ಗಸಗಸೆ ಬೀಜ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜಗಳೇನು ಗೊತ್ತಾ..?

Date:

ಗಸಗಸೆ ಬೀಜ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜಗಳೇನು ಗೊತ್ತಾ..?

ಸಾಮಾನ್ಯವಾಗಿ ಇದನ್ನು ಹಿಂದಿಯಲ್ಲಿ ಖುಸ್ ಖುಸ್, ತಮಿಳಿನಲ್ಲಿ ಕಸಕಸ, ತೆಲುಗಿನಲ್ಲಿ ಗಸ ಗಸುಲು ಹಾಗೂ ಕನ್ನಡದಲ್ಲಿ ಇದನ್ನು ಗಸಗಸೆ ಬೀಜಗಳು ಎಂದೂ ಕರೆಯಲಾಗುತ್ತದೆ.. ಬನ್ನಿ ಇಂದಿನ ಲೇಖನದಲ್ಲಿ ಈ ಗಸಗಸೆ ಬೀಜಗಳ ಬಗ್ಗೆ ಇನ್ನಷ್ಟು ಪ್ರಯೋಜನಗಳ ಬಗ್ಗೆ ನೊಡೋಣ..
ಮಲಬದ್ಧತೆ ನಿವಾರಣೆ: ಗಸಗಸೆ ಸೇವನೆ ಮಲಬದ್ಧತೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. ಹಾಗೆ ಹೊಟ್ಟೆಯಲ್ಲಿನ ವೇಸ್ಟ್ ಗ್ಯಾಸ್ ಅನ್ನೂ ತೆಗೆದುಹಾಕುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ಗಸಗಸೆ ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ, ಗ್ಯಾಸ್ಟಿçಕ್, ಸಮಸ್ಯೆಗಳನ್ನು ನಿವಾರಿಸುತ್ತದೆ. ಏಕೆಂದರೆ ಇದರಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ.
ನಿದ್ರಾಹೀನತೆ: ಗಸಗಸೆಯನ್ನು ಬೆಚ್ಚಗಿನ ಹಾಲು, ಸಕ್ಕರೆಯೊಂದಿಗೆ ತೆಗೆದುಕೊಳ್ಳುವುದರಿಂದ ನಿದ್ರಾಹೀನತೆ ಗುಣಪಡಿಸಬಹುದು. ಇದನ್ನು ಸೇವಿಸುವುದರಿಂದ ಸ್ನಾಯುಗಳು ಶಾಂತವಾಗಿರಿಸಿ ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಅಂದರೆ ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನಿಮಗೆ ನಿದ್ದೆ ಬರುವಂತೆ ಮಾಡುತ್ತದೆ. ಮಲಗುವ ಒಂದು ಗಂಟೆಯ ಮೊದಲು ಹಾಲಿನಲ್ಲಿ ಗಸಗಸೆಯನ್ನು ಸೇರಿಸಿ ಕುಡಿದರೆ ನಿದ್ರೆ ಉತ್ತಮವಾಗಿ ಮಾಡಬಹುದು.
ರೋಗನಿರೋಧಕ ಶಕ್ತಿ: ಗಸಗಸೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಸತುವು ಸಮೃದ್ಧವಾಗಿದ್ದು, ಚಯಾಪಚಯ ಕ್ರಿಯೆಯನ್ನು ಬಲಪಡಿಸಿ, ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಹಲವಾರು ದೀರ್ಘಕಾಲದ ಕಾಯಿಲೆ ಗಳಿಂದ ರಕ್ಷಿಸುತ್ತದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸಿ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ದೂರಮಾಡುತ್ತದೆ.
ಬಂಜೆತನಕ್ಕೆ ಚಿಕಿತ್ಸೆ: ಗಸಗಸೆ ಸೇವನೆ ಮಹಿಳೆಯರಲ್ಲಿ ಬಂಜೆತನ ನಿವಾರಿಸುವುದಲ್ಲದೆ, ಸಂತಾನೋತ್ಪತ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜೊತೆಗೆ ಇದರ ಸೇವನೆಯು ಲೈಂಗಿಕ ಆರೋಗ್ಯವನ್ನು ಹೆಚ್ಚಿಸಿ, ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಹೃದಯ: ಹೃದಯದ ಆರೋಗ್ಯಕ್ಕೆ ಬೇಕಾದ ಎಲ್ಲಾ ಗುಣಗಳು ಇದರಲ್ಲಿದೆ. ಕಬ್ಬಿಣದ ಅಂಶ ಹೇರಳವಾಗಿದ್ದು ರಕ್ತ ಶುದ್ಧೀಕರಿಸುತ್ತದೆ. ಜೊತೆಗೆ ಕೆಂಪು ರಕ್ತ ಕಣಗಳು ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆಹಾರದ ಫೈಬರ್ ಮತ್ತು ಓಲಿಕ್ ಆಮ್ಲದ ಸಮೃದ್ಧಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಒಮೆಗಾ -೬ ಕೊಬ್ಬಿನಾಮ್ಲಗಳು ಅತ್ಯಂತ ಪ್ರಯೋಜನಕಾರಿಯಾಗಿದ್ದು ಹೃದಯಾಘಾತ, ಹೃದಯ ಕಾಯಿಲೆಗಳು ತಡೆಯುತ್ತದೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು: ರಾಜ್ಯದ...

ಮಧ್ಯಾಹ್ನದ ನಿದ್ದೆ ಒಳ್ಳೆಯದೋ ಕೆಟ್ಟದ್ದೋ? ತಜ್ಞರ ಅಭಿಪ್ರಾಯ ಇಲ್ಲಿದೆ

ಮಧ್ಯಾಹ್ನದ ನಿದ್ದೆ ಒಳ್ಳೆಯದೋ ಕೆಟ್ಟದ್ದೋ? ತಜ್ಞರ ಅಭಿಪ್ರಾಯ ಇಲ್ಲಿದೆ ಮಧ್ಯಾಹ್ನ ಊಟದ ನಂತರ...

ಓಲಾ ಕಂಪನಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಮೂವರ ವಿರುದ್ಧ ದೂರು

ಓಲಾ ಕಂಪನಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಮೂವರ ವಿರುದ್ಧ ದೂರು ಬೆಂಗಳೂರು:...

ಮೂರು KSRTC ಬಸ್ಸುಗಳ ನಡುವೆ ಭೀಕರ ಅಪಘಾತ: 30ಕ್ಕೂ ಹೆಚ್ಚು ಜನರಿಗೆ ಗಾಯ

ಮೂರು KSRTC ಬಸ್ಸುಗಳ ನಡುವೆ ಭೀಕರ ಅಪಘಾತ: 30ಕ್ಕೂ ಹೆಚ್ಚು ಜನರಿಗೆ...