ಖಾಸಗಿ ಕಂಪನಿ ಉದ್ಯೋಗಿಗಳಿಗೆ‌ ಶಾಕ್.!

1
113

ಹೊಸದಿಲ್ಲಿ: ಹೊಸ ವೇತನ ನಿಯಮ ಜಾರಿಗೆ ಕೇಂದ್ರ ಸರಕಾರ ಮುಂದಾಗಿದ್ದು, ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಕಂಪನಿಗಳು ತಮ್ಮ ಸಿಬ್ಬಂದಿಗಳ ವೇತನದ ಸ್ವರೂಪದಲ್ಲಿ ಬದಲಾವಣೆ ಮಾಡಬೇಕಿದೆ. ಹೀಗಾದಲ್ಲಿ ಸಿಬ್ಬಂದಿಗಳ ಕೈಗೆ ಸಿಗುವ ವೇತನದ ಪ್ರಮಾಣ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಹೆಚ್ಚಿನ ಖಾಸಗಿ ಕಂಪನಿಗಳು ಮೂಲ ವೇತನವನ್ನು ಒಟ್ಟು ವೇತನದ ಅರ್ಧಕ್ಕಿಂತಲೂ ಕಡಿಮೆ ಇಟ್ಟಿರುತ್ತವೆ. ಇದನ್ನು ಏರಿಕೆ ಮಾಡಬೇಕಾಗಿ ಬಂದಲ್ಲಿ, ಭವಿಷ್ಯ ನಿಧಿ (ಪಿಎಫ್‌) ಪ್ರಮಾಣವನ್ನೂ ಹೆಚ್ಚಿಸಬೇಕಾಗುತ್ತದೆ. ಇದರಿಂದ ಟೇಕ್‌ ಹೋಂ ಸಂಬಳ ಕಡಿಮೆಯಾಗಲಿದೆ. ಆದರೆ ಪಿಂಚಣಿ ನಿಧಿ ಹೆಚ್ಚಲಿದೆ.
ಹೊಸ ನಿಯಮ ಜಾರಿಗೆ ಬರುತ್ತಿದ್ದಂತೆ ಕಂಪನಿಗಳು ತಮ್ಮ ಸಿಬ್ಬಂದಿಗಳ ವೇತನವನ್ನು ಹೊಸ ನಿಯಮಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಬೇಕಿದೆ. ಖಾಸಗಿ ರಂಗದ ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರುವ ಎಲ್ಲಾ ಸಾಧ್ಯತೆ ಇದೆ. ಕಾರಣ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಹೆಚ್ಚಿನ ಪ್ರಮಾಣದ ವೇತನವನ್ನು ಭತ್ಯೆ ರೂಪದಲ್ಲಿಯೇ ನೀಡುತ್ತವೆ.
ಆದರೆ ಈ ನಿಯಮಗಳಿಂದ ಹೆಚ್ಚಿನ ಸಾಮಾಜಿಕ ಭದ್ರತೆ ಸಿಗಲಿದೆ, ಜೊತೆಗೆ ನಿವೃತ್ತಿಯ ವೇಳೆ ಸಿಗುವ ಪ್ರಯೋಜನಗಳು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ ತಿಂಗಳಂತ್ಯಕ್ಕೆ ಕೈಗೆ ಸಿಗುವ ಸಂಬಳದ ಪಾಲು ಮಾತ್ರ ಕಡಿಮೆಯಾಗಲಿದೆ.

ಪಾರ್ಥಿವ್ ಪಟೇಲ್ ನಿವೃತ್ತಿ

ಟೀಂ ಇಂಡಿಯಾ ಹಾಗೂ ಆರ್‍ಸಿಬಿ ತಂಡದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಇಂದು 17 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಗೆ ಅವರು ರಾಜೀನಾಮೆ ಪತ್ರ ನೀಡುವ ಮೂಲಕ ತಾವು ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್‍ಸಿಬಿ ತಂಡದ ಭರವಸೆಯ ಆಟಗಾರನಾಗಿದ್ದ ಪಾರ್ಥೀವ್ ಪಟೇಲ್‍ಗೆ 2013ರ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ ಹಾಗೂ ಭಾರತ ತಂಡದಲ್ಲೂ ಸ್ಥಾನ ಪಡೆಯಲು ಪದೇ ಪದೇ ಎಡವುತ್ತಿದ್ದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್‍ಸಿಬಿ ತಂಡದ ಭರವಸೆಯ ಆಟಗಾರನಾಗಿದ್ದ ಪಾರ್ಥೀವ್ ಪಟೇಲ್‍ಗೆ 2013ರ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ ಹಾಗೂ ಭಾರತ ತಂಡದಲ್ಲೂ ಸ್ಥಾನ ಪಡೆಯಲು ಪದೇ ಪದೇ ಎಡವುತ್ತಿದ್ದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ರಣಜಿ ಪಂದ್ಯಾವಳಿ ನಡೆಸಲು ಬಿಸಿಸಿಐ ನಿರ್ಧರಿಸುತ್ತಿದ್ದ ಬೆನ್ನಲ್ಲೇ ಪಾರ್ಥೀವ್ ಪಟೇಲ್ ಅವರು ನಿವೃತ್ತಿ ಘೋಷಿಸಿರುವುದರಿಂದ ಆ ರಾಜ್ಯಕ್ಕೆ ನಷ್ಟವಾಗಿದೆ.
ಪಾರ್ಥೀವ್ ಪಟೇಲ್‍ರ ನಾಯಕತ್ವದಲ್ಲೇ ಗುಜರಾತ್ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿತ್ತು.
2002ರಲ್ಲಿ ತಮ್ಮ 17ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ ಪಟೇಲ್ 25 ಟೆಸ್ಟ್ ಪಂದ್ಯಗಳಿಂದ 6 ಅರ್ಧಶತಕಗಳ ನೆರವಿನಿಂದ 934 ರನ್ ಗಳಿಸಿದ್ದರೆ, 38 ಏಕದಿನ ಪಂದ್ಯಗಳಿಂದ 4 ಅರ್ಧಶತಕಗಳ ನೆರವಿನಿಂದ 734 ರನ್, 2 ಚುಟುಕು ಪಂದ್ಯಗಳಿಂದ 36 ರನ್ ಗಳಿಸಿದ್ದಾರೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ನಂತರ ಪಾರ್ಥೀವ್ ತಂಡದಲ್ಲಿ ಸ್ಥಾನ ಪಡೆಯಲು ಎಡವಿದ್ದರು.ಉತ್ತಮ ವಿಕೆಟ್ ಕೀಪರ್ ಆಗಿದ್ದ ಪಟೇಲ್ ಟೆಸ್ಟ್‍ನಲ್ಲಿ 62 ಕ್ಯಾಚ್, 10 ಸ್ಟಂಪಿಂಗ್, ಏಕದಿನದಲ್ಲಿ 30 ಕ್ಯಾಚ್, 9 ಸ್ಟಂಪಿಂಗ್ ಹಾಗೂ ಚುಟುಕು ಪಂದ್ಯಗಳಲ್ಲಿ 1 ಕ್ಯಾಚ್ ಪಡೆದಿದ್ದಾರೆ.
ಐಪಿಎಲ್‍ನಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಗಮನ ಸೆಳೆದಿದ್ದ ಪಾರ್ಥೀವ್ ಪಟೇಲ್ ಅವರು ಮುಂಬೈ ಇಂಡಿಯನ್ಸ್, ಆರ್‍ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಸನ್‍ರೈಸರ್ಸ್ ಹೈದ್ರಾಬಾದ್ ಪರವಾಗಿ ಆಡಿದ್ದರು.

ಹೀಗೆ ಮಾಡಿದರೆ ಮತ್ತೆ ಒಂದಾಗಬಹುದು..!

ನಿಮ್ಮ ಸಂಬಂಧ ಮುರಿದು ಬಿದ್ದಿದೆಯೇ.. ಅಥವಾ ಮುರಿದು ಬೀಳುವ ಸೂಚನೆ ಇದೆಯೇ..? ಹಾಗಿದ್ದಲ್ಲಿ ತಪ್ಪದೇ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ. ನೀವು ಇದನ್ನು ಫಾಲೋ ಮಾಡಿದರೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಚೆನ್ನಾಗಿ ಇರಬಹುದು.

ಯಾವುದೇ ಸಂಬಂಧಗಳಲ್ಲಿ ಕೆಲವೊಮ್ಮೆ ಜಗಳ ಸಹಜ, ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಅಂಥಾ ಸಂದರ್ಭಗಳಲ್ಲಿ ಬಹಳ ಎಚ್ಚರಿಕೆವಹಿಸಬೇಕು‌. ದೂರಾದ ಸಂಬಂಧ ಮತ್ತೆ ಹತ್ತಿರವಾಗಬಹುದು.  ಇಲ್ಲಿ ಆ ನಿಟ್ಟಿನಲ್ಲಿ ಕೆಲವೇ ಕೆಲವ ಟಿಪ್ಸ್ ಗಳನ್ನು ನೀಡಲಾಗಿದೆ .


* ನಿಮಗೆ ಯಾವುದಾದರು ಇಷ್ಟವಾಗದೇ ಇದ್ದಾಗ .ನಿಮ್ಮವರನ್ನು ವಿರೋಧಿಸಬೇಕು ಎಂದಾದರೆ ನೀವು ನೇರ ನೇರವಾಗಿ ಜಗಳ ತೆಗೆದು ವಿರೋಧ ವ್ಯಕ್ತಪಡಿಸಬೇಡಿ. ತಾಳ್ಮೆಯಿಂದ ವಿರೋಧಿಸಿ. ಇಷ್ಟವಾದ ತಿಂಡಿ ತಿನ್ನುವ ಮೂಲಕ, ಮೌನವಾಗಿರುವ ಮೂಲಕ ವಿರೋಧ ಮಾಡಿ.

* ನನ್ನ ತಪ್ಪು – ನಿನ್ನ ತಪ್ಪು ಎಂಬ ವಾದ ಬೇಡ .. ಆ ಕ್ಷಣದ ಜಗಳ ಅಲ್ಲೇ ಬಿಟ್ಟು ಬಿಡಿ … ಒಬ್ಬರಾದರೂ ತಲೆಬಾಗಿ … ನಿಮ್ಮ ಸಂಬಂಧ ತಾನೇ ಉಳಿಯುವುದು .

* ಇಲ್ಲವೇ ಜಗಳ ಆಡುವ ಬದಲು ನಿಮ್ಮ ನೋವಿಗೆ, ಬೇಸರಕ್ಕೆ, ಕೋಪಕ್ಕೆ ಕಾರಣ ಏನ್ ಎನ್ನುವುದುನ್ನು ಹೇಳಿಬಿಡಿ. ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಅವರದ್ದು ತಪ್ಪಿದ್ದರೆ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ.

*ಸಂಧಾನ ಅಥವಾ ಕ್ಷಮೆ ಮುಖ್ಯವಾಗುತ್ತದೆ. ಕ್ಷಮಿಸಿ, ಕೆಲವೊಮ್ಮೆ ಸಂಧಾನಕ್ಕೂ ಮುಂದಾಗಿ. ಇದರಿಂದ ನಿಜಕ್ಕೂ ಸಂಬಂಧ ಉಳಿಸಿಕೊಳ್ಳಬಹುದು . ದೂರಾದ ಸಂಬಂಧ ಹತ್ತಿರವೂ ಆಗುತ್ತದೆ .

* ಹಳೆಯದನ್ನು ಮತ್ತೆ ಮತ್ತೆ ಕೆದಕುವುದರಿಂದ ಸಂಬಂಧ ಮತ್ತಷ್ಟು ಹಳಸುತ್ತದೆ ನೀವು ಹಳೆಯದನ್ನು ಮಾತ್ರ ಎಂಥಾ ಸಂದರ್ಭದಲ್ಲಿಯೂ ಕೆದಕ ಬೇಡಿ .

*ಯಾವುದೇ ಮನಸ್ತಾಪವನ್ನು ಮುಂದುವರೆಸಬೇಡಿ. ಕೆಟ್ಟಗಳಿಗೆಯ ಬಗ್ಗೆ ಚಿಂತಿಸಬೇಡಿ. ಪರಸ್ಪರ ಖುಷಿಯಿಂದ ಇರಿ. ಆ ಮೂಲಕ ಸಂಬಂಧ ಉಳಿಸಿಕೊಳ್ಳಿ ..

* ಜೊತೆಯಾಗಿ ಇರಲು ಸಾಧ್ಯವೇ ಇಲ್ಲ ಎಂದಾದಲ್ಲಿ ದೂರವಾಗಿ … ದೂರ ಇರುವಿಕೆಯ ಅನುಭವ ಹತ್ತಿರವಾಗಲು ಬಯಸಿದರೆ ಮನಸ್ಸು ಮಾಡಿ ಮತ್ತೊಂದು ಅವಕಾಶ ತೆಗೆದುಕೊಳ್ಳಿ.

*  ದೂರಾದವರು ವಾಪಸ್ಸು ಬಂದಾಗ .. ಹಳೆದರಿಂದ ಹಠ ಸಾಧಿಸ ಬೇಡಿ , ಒಪ್ಪಿಕೊಳ್ಳಿ ‌‌.. ಅವರಿಗೆ ನಿಮ್ಮ ಮೇಲೆ ಗೌರವ ಹೆಚ್ಚುತ್ತೆ.

ಸಿಪಾಯಿ ನಂಬರ್ 1 ಶ್ರೀಮಂತನಾಗಿದ್ಹೇಗೆ?

ಜೀವನ ಅಂದ್ರೆ ಸಿಹಿ-ಕಹಿ ಎರಡೂ ಇದ್ದದ್ದೇ..! ಸಿಹಿ ಎಲ್ಲರಿಗೂ ಇಷ್ಟ ಆಗುತ್ತೆ.. ಇದೇ ಸ್ವೀಟ್ ಲೈಫ್ ಕೊನೆತನಕ ಇರ್ಲಪ್ಪಾ ಅಂತ ಬೇಡ್ಕೊಳ್ತೀವಿ.! ಒಂದು ವೇಳೆ ಸಿಹಿ ಲೈಫು ಕಹಿ ಆಗ್ಬಿಡ್ತು ಅಂದ್ರೆ ಅದನ್ನು ಫೇಸ್ ಮಾಡೋಕೆ ಆಗಲ್ಲ..! ಆದರೆ ಕಷ್ಟದಿಂದ ಮೇಲೆ ಬಂದೋರು, ಸುಖವನ್ನು ಆಸ್ವಾದಿಸಿದಂತೆಯೇ ಮತ್ತೆ ಕಷ್ಟ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ..! ಯಾಕಂದ್ರೆ ಅವರಿಗ ಕಷ್ಟ ಜೀವನ ನಡೆಸೋದು ಹೆಂಗಂತ ಪ್ರಾಕ್ಟಿಕಲ್ ಆಗಿಯೇ ಹೇಳಿಕೊಟ್ಟಿರುತ್ತೆ..! ಫ್ರೆಂಡ್ಸ್ ಅಪ್ಪನೋ, ಅಜ್ಜನೋ ಮಾಡಿಟ್ಟ ಆಸ್ತಿಯನ್ನು ಕಾಪಾಡಿಕೊಂಡು, ಅವರು ಮಾಡಿಟ್ಟ ದುಡ್ಡನ್ನು ದುಪ್ಪಟ್ಟು ಮಾಡಿ ಶ್ರೀಮಂತರಾಗೋದು ಭಾರಿ ದೊಡ್ಡ ಕೆಲಸವಲ್ಲ..! ಅದೇ ಬಡತನದಲ್ಲಿ ಬೆಂದು ಮೇಲೆ ಬರೋದು ಇದೆಯಲ್ಲಾ ಅದು ದೊಡ್ಡ ಚಾಲೆಂಜ್..! ತುಂಬಾ ಜನರ ಬಗ್ಗೆ ಕೇಳಿದ್ದೇವೆ..!? ಎಂಥೆಂಥಾ ಕಷ್ಟಗಳನ್ನು ಫೇಸ್ ಮಾಡಿ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರಂತ..!
ನಿಮಗೆ ವಾಂಗ್ ಜಿಯನ್ಲಿನ್ ಗೊತ್ತಾ..?! ಇಂಡಿಯಾದಲ್ಲಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಇದ್ದಾರಲ್ಲಾ ಅವರಂತೆಯೆ ಇವರು (ವಾಂಗ್) ಚೀನಾದ ಶ್ರೀಮಂತ..! ಚೀನಾ ಶ್ರೀಮಂತರ ಸಾಲಲ್ಲಿ ಇವರೇ ಸದ್ಯಕ್ಕೆ ನಂಬರ್ 01 ಶ್ರೀಮಂತರು..!
ಭಾರತದ ಮುಕೇಶ್ ಅಂಬಾನಿ ತನ್ನ ಅಪ್ಪ ಧೀರೂಬಾಯಿ ಅಂಭಾನಿ ಕಟ್ಟಿದ್ದ ಸಾಮಾಜ್ಯವನ್ನು ತುಂಬಾನೇ ದೊಡ್ಡದಾಗಿ ಬೆಳೆಸಿದ್ರು. ಅಪ್ಪ ಕಟ್ಟಿದ ಸಾಮಾಜ್ಯವನ್ನು ಇನ್ನೂ ಎತ್ತರಕ್ಕೆ ತಗೊಂಡು ಹೋಗೋದೆಂದ್ರೆ ಅಷ್ಟೊಂದು ಸುಲಭದ ಮಾತಲ್ಲ ಬಿಡಿ..! ಮುಕೇಶ್ ಅಂಬಾನಿ ಕೂಡ ಸಿಕ್ಕಾಪಟ್ಟೆ ಎಫರ್ಟ್ ಹಾಕಿನೇ ಸಂಸ್ಥೆಯನ್ನು ಆಕಾಶದೆತ್ತರಕ್ಕೆ ಏರಿಸಿದ್ದು..! ಆದರೆ ಚೀನಾದ ವಾಂಗ್ ಇದ್ದಾರಲ್ಲಾ ಅವರು ಇವತ್ತು ಕಟ್ಟಿರುವ ಸಾಮ್ರಾಜ್ಯಕ್ಕೆ ಯಾರೂ ಫೌಂಡೇಷನ್ ಹಾಕಿಕೊಟ್ಟಿರಲಿಲ್ಲ..! ಫೌಂಡೇಷನ್ ಹಾಕಿ, ಇಡೀ ಸಾಮಾಜ್ಯವನ್ನು ಕಟ್ಟಿ ಆಳುತ್ತಿರೋದು ಇದೇ ವಾಂಗ್..!
ವಾಂಗ್ ಹುಟ್ಟಿದ್ದು ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ..! ಅವತ್ತು 1954. ಅಕ್ಟೋಬರ್ 24. ವಾಂಗ್ ತಂದೆ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಕೆಲಸ ಮಾಡ್ತಾ ಇದ್ದವರು. ರೆಡ್ ಆರ್ಮಿ (ಇದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸೈನ್ಯ) 1934-35ರ ಅವಧಿಯಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಭಾವಹಿಸಿದ್ದ ಹಿರಿಮೆ ವಾಂಗ್ರ ಅಪ್ಪನದ್ದು..! ಅಪ್ಪನಂತೆ ಮಗ ವಾಂಗ್ ಕೂಡ ಸೇನೆಗೆ ಸೇರ್ಬೇಕಾಗುತ್ತೆ..! ಗಡಿ ಕಾಯೋ ಸಿಪಾಯಿಯಾಗಿ ವಾಂಗ್ ಕೆಲಸಕ್ಕೆ ಸೇರ್ತಾರೆ..! ಆಗಿನ್ನೂ ವಾಂಗ್ಗೆ 15 ವರ್ಷ..! ಆಗಲೆ ಕೊರೆಯುವ ಚಳಿಯಲ್ಲಿ, ಜುಮುಗಟ್ಟುವ ಮಂಜಿನಗಡ್ಡೆಯ ಮೇಲೆ ನಡೆದುಕೊಂಡು ತನಗಿಂತ ಭಾರದ ಬಂದೂಕು, ಇತರೆ ಸಾಮಾಗ್ರಿಗಗಳನ್ನು ಎತ್ಕೊಂಡು ಸೇನಾ ರ್ಯಾಲಿಲಿ 750 ಮೈಲಿ ಹೆಜ್ಜೆ ಹಾಕಿದ್ರು…! ಸಣ್ಣ ವಯಸ್ಸಿನಲ್ಲೇ ಗಡಿ ಕಾಯೋನಾಗಿ ಸೇನೆಗೆ ಸೇರಿದ್ದ ವಾಂಗ್ ಸ್ಟೆಪ್ ಬೈ ಸ್ಟೆಪ್ ಎತ್ತರಕ್ಕೆ ಬೆಳೀತಾ ಸಾಗಿದ್ರು..! ರೆಜಿಮೆಂಟಲ್ ಕಮಾಂಡರ್ ಆಗೋ ತನಕವೂ ಬೆಳೆದು ನಿಂತರು..! ಕ್ಸಿಂಗಾಂಗ್ ಜಿಲ್ಲೇಲಿ ಸುಮಾರು 16 ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆ ಮಾಡಿದ್ರು..! ನಂತರ ಇಷ್ಟೇ ಅಲ್ಲ..! ನಾನೇನಾದರೊಂದು ಹೊಸದನ್ನು ಮಾಡ ಬೇಕಲ್ಲ ಅಂತ ಯೋಚನೆ ಮಾಡಿದ್ರು..! ಆಗ 1988ರಲ್ಲಿ ಹುಟ್ಟು ಕೊಂಡಿದ್ದೇ ಡಲಿಯನ್ ವಾಂಡಾ ಎಂಬ ರಿಯಲ್ ಎಸ್ಟೇಟ್ ಕಂಪನಿ..!
ಇವತ್ತು ವಾಂಗ್ರ ವಾಂಡ ಗ್ರೂಪ್ ಚೀನಾದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಗ್ರೂಪ್ ಆಗಿದೆ..! 134 ಶಾಪಿಂಗ್ ಪ್ಲಾಜಾಗಳು, 82 ಫೈಸ್ಟಾರ್ ಹೋಟೆಲ್ ಗಳು, 213 ಸಿನಿಮಾ ಮಾಲ್ ಗಳು, 99 ಬೇರೆ ಬೇರೆ ರೀತಿಯ ಸ್ಟೋರ್ ಗಳು ವಾಂಗರದ್ದಾಗಿದೆ..! ಅಷ್ಟೇ ಅಲ್ಲದೇ ಜಗತ್ತಿನ ಅತ್ಯಂತ ದೊಡ್ಡ ಥಿಯೇಟರ್ ಎಎಂಸಿ ಥಿಯೇಟರ್ ಕೂಡ ವಾಂಗ್ ಸಾಮ್ರಾಜ್ಯಕ್ಕೇ ಸೇರಿರೋದಾಗಿದೆ..! 2012ರಲ್ಲಿ ಅಮೆರಿಕಾದ ಎಎಂಸಿ ಎಂಟರ್ಟೈನ್ಮೆಂಟ್ ಕಂಪನಿಯನ್ನು ಬರೊಬ್ಬರಿ 205 ಕೋಟಿ ಡಾಲರ್ ಕೊಟ್ಟು ಕೊಂಡು ಕೊಂಡರು ವಾಂಗ್..! ಸ್ಪೇನ್ನ ಎತ್ತರದ ಕಟ್ಟಡಗಳಲ್ಲೊಂದಾದ ಎಡಿಫಿಕಿ ಎಸ್ಟಾನಾವವನ್ನೂ ಕೂಡ ವಾಂಗರ ಡಲಿಯನ್ ವಾಂಡಾ ಸಮೂಹ ಖರೀದಿಸಿದೆ..! 10,000 ಚದರ ಮೀಟರ್ ಜಾಗದಲ್ಲಿ ಒರಿಯಂಟಲ್ ಮೂವಿ ಮೆಟ್ರೋಪಾಲಿಸ್ ಅನ್ನೋ ಸ್ಟೂಡಿಯೋವನ್ನೂ ವಾಂಗ್ ಕಟ್ಟಿದ್ದಾರೆ..! ಇದು ವಿಶ್ವದ್ಲಲೇ ಅತ್ಯಂತ ದೊಡ್ಡ ಸ್ಟೂಡಿಯೋ..! ಹೀಗೆ ತಾನೇ ಡಲಿಯನ್ ವಾಂಡಾ ಎಂಬ ರಿಯಲ್ ಎಸ್ಟೇಟ್ ಗ್ರೂಪ್ ಅನ್ನು ಕಟ್ಟಿ, ಒಂದಾದ ಮೇಲೊಂದು ಹೊಸ ಹೊಸ ಉದ್ಯಮಕ್ಕೆ ಕೈ ಯಶ ಕಂಡರು ವಾಂಗ್..! ಇವತ್ತು ಹೆಂಡತಿ ಲಿನ್ ಸಿಂಗ್ ಹಾಗೂ ಏಕೈಕ ಮಗ ವಾಂಗ್ ಸಿಕಾಂಗ್ ಜೊತೆ ಆರಾಮಾಗಿದ್ದಾರೆ..! ವರ್ಷ 61, ಆದರೂ ಸಾಧಿಸುವ ಛಲ, ಇನ್ನೂ ಎತ್ತರಕ್ಕೆ ಬೆಳೆಯುವ ಹೆಬ್ಬಯಕೆ..! ಇದು ಕಣ್ರೀ ಬತ್ತದ ಉತ್ಸಾಹ ಅಂದ್ರೆ..! ವಾಂಗ್ ಈಸ್ ಗ್ರೇಟ್. ಸದ್ಯಕ್ಕೆ ಚೀನಾದ ನಂಬರ್ 1 ಶ್ರೀಮಂತ ಈ ವಾಂಗ್. ಫೋಬ್ರ್ಸನ ಲೇಟೆಸ್ಟ್ ಪಟ್ಟಿ ಪ್ರಕಾರ ಜಗತ್ತಿನ 29 ನೇ ಶ್ರೀಮಂತ..!
ಒಬ್ಬ ಸಿಪಾಯಿ, ಉದ್ಯಮಿಯಾಗಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದು ಮಾತ್ರವಲ್ಲದೇ ದೇಶದಲ್ಲಿ ನಂಬರ್ 1 ಶ್ರೀಮಂತರಾಗಿದ್ದಾರೆಂದು ಅವರ ಸಾಧನೆಯ ಹಿಂದೆ ಎಷ್ಟೊಂದು ಪರಿಶ್ರಮ ಇರಬೇಡ..!? ಸಾಧಿಸುವ ಛಲ, ಎಡಬಿಡದ ಪ್ರಯತ್ನ ಇದ್ರೆ ಯಾವತ್ತೂ ಸೋಲಲ್ಲ..! ತಡವಾದರೂ ಗೆದ್ದೇ ಗೆಲ್ಲುತ್ತೇವೆ..

 

1 COMMENT

LEAVE A REPLY

Please enter your comment!
Please enter your name here