ಅಜೇಯ್ ರಾವ್ ನಾಯಕನಾಗಿ ನಟಿಸಿರುವ ಕೃಷ್ಣ ಟಾಕೀಸ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಸರ್ಕಾರ ಸಿನಿಮಾ ಮಂದಿರಗಳ ಆರಂಭಕ್ಕೆ ಅನುಮತಿ ನೀಡಿದ ಕೂಡಲೇ ಕೃಷ್ಣ ಟಾಕೀಸ್ ಬಿಡುಗಡೆಯಾಗಲಿದೆ.
ಚಿತ್ರ ವೀಕ್ಷಿಸಲು ಸೆನ್ಸಾರ್ ಮಂಡಳಿಗೆ ಅನುಮತಿ ಕೋರಿ ಮೂರು ತಿಂಗಳು ಕಳೆದಿತ್ತು. ಕಾಕತಾಳೀಯ ಎಂಬಂತೆ ಕೃಷ್ಣ ಜನ್ಮಾಷ್ಟಮಿಯಂದೇ ಚಿತ್ರದ ಸೆನ್ಸಾರ್ ಆಗಿದ್ದು ಇಡೀ ಚಿತ್ರತಂಡಕ್ಕೆ ಸಂತಸ ತಂದಿದೆ. ಗೋಕುಲ್ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದ ರಾಜು ಎ.ಹೆಚ್ ನಿರ್ಮಿಸಿದ್ದು, ವಿಜಯಾನಂದ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದ್ದು, ಚಿತ್ರರಸಿಕರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಕೃಷ್ಣ ಟಾಕೀಸ್ ಗಿದೆ. ಲವರ್ ಬಾಯ್ ಪಾತ್ರದಲ್ಲಿ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಜೇಯ್ ರಾವ್ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದಲ್ಲಿ ಅಭಿನಯಿಸಿದ್ದಾರೆ. ಅಪೂರ್ವ, ಸಿಂಧು ಲೋಕನಾಥ್, ಚಿಕ್ಕಣ್ಣ, ಮಂಡ್ಯ ರಮೇಶ್, ಶೋಭರಾಜ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಲೆನಾಡಿನಲ್ಲಿ ‘ಸಲಗ’ದ ಮಳೆ ಹಾಡಿನ ಚಿತ್ರೀಕರಣ..
‘ಅಧೀರ’ ಸಂಜಯ್ ದತ್ ಬಿಟ್ಟು ಶೂಟಿಂಗ್ ಅಖಾಡಕ್ಕೆ ‘ಕೆಜಿಎಫ್’ ಟೀಮ್ ..!
ಜೂನಿಯರ್ ಕ್ರೇಜಿಸ್ಟಾರ್ ಬರ್ತ್ ಡೇಗೆ ಬರಲಿದೆ ಸ್ಪೆಷಲ್ ಟೀಸರ್
ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್