿಸಿದೆ.

ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಈ ರೂಪಾಂತರಗಳು ಸಕ್ರಿಯವಾಗಿರುವುದು ಕಂಡುಬಂದಿದೆ. ಜೊತೆಗೆ ಗಾಳಿಯಲ್ಲಿ ಹರಡುವ ಸಾಮರ್ಥ್ಯವನ್ನು ಇವು ಹೆಚ್ಚಿಸಿಕೊಳ್ಳುತ್ತಿವೆ ಎಂದು ಅಧ್ಯಯನ ಹೇಳಿದೆ.

 

ಅಮೆರಿಕ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ನಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಕೊರೊನಾ ಸೋಂಕಿತರು ಉಸಿರಾಡುವ ಗಾಳಿಯಲ್ಲಿ ಸೋಂಕು ಇರುತ್ತದೆ ಹಾಗೂ ಗಾಳಿ ಮೂಲಕ ಬೇರೆಯವರಿಗೂ ಸುಲಭವಾಗಿ ತಗುಲುತ್ತದೆ. ಆಲ್ಫಾ ರೂಪಾಂತರ ಸೋಂಕು 43-100 ಪಟ್ಟು ಹೆಚ್ಚಿನ ವೇಗದಲ್ಲಿ ಗಾಳಿಯ ಮೂಲಕ ಮತ್ತೊಬ್ಬರಿಗೆ ಹರಡಬಲ್ಲದು ಎಂದು ಅಧ್ಯಯನ ವರದಿ ಹೇಳಿದೆ.

‘ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್‌’ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, ‘ಮಾಸ್ಕ್‌ ಧರಿಸುವುದರಿಂದ ಸೋಂಕಿತರ ಮೂಲಕ ಸೋಂಕಿನ ಕಣ ಗಾಳಿಯಲ್ಲಿ ಹರಡುವುದನ್ನು ಅರ್ಧದಷ್ಟು ತಪ್ಪಿಸಬಹುದು’ ಎಂದು ಮೇರಿಲ್ಯಾಂಡ್‌ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ವಿಭಾಗದ ಪ್ರೊ. ಡಾನ್ ಮಿಲ್ಟನ್ ಹೇಳಿದ್ದಾರೆ.

ಆಲ್ಫಾ ಗಾಳಿಯಲ್ಲಿ ಹೆಚ್ಚು ವೇಗಿಯಾಗಿ ಹರಡಬಲ್ಲದು. ಡೆಲ್ಟಾ ರೂಪಾಂತರ ಆಲ್ಫಾಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ. ಹೀಗಾಗಿ ಮಾಸ್ಕ್‌ ಧಾರಣೆ ಅತ್ಯವಶ್ಯಕ ಎಂದು ಹೇಳಿದೆ.

LEAVE A REPLY

Please enter your comment!
Please enter your name here