ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

Date:

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಮುಖ್ಯ. ಈ ಋತುವಿನಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದ್ದುದರಿಂದ, ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯವೆಂದು ತಜ್ಞರು ಹೇಳಿದ್ದಾರೆ. ವಿಶೇಷವಾಗಿ ಕಡಲೆಕಾಯಿ, ಹೆಸರುಬೇಳೆ, ಬಾದಾಮಿ ಮತ್ತು ಪಿಸ್ತಾ ಸೇರಿದಂತೆ ಡ್ರೈ ಫ್ರೂಟ್ಸ್ ಈ ಕಾಲದಲ್ಲಿ ಸೇವನೆಗೆ ಅತ್ಯುತ್ತಮವೆಂದು ಸಲಹೆ ನೀಡಲಾಗಿದೆ.

ಅನೇಕರಿಗೆ ಪಿಸ್ತಾ ಸೇವನೆ ತೂಕ ಹೆಚ್ಚಿಸುತ್ತದೆ ಎಂಬ ಭ್ರಮೆ ಇರುವುದರಿಂದ ಅವುಗಳನ್ನು ತಿನ್ನುವುದನ್ನು ತಪ್ಪಿಸುವ ಪ್ರವೃತ್ತಿ ಕಂಡುಬರುತ್ತದೆ. ಆದರೆ ಪಿಸ್ತಾ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ದಿನಕ್ಕೆ ಎಷ್ಟು ಪಿಸ್ತಾ ತಿನ್ನಬೇಕು, ಯಾವಾಗ ತಿನ್ನಬೇಕು ಮತ್ತು ಇದರಿಂದ ಏನು ಪ್ರಯೋಜನ ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯ.

ಪಿಸ್ತಾಗಳ ಸೇವನೆಯಿಂದ ಸಿಗುವ ಮುಖ್ಯ ಪ್ರಯೋಜನಗಳು

ಪಿಸ್ತಾ ಪೌಷ್ಠಿಕಾಂಶ, ನಾರಿನ ಅಂಶ ಮತ್ತು ಪ್ರೋಟಿನ್‌ಗಳಿಂದ ಸಮೃದ್ಧ.

ಹಸಿವನ್ನು ನಿಯಂತ್ರಿಸಲು, ಅತಿಯಾದ ಆಹಾರ ಸೇವನೆಯನ್ನು ತಡೆಯಲು ಸಹಾಯ.

ಆರೋಗ್ಯಕರ ತೂಕವನ್ನು ಕಾಪಾಡಲು ಪರಿಣಾಮಕಾರಿ.

ಪಿಸ್ತಾದಲ್ಲಿರುವ ಮೋನೋ ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡಲು ನೆರವಾಗುತ್ತವೆ.

ದೇಹದ ಉರಿಯೂತದ ಸಮಸ್ಯೆಯನ್ನು ತಗ್ಗಿಸಲು ಸಹಕಾರಿ.

ಪಿಸ್ತಾದ ಅತಿಯಾದ ಸೇವನೆಯಿಂದ ಏನಾಗಬಹುದು?

ತಜ್ಞರ ಪ್ರಕಾರ, ಪಿಸ್ತಾ ಮಿತ ಪ್ರಮಾಣದಲ್ಲಿ ತಿನ್ನುವುದರಿಂದ ಮಾತ್ರ ಆರೋಗ್ಯ ಲಾಭವಾಗುತ್ತದೆ. ಅತಿಯಾಗಿ ಸೇವಿಸಿದರೆ ಕೆಳಗಿನಂತಹ ತೊಂದರೆಗಳು ಉಂಟಾಗಬಹುದು:

ಅಜೀರ್ಣ ಸಮಸ್ಯೆಗಳು

ಹೊಟ್ಟೆಗುಬ್ಬು ಅಥವಾ ಆಮ್ಲತೆ

ಕೆಲವರಿಗೆ ಅಲರ್ಜಿ ಪ್ರತಿಕ್ರಿಯೆಗಳು

ತೂಕದ ಏರಿಕೆ ಸಾಧ್ಯತೆ

ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಅನಿರೀಕ್ಷಿತ ತೊಂದರೆಗಳು

ಪ್ರತಿದಿನ ಬೆಳಿಗ್ಗೆ 5–7 ಪಿಸ್ತಾ ತಿನ್ನುವುದು ಅತ್ಯುತ್ತಮ. ದಿನಕ್ಕೆ 7 ಕ್ಕಿಂತ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಪಿಸ್ತಾ ಯಾವ ಸಮಯದಲ್ಲಿ ತಿನ್ನುವುದು ಒಳ್ಳೆಯದು?

ಬೆಳಗ್ಗೆ ಪಿಸ್ತಾ ತಿನ್ನುವುದು ಅತ್ಯುತ್ತಮ.

ಮಧ್ಯಾಹ್ನ ಅಥವಾ ಸಂಜೆ ತಿನ್ನುವುದಕ್ಕಿಂತ ಬೆಳಿಗ್ಗೆ ತಿನ್ನುವುದರಿಂದ ದೇಹಕ್ಕೆ ಪೌಷ್ಠಿಕಾಂಶಗಳ ಶೋಷಣೆ ಉತ್ತಮವಾಗಿ ನಡೆಯುತ್ತದೆ.

ಬೆಳಗಿನ ತಿಂಡಿಗೆ ಮುನ್ನ ಅಥವಾ ನಂತರ 5–7 ಪಿಸ್ತಾಗಳನ್ನು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಲಾಭ.

ಹೀಗಾಗಿ, ಚಳಿಗಾಲದಲ್ಲಿ ಪಿಸ್ತಾ ಸೇರಿದಂತೆ ಡ್ರೈಫ್ರೂಟ್ಸ್ ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭ್ಯವಾಗುತ್ತವೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

Share post:

Subscribe

spot_imgspot_img

Popular

More like this
Related

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ!

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಬಿಹಾರ:...