ಗ್ರಾಹಕರಿಗೆ SBI ಬ್ಯಾಂಕ್‌ನಿಂದ ಎಚ್ಚರಿಕೆ!

1
28

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸುವಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ. ಇದೇ ವೇಳೇ ಕಸ್ಟಮರ್ ಕೇರ್ ಸಂಖ್ಯೆಗಳನ್ನು ಹುಡುಕುವಾಗ ಜಾಗರೂಕರಾಗಿರಿ ಅಂತ ತಿಳಿಸಿದ್ದು, ವಂಚನೆ ಮಾಡಲು ಅನೇಕರು ಮೋಸದ ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಸಂಖ್ಯೆಗಳನ್ನು ನೀಡಿರುತ್ತಾರೆ, ಹೀಗಾಗಿ ಅಧಿಕೃತ ಜಾಲತಾಣದಿಂದ ಮಾಹಿತಿಯನ್ನು ಪಡೆದುಕೊಳ್ಳುವಂತೆ ಎಸ್‌ಬಿಐ ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ. 

ಹೆಚ್ಚಿನ ಜನರು ಯಾವುದೋ ಒಂದು ವಿಷಯದ ಬಗ್ಗೆ ಮಾಹಿತಿಗಾಗಿ Google ಅನ್ನು ಹುಡುಕುತ್ತಾರೆ. ಆದರೆ ಗೂಗಲ್‌ನ ಲಾಭ ಪಡೆದು ವಂಚನೆಯ ಪ್ರಕರಣಗಳೂ ಇವೆ. ಅದಕ್ಕಾಗಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 40 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಕಂಡುಬರುವ ಎಸ್‌ಬಿಐ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದಾಗ ಮೋಸ ಹೋಗುವ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

 

ಎಸ್‌ಬಿಐ ಗ್ರಾಹಕರಿಗೆ ಸುತ್ತೋಲೆ ಹೊರಡಿಸಿದೆ. ಅದರಲ್ಲಿ, ಸಾಲಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಎಸ್‌ಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಟೋಲ್ ಫ್ರೀ ಸಂಖ್ಯೆಯನ್ನು ಬಳಸಲು ಅವರು ವಿನಂತಿಸಿದ್ದಾರೆ. ಅಲ್ಲದೆ, ನಿಮ್ಮ ಖಾತೆ ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸಬೇಡಿ. ಯಾವುದೇ ಅಪರಿಚಿತ ಸಂಖ್ಯೆಯಿಂದ ಮಾಹಿತಿ ಪಡೆದರೆ ಬಲಿಪಶುಗಳಾಗಬೇಡಿ. ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ನೀಡಿದರೆ, ನೀವು ವಂಚನೆಯಲ್ಲಿ ಭಾಗಿಯಾಗಬಹುದು ಎಂದು ಎಸ್‌ಬಿಐ ಹೇಳಿದೆ.

1 COMMENT

LEAVE A REPLY

Please enter your comment!
Please enter your name here