ನವೆಂಬರ್ ತಿಂಗಳು ಬಂತೆಂದರೆ ಸಾಕು ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಸಹ ಯಾವುದೇ ಭೇದಭಾವ ಇಲ್ಲದೆ ನಾವೆಲ್ಲ ಕನ್ನಡಿಗರು ಎಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹೌದು ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿ ಕರ್ನಾಟಕದಾತ್ಯಂತ ಭುವನೇಶ್ವರಿ ತಾಯಿಯನ್ನು ಆರಾಧಿಸುತ್ತ ಆಚರಣೆ ಮಾಡಲಾಗುತ್ತದೆ. ಇನ್ನು ಈ ವರ್ಷವೂ ಸಹ ತುಸು ಹೆಚ್ಚಾಗಿಯೇ ಕನ್ನಡ ರಾಜ್ಯೋತ್ಸವವನ್ನು ಭರ್ಜರಿಯಾಗಿ ಆಚರಣೆ ಮಾಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾಜ್ಯೋತ್ಸವದ ಭಿನ್ನ ವಿಭಿನ್ನ ಫೋಟೋ ಮತ್ತು ವಿಡಿಯೋಗಳು ಹರಿದಾಡಿದವು. ಆದರೆ ಅತಿ ಹೆಚ್ಚು ವೈರಲ್ ಆಗಿರುವ ವಿಡಿಯೋ ಎಂದರೆ ಪುಟ್ಟ ಮಗುವೊಂದು ಕರ್ನಾಟಕದ ಬಾವುಟವನ್ನು ಹಿಡಿದು ಕರ್ನಾಟಕದ ನಕ್ಷೆಯೊಳಗೆ ಮಲಗಿ ಖುಷಿ ಪಡುತ್ತಿರುವ ವಿಡಿಯೊ.. ಹೌದು ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆ ಧರಿಸಿ ಕೈಯಲ್ಲಿ ಬಾವುಟ ಹಿಡಿದು ಪುಟ್ಟ ಮಗುವೊಂದು ಖುಷಿ ಪಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.