ಅಮೆರಿಕದ ನ್ಯಾಷನಲ್ ಪಾರ್ಕ್ ನಲ್ಲಿ ಅಕ್ಟೋಬರ್ 27 ರಂದು ಬೇಸ್ಬಾಲ್ ಪಂದ್ಯ ನಡೆಯುತ್ತಿತ್ತು. ಅಮೆರಿಕ ದೇಶದಲ್ಲಿ ಬೇಸ್ ಬಾಲ್ ಕ್ರೀಡೆಗೆ ಅಪಾರವಾದ ಅಭಿಮಾನಿ ಬಳಗ ಇದೆ ಹೀಗಾಗಿ ಸ್ಟೇಡಿಯಂ ತುಂಬಾ ಕಿಕ್ಕಿರಿದ ಜನಸಾಗರ ಸೇರಿತ್ತು. ಇನ್ನು ಪಂದ್ಯ ನಡೆಯುವ ವೇಳೆ ಅಭಿಮಾನಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಕಾಮನ್ ಹೀಗೆಯೇ ಆ ಕ್ರೀಡಾಂಗಣದಲ್ಲಿಯೂ ಸಹ ಅಭಿಮಾನಿಗಳನ್ನು ಸೆರೆ ಹಿಡಿಯಲು ಅವರತ್ತ ಕ್ಯಾಮೆರಾವನ್ನು ಫೋಕಸ್ ಮಾಡಿದಾಗ ಪಂದ್ಯ ವೀಕ್ಷಿಸಲು ಬಂದಿದ್ದ ಇಬ್ಬರು ಮಾಡೆಲ್ ಗಳಾದ ಜೂಲಿಯಾ ರೋಸ್ ಮತ್ತು ಕೇಯ್ಲಾ ಲಾರೆನ್ ತಮ್ಮ ಬಟ್ಟೆಯನ್ನು ಬಿಚ್ಚಿ ಮೈಯನ್ನು ಕ್ಯಾಮೆರಾಕ್ಕೆ ಪ್ರದರ್ಶಿಸಿದ್ದಾರೆ.
ಈ ದೃಶ್ಯ ಸ್ಟೇಡಿಯಂನ ದೊಡ್ಡ ಪರದೆಯ ಮೇಲೆ ಪ್ರದರ್ಶನ ವಾಗಿದೆ ಹೀಗಾಗಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಇದಾದ ನಂತರ ಪಂದ್ಯದ ಆಯೋಜಕರು ಆ ಇಬ್ಬರು ಮಾಡೆಲ್ಗಳನ್ನು ಬ್ಯಾನ್ ಮಾಡಿದ್ದು ಮುಂದೆ ನಡೆಯುವ ಯಾವುದೇ ಬೇಸ್ ಬಾಲ್ ಪಂದ್ಯಕ್ಕೂ ಇವರಿಗೆ ಪ್ರವೇಶ ನೀಡಬಾರದು ಎಂದು ಆದೇಶ ಹೊರಡಿಸಿದೆ. ಆ ಮಾಡೆಲ್ ಗಳು ಈ ರೀತಿ ಮಾಡಿದ್ದರಿಂದ ಆಟಗಾರರ ಗಮನ ಬೇರೆಡೆ ಹೋಗಿದೆ ಇದರಿಂದ ಆಟದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಗಿದೆ.