ಚಿನ್ನಾಭರಣ ಪ್ರಿಯರಿಗೆ ಶಾಕ್ ‌.!

1
94

ಚಿನ್ನಾಭರಣ ಪ್ರಿಯರಿಗೆ ಶಾಕ್ ‌.!

ಕಳೆದ ವಾರ ಸತತ ಇಳಿಕೆ ಕಂಡಿದ್ದ ಚಿನ್ನದ ದರ ಗಣನೀಯವಾಗಿ ಏರಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರಿಗೆ ಶಾಕ್ ಆಗಿದೆ.

ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಸೋಮವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ (22 ಕ್ಯಾರಟ್‌) ಬೆಲೆ 47,620 ರೂಪಾಯಿ ನಿಗದಿಯಾಗಿದೆ. ಕಳೆದ ಶುಕ್ರವಾರ 47,340 ರೂ. ಇತ್ತು. ಇದು ಭಾನುವಾರ 270 ರೂಪಾಯಿ ಏರಿಕೆಯಾಗಿ 47,610 ರೂಪಾಯಿಗೆ ಏರಿಕೆಯಾಗಿತ್ತು. ಇದೀಗ ಸೋಮವಾರ ಮತ್ತೆ 10 ರೂಪಾಯಿ ಏರಿಕೆಯಾಗಿದ್ದು, 47,620 ರೂಪಾಯಿಗೆ ಏರಿಕೆಯಾಗಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತೆ? ಅದು 2 ವರ್ಷದ ಸುದೀರ್ಘ ಪ್ರಕ್ರಿಯೆ..!

ಸುಮಾರು 232 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕದಲ್ಲೀಗ ಅಧ್ಯಕ್ಷೀಯ ಚುನಾವಣಾ ಹಬ್ಬ .‌
ಚುನಾವಣೆ ಕಣದಲ್ಲಿ ರಿಪಬ್ಲಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷದಿಂದ ಜೋಯ್‌ ಬಿಡೆನ್‌ ಅಖಾಡದಲ್ಲಿದ್ದಾರೆ.

ಅಂದಹಾಗೆ ಈ ಅಧ್ಯಕ್ಷ ಚುನಾವಣೆ ಸುಮಾರು 2 ವರ್ಷಗಳ ಸುದೀರ್ಘ ಪ್ರಕ್ರಿಯೆಯಾಗಿದ್ದು , ಇದು ಹೇಗೆ ನಡೆಯುತ್ತದೆ..? ಎಂಬ ಡೀಟೈಲ್ಸ್ ಇಲ್ಲಿದೆ.

ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರು ನೇರವಾಗಿ ಭಾಗವಹಿಸುವುದಿಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರನ್ನು ಅಮೆರಿಕದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಮೆರಿಕದಲ್ಲಿ ದ್ವಿಪಕ್ಷ ಪದ್ಧತಿ ಜಾರಿಯಲ್ಲಿದೆ. ಅಧ್ಯಕ್ಷರನ್ನು ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಆಯ್ಕೆಮಾಡಲಾಗುತ್ತದೆ. ಎಲೆಕ್ಟೋರಾಲ್ ಕಾಲೇಜುಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಸಾರ್ವಜನಿಕರು ಮತ ಹಾಕುತ್ತಾರೆ. ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ಸಿಗುತ್ತದೆ.

ಜನರು ಆಯ್ಕೆ ಮಾಡಿದ ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಎಲೆಕ್ಟೊರೋಲ್ ಕಾಲೇಜುಗಳಲ್ಲಿ 538 ಚುನಾಯಿತ ಪ್ರತಿನಿಧಿಗಳಿದ್ದು, ಅವರನ್ನು ಜನ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಈ ಚುನಾಯಿತ ಪ್ರತಿನಿಧಿಗಳು ಅಮೆರಿಕ ಅಧ್ಯಕ್ಷ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ. ಇದರಲ್ಲಿ ಪ್ರತಿ ರಾಜ್ಯಕ್ಕೆ ಇಬ್ಬರು ಸೆನೆಟರ್‌ಗಳಂತೆ 50 ರಾಜ್ಯಗಳಿಗೆ 100 ಜನ ಸೆನೆಟರ್‌ಗಳು ಸಹ ಇರುತ್ತಾರೆ. ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತ ಬಂದರೆ ಅಧ್ಯಕ್ಷರನ್ನು ಹೌಸ್‌ ಆಫ್‌ ರಿಪ್ರೆಸಿಂಟವ್ಸ್‌ ಅಧ್ಯಕ್ಷರು ಯಾರಾಗಬೇಕೆಂದು ನಿರ್ಧರಿಸುತ್ತಾರೆ. ಉಪಾಧ್ಯಕ್ಷರನ್ನು ಸೆನೆಟ್‌ ಸದಸ್ಯರು ಆಯ್ಕೆ ಮಾಡುತ್ತಾರೆ.

ಅಮೆರಿಕ ನಾಗರಿಕರಾಗಿದ್ದು, 18 ವರ್ಷ ವಯಸ್ಸಿನವರಾಗಿದ್ದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಆದರೆ, ಎಲೆಕ್ಟೊರೋಲ್ ಕಾಲೇಜುಗಳ ಜನಪ್ರತಿನಿಧಿಗಳನ್ನು ಜನ ಆಯ್ಕೆ ಮಾಡಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು.

ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿವೆ. ಆದರೆ, ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಬಂದರೆ ಕೆಲ ರಾಜ್ಯಗಳು ನಿರ್ಣಾಯಕ ಎನಿಸಿಕೊಳ್ಳುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅರಿಜೋನಾ, ಫ್ಲೋರಿಡಾ, ಮಿಚಿಗನ್‌, ಉತ್ತರ ಕ್ಯಾರೋಲಿನ್‌, ಪೆನಿಸ್ಲುವೇನಿಯಾ ಹಾಗೂ ವಿಸ್ಕಾನ್ಸಿನ್‌. ಫ್ಲೋರಿಡಾದಲ್ಲಿ 29, ಪೆನಿಸ್ಲುವೇನಿಯಾದಲ್ಲಿ 20, ಮಿಚಿಗನ್‌ನಲ್ಲಿ 16, ಉತ್ತರ ಕ್ಯಾರೋಲಿನ್‌ನಲ್ಲಿ 15, ಅರಿಜೋನಾದಲ್ಲಿ 11 ಹಾಗೂ ವಿಸ್ಕಾನ್ಸಿನ್‌ನಲ್ಲಿ 10 ಜನಪ್ರತಿನಿಧಿಗಳಿದ್ದಾರೆ..

ಇವುಗಳು ಅಧ್ಯಕ್ಷರ ಬದಲಾವಣೆಗೆ ಹೆಚ್ಚಿನ ಪ್ರಸಿದ್ಧಿ ಪಡೆದಿವೆ. ಜೊತೆಗೆ ಕ್ಯಾಲಿಫೋರ್ನಿಯಾ (55), ಟೆಕ್ಸಾಸ್‌ (38), ನ್ಯೂಯಾರ್ಕ್‌ (29) ರಾಜ್ಯಗಳು ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಲಿವೆ.

ವಿಶ್ವದಲ್ಲಿಯೇ ಸುದೀರ್ಘ ಚುನಾವಣೆ ಪ್ರಕ್ರಿಯೆಯನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೊಂದಿದೆ. ಅಂದಾಜಿನ ಪ್ರಕಾರ ಸುಮಾರು 2 ವರ್ಷಗಳ ಕಾಲ ಈ ಚುನಾವಣೆ ನಡೆಯುತ್ತದೆ ಎನ್ನಲಾಗಿದೆ. 2020ರ ಚುನಾವಣೆಯ ಚಟುವಟಿಕೆಗಳು 2019 ಫೆಬ್ರವರಿಯಿಂದ ಪ್ರಾರಂಭವಾಗಿವೆ. ನವೆಂಬರ್‌ 3ಕ್ಕೆ ಮತದಾನ ನಡೆಯಲಿದೆ. ಮತದಾನದ ಫಲಿತಾಂಶ ಅಂದೇ ಬಂದರೂ, ಅಧ್ಯಕ್ಷರ ಆಯ್ಕೆ ಜನವರಿಯಲ್ಲಿಯೇ ನಡೆಯಲಿದೆ. ಡಿಸೆಂಬರ್‌ 14ರಂದು ಎಲೆಕ್ಟೋರಲ್‌ ಕಾಲೇಜಿನ ಜನಪ್ರತಿನಿಧಿಗಳು ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಸಭೆ ಸೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಜನವರಿ 6, 2021ರಂದು ಕಾಂಗ್ರೆಸ್‌ನಲ್ಲಿ ಎಲೆಕ್ಟೋರಲ್‌ ಮತಗಳ ಎಣಿಕೆ ನಡೆಸಿ ಸೆನೆಟ್‌ ಅಧ್ಯಕ್ಷರು ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ. ಜನವರಿ 20, 2020ರಂದು ಹೊಸ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಕೇವಲ 2 ಬಾರಿ, ಅಂದರೆ 8 ವರ್ಷಗಳ ಕಾಲ ಮಾತ್ರ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದು. ಅಮೆರಿಕದ ಸಂವಿಧಾನಕ್ಕೆ 1951ರಲ್ಲಿ 22ನೇ ತಿದ್ದುಪಡಿ ತರುವ ಮೂಲಕ ಅಧ್ಯಕ್ಷರ ಆಯ್ಕೆಯನ್ನು ಕೇವಲ 2 ಬಾರಿಗೆ ಸೀಮಿತಗೊಳಿಸಲಾಯಿತು. ಇದಕ್ಕೂ ಮುನ್ನ ಫ್ರಾಂಕ್ಲಿನ್‌ ರೂಸ್‌ವೆಲ್ಟ್‌ ಮಾತ್ರ ಎರಡಕ್ಕಿಂತ ಹೆಚ್ಚು ಬಾರಿ ಅಂದರೆ, 1932 ರಿಂದ 1945ರವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅಮೆರಿಕ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷಗಳು ಮಾತ್ರ. ಅಧ್ಯಕ್ಷರಂತೆ ಎಲೆಕ್ಟೋರೊಲ್‌ ಕಾಲೇಜ್‌ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿ ಕೂಡ ನಾಲ್ಕು ವರ್ಷ. ಒಬ್ಬ ವ್ಯಕ್ತಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಬಹುದು.

ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗುವವರು ಅಮೆರಿಕದದಲ್ಲೇ ಜನಿಸಿರಬೇಕು ಮತ್ತು ಅಮೆರಿಕದ ಪೌರನಾಗಿರಬೇಕು. ಕನಿಷ್ಠ 35ವರ್ಷ ವಯೋಮಿತಿ ಇರಬೇಕು.

1 COMMENT

LEAVE A REPLY

Please enter your comment!
Please enter your name here